ಭಾರತದಲ್ಲಿ ಸಿಟ್ರನ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದ್ದು, ಹೊಸ ಕಾರು ಮಾರಾಟ ವಿಭಾಗದಲ್ಲಿ ವಿವಿಧ ಕಂಪನಿಗಳು ವಿನೂತನ ಆವೃತ್ತಿಗಳೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ಸಹ ಭಾರತದಲ್ಲಿ ಸಿ5 ಏರ್‌ಕ್ರಾಸ್ ಐಷಾರಾಮಿ ಎಸ್‌ಯುವಿ ಬಿಡುಗಡೆಯ ನಂತರ ಮತ್ತೊಂದು ಬಹುನೀರಿಕ್ಷಿತ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಐಷಾರಾಮಿ ಸೌಲಭ್ಯಗಳೊಂದಿಗೆ ತುಸು ದುಬಾರಿಯಾಗಿದ್ದರೂ ಸಿ5 ಏರ್‌ಕ್ರಾಸ್ ಏಸ್‌ಯುವಿ ಕಾರು ಮಾದರಿಯು ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗುತ್ತಿರುವ ಸಿ3 ಏರೋಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಸಿಟ್ರನ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದು, ಎಸ್‌ಯುವಿ ಬಿಡುಗಡೆಯ ನಂತರ ಇದೀಗ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೆ ಸಿದ್ದವಾಗಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ ಹೊಸ ಸಿಟ್ರನ್ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯು ಮುಂಬರುವ ಸೆಪ್ಟೆಂಬರ್ 16ರಂದು ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿದ್ದು, ಅನಾವರಣಗೊಂಡ ಮುಂದಿನ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗಾಗಿ ಸಿಟ್ರನ್ ಕಂಪನಿಯು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸುತ್ತಿದ್ದು, ಶೀಘ್ರದಲ್ಲೇ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗನ

ಭಾರತದಲ್ಲಿ ಹೊಸ ಸಬ್ ಫೋರ್ ಮೀಟರ್(4 ಮೀಟರ್ ಉದ್ದಳತೆಗಿಂತಲೂ ಕಡಿಮೆ) ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಸಿ21 ಕೋಡ್ ನೆಮ್ ಆಧರಿಸಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಆಕರ್ಷಕ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರವಾಗಿ ಗ್ರಾಹಕನ್ನು ಸೆಳೆಯಲಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಹೊಸ ಕಾರನ್ನು ಸಿಟ್ರನ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಕುರಿತಾದ ಅಧಿಕೃತ ಡಿಸೈನ್ ಕುರಿತಾದ ವಿನ್ಯಾಸವು ಈಗಾಗಲೇ ಬಹಿರಂಗವಾಗಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ರೋಡ್ ಟೆಸ್ಟಿಂಗ್ ಮಾದರಿಯಲ್ಲಿನ ಬಹುತೇಕ ವಿನ್ಯಾಸವನ್ನು ಉತ್ಪಾದನಾ ಮಾದರಿಯಲ್ಲೂ ಪಡೆದುಕೊಂಡಿದ್ದು, ಹೊಸ ಕಾರು ಮುಂಬರುವ ದಸರಾ ಹೊತ್ತಿಗೆ ಗ್ರಾಹಕರ ಕೈಸೇರುವ ಸಾಧ್ಯತೆಗಳಿವೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಸಿ5 ಏರ್‌ಕ್ರಾಸ್ ಬಿಡುಗಡೆಯ ಭಾರತದಲ್ಲಿ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿರುವ ಸಿಟ್ರನ್ ಕಂಪನಿಯು ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಹೊತ್ತಿಗೆ ಮತ್ತಷ್ಟು ಹೊಸ ಶೋರೂಂ ತೆರೆಯುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳ ಅಭಿವೃದ್ದಿಗೆ ಶೇ.90 ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆ ಮಾಡುವ ಗುರಿಹೊಂದಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಸಿಟ್ರನ್ ಕಂಪನಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ಪ್ರಮುಖ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮಾತ್ರವೇ ಬಿಡುಗಡೆ ಮಾಡುತ್ತಿದ್ದು, 1.2-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಎಂಜಿನ್ ಮಾದರಿಗಳಿಗೆ ಅನುಗುಣವಾಗಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವರ್ಷನ್‌ಗಳನ್ನು ಹೊಂದಿರಲಿದ್ದು, ಸಿ5 ಏರ್‌ಕ್ರಾಸ್ ನಂತರ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಕಾರುಗಳಲ್ಲಿ ಸಿಟ್ರನ್ ಕಂಪನಿಯು ಡೀಸೆಲ್ ಎಂಜಿನ್ ಆಯ್ಕೆ ನೀಡದಿರಲು ನಿರ್ಧರಿಸಿದೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಹೀಗಾಗಿ ಹೊಸ ಸಿ3 ಕಂಪ್ಯಾಕ್ಟ್ ಎಸ್‌ಯುವಿಯು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಕ್ಲೈಮೆಟ್ ಕಂಟ್ರೋಲ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಕನೆಕ್ಟ್ ಕಾರ್ ಟೆಕ್ನಾಲಜಿ ಸೇರಿದಂತೆ ಹಲವಾರು ಪ್ರೀಮಿಂ ಫೀಚರ್ಸ್‌ಗಳಿರಲಿವೆ.

ಭಾರತದಲ್ಲಿ ಸಿಟ್ರನ್ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಹೊಸ ಕಾರಿನ ಮೂಲಕ ಸಿಟ್ರನ್ ಕಂಪನಿಯು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್, ರೆನಾಲ್ಟ್ ಕಿಗರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಸಿಟ್ರನ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಈ ಮೂಲಕ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದ್ದು, ಬೆಲೆ ಆಧಾರದ ಮೇಲೆ ಹೊಸ ಕಾರಿನ ಭವಿಷ್ಯವು ನಿರ್ಧಾರವಾಗಲಿದೆ.

Most Read Articles

Kannada
English summary
Citroen cc21 compact suv will be making its world debut on september 16
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X