ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಮೂಲ ಮಾದರಿಯ ಕ್ರೆಟಾ ಕಾರುಗಳನ್ನು ಖರೀದಿಸಿ ಹೈ ಎಂಡ್ ಮಾದರಿಗಳಿಗೆ ಬದಲಿಸುವ ಪ್ರವೃತ್ತಿ ಹೆಚ್ಚುತ್ತಿದೆ.

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಈಗ ಇದೇ ರೀತಿಯಲ್ಲಿ ಮತ್ತೊಂದು ಮೂಲ ಮಾದರಿಯ ಕ್ರೆಟಾ ಕಾರ್ ಅನ್ನು ಮಾಡಿಫೈಗೊಳಿಸಲಾಗಿದೆ. ಈ ಕಾರಿನಲ್ಲಿ ಮಾಡಲಾದ ಪ್ರತಿಯೊಂದು ಮಾಡಿಫಿಕೇಶನ್ ವಿವರಗಳ ವೀಡಿಯೊವನ್ನು ವಿಐಜಿ ಆಟೋ ಅಕ್ಸೆಸರೀಸ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಮಾಡಿಫೈಗೊಂಡಿರುವ ಈ ಕಾರಿನ ಮುಂಭಾಗದಲ್ಲಿ ಕ್ರೆಟಾದ ಟಾಪ್ ಎಂಡ್ ಮಾದರಿಗಳಲ್ಲಿ ಒಂದಾದ ಎಸ್‌ಎಕ್ಸ್ (ಒ)ನಲ್ಲಿರುವಂತಹ ಗ್ರಿಲ್ ಅಳವಡಿಸಲಾಗಿದೆ. ಸಿಂಗಲ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿಗೆ ಬದಲು ಟ್ರೈಂಗ್ಯುಲರ್ ಎಲ್‌ಇಡಿ ಹೆಡ್‌ಲ್ಯಾಂಪ್‌ ಹಾಗೂ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಸಿಲ್ವರ್ ಗ್ಲೈಡ್ ಪ್ಲೇಟ್'ನೊಂದಿಗೆ ಬಂಪರ್ ಅನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಇದರಿಂದ ಈ ಕಾರು ಮೂಲ ಮಾದರಿ ಕಾರು ಎಂಬುದೇ ತಿಳಿಯುವುದಿಲ್ಲ. ಈ ಕಾರಿನಲ್ಲಿ ಎಲ್‌ಇಡಿ ಫಾಗ್ ಲ್ಯಾಂಪ್ ಅಳವಡಿಸಲಾಗಿದೆ.

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಸೈಡ್ ಪ್ರೊಫೈಲ್'ನಲ್ಲಿರುವ ಮಷಿನ್ ಕಟ್ ಅಲಾಯ್ ವ್ಹೀಲ್'ಗಳು ನೋಡುಗರನ್ನು ಆಕರ್ಷಿಸುತ್ತವೆ. ಇದರ ಜೊತೆಗೆ ಡೋರ್ ಹ್ಯಾಂಡಲ್ ಹಾಗೂ ಡೋರುಗಳ ಕೆಳ ಭಾಗದಲ್ಲಿ ಕ್ರೋಮ್ ಅಂಶವನ್ನು ನೀಡಲಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಈ ಕಾರಿನಲ್ಲಿ ಎಲೆಕ್ಟ್ರಾನಿಕ್ ಆಗಿ ಆಪರೇಟ್ ಮಾಡಬಹುದಾದ ಸೈಡ್ ಮಿರರ್'ಗಳನ್ನು ಅಳವಡಿಸಲಾಗಿದೆ. ಮಾಡಿಫೈಗೊಂಡ ವಿಂಡ್‌ಶೀಲ್ಡ್'ಗಳಲ್ಲಿ ಶಾಖವನ್ನು ಹೀರಿಕೊಳ್ಳುವ ಮೆಂಬ್ರೆನ್'ಗಳನ್ನು ಅಳವಡಿಸಲಾಗಿದೆ.

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಈ ಕಾರಿನಲ್ಲಿ ವೈಸಾರ್ ಹಾಗೂ ರೂಫ್ ರೇಲ್'ಗಳನ್ನು ಸಹ ಅಳವಡಿಸಲಾಗಿದೆ. ಇನ್ನು ಈ ಕಾರಿನ ಹಿಂಭಾಗದಲ್ಲಿ ಕ್ರೆಟಾದ ಟಾಪ್ ಎಂಡ್ ಮಾದರಿಗಳಲ್ಲಿರುವಂತಹ ಟೇಲ್‌ಲೈಟ್‌ ಹಾಗೂ ಬಂಪರ್‌ಗಳನ್ನು ನೀಡಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಮಾಡಿಫೈಗೊಂಡಿರುವ ಈ ಕಾರಿನ ಇಂಟಿರಿಯರ್'ನಲ್ಲಿ ಹೊಳೆಯುವ ಸ್ಕಫ್ ಪ್ಲೇಟ್‌ ಹಾಗೂ 7 ಡಿ ಕಾರ್ಪೆಟ್'ಗಳನ್ನು ಅಳವಡಿಸಲಾಗಿದೆ. ಈ ಮಾಡಿಫೈಗೊಂಡ ಕಾರಿನಲ್ಲಿರುವ ಸ್ಪೀಕರ್‌ಗಳನ್ನು ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹಾಗೂ ರೌಂಡ್ ಲೈಟ್‌ಗಳೊಂದಿಗೆ ಅಪ್ ಡೇಟ್ ಮಾಡಲಾಗಿದೆ.

ಈ ಕಾರಿನ ಸೀಟುಗಳ ವಿನ್ಯಾಸವನ್ನೂ ಬದಲಿಸಲಾಗಿದೆ. ಸೀಟ್ ಕವರ್‌ಗಳನ್ನು ಮೊದಲಿಗಿಂತ ಹೆಚ್ಚು ಮೃದುವಾದ ಕಪ್ಪು ಬಣ್ಣದಲ್ಲಿ ನೀಡಲಾಗಿದೆ. ಈ ಕಾರಿನಲ್ಲಿ ಟಾಪ್ ಎಂಡ್ ಮಾದರಿಯಲ್ಲಿರುವಂತಹ ಸ್ಟೀಯರಿಂಗ್ ವ್ಹೀಲ್ ಹಾಗೂ ಕಪ್ಪು ಬಿಳುಪು ಲೆದರ್ ವ್ರಾಪ್ ಡೋರ್ ಹ್ಯಾಂಡಲ್‌ಗಳನ್ನು ಅಳವಡಿಸಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಹೈ ಎಂಡ್ ಕಾರಿನಂತೆ ಆಕರ್ಷಕವಾಗಿ ಮಾಡಿಫೈಗೊಂಡ ಕ್ರೆಟಾ ಮೂಲ ಮಾದರಿ ಕಾರು

ಈ ಕಾರಿನಲ್ಲಿ ಡೋರುಗಳಿಂದ ಹಿಡಿದು ಟೇಲ್‌ಲೈಟ್‌, ಬಂಪರ್‌ಗಳವರೆಗೆ ಹೈ ಎಂಡ್ ಮಾದರಿಗಳಲ್ಲಿರುವಂತಹ ಫೀಚರ್'ಗಳನ್ನು ಅಳವಡಿಸಲಾಗಿದೆ. ಇದರಿಂದ ಈ ಕಾರು ಮೂಲ ಮಾದರಿಯ ಕಾರು ಎಂದು ಭಾಸವಾಗುವುದೇ ಇಲ್ಲ. ಈ ಕಾರಿನಲ್ಲಿರುವ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಚಿತ್ರಕೃಪೆ: ವಿಐಜಿ ಆಟೋ ಅಕ್ಸೆಸರೀಸ್

Most Read Articles

Kannada
English summary
Creta base variant modified as high end variant. Read in Kannada.
Story first published: Wednesday, May 26, 2021, 11:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X