ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಟೆಸ್ಲಾ (Tesla) ವಿಶ್ವದ ಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದೆ. ಈ ಕಂಪನಿಯ ಮಾಲೀಕರಾದ ಎಲಾನ್ ಮಸ್ಕ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಈ ಬಿಲಿಯನೇರ್ ಉದ್ಯಮಿ ಇತ್ತೀಚಿಗೆ ತಮ್ಮ ಟ್ವಿಟರ್ ಖಾತೆಯ ಪೋಸ್ಟ್‌ನಲ್ಲಿ, ಪ್ರಭಾವಶಾಲಿಯಾಗಲು ತಮ್ಮ ಎಲ್ಲಾ ಉದ್ಯೋಗಗಳನ್ನು ತ್ಯಜಿಸಬೇಕೇ ಎಂದು ತಮ್ಮ ಫಾಲೋವರ್ ಗಳನ್ನು ಪ್ರಶ್ನಿಸಿದ್ದರು.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಎಲಾನ್ ಮಸ್ಕ್ ರವರು, ತಮ್ಮ ಕೆಲಸವನ್ನು ತ್ಯಜಿಸಿ ಪೂರ್ಣ ಸಮಯದ ಪ್ರಭಾವಶಾಲಿ ವ್ಯಕ್ತಿಯಾಗಲು ಯೋಚಿಸುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಅವರು ಮಾಡಿದ ಟ್ವೀಟ್ 12,800 ಬಾರಿ ರೀಟ್ವೀಟ್‌ ಆಗಿದ್ದು, 1.60 ಲಕ್ಷ ಲೈಕ್‌ಗಳನ್ನು ಪಡೆದಿದೆ. ಅಂದ ಹಾಗೆ ಎಲಾನ್ ಮಸ್ಕ್ ರವರು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ ಕಂಪನಿಗಳ ಸಂಸ್ಥಾಪಕರು ಹಾಗೂ ಸಿಇಒ ಆಗಿದ್ದಾರೆ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಇದರ ಜೊತೆಗೆ ಅವರು ದಿ ಬೋರಿಂಗ್ ಎಂಬ ಕಂಪನಿಯ ಸಂಸ್ಥಾಪಕರೂ ಹೌದು. ಎಲಾನ್ ಮಸ್ಕ್ ರವರು ನ್ಯೂರಾಲಿಂಕ್ ಹಾಗೂ ಓಪನ್ ಎಐ ಕಂಪನಿಗಳ ಸಹ ಸಂಸ್ಥಾಪಕರಾಗಿದ್ದಾರೆ. ಈ ಗಮನಾರ್ಹ ಕಂಪನಿಗಳ ಹೊರತಾಗಿ ಎಲಾನ್ ಮಸ್ಕ್ ರವರು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಟ್ವಿಟರ್‌ನಲ್ಲಿ ಅವರು ಮುಕ್ತವಾಗಿ ಮಾತನಾಡುತ್ತಾರೆ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಅವರು ತಮ್ಮ ಟ್ವಿಟರ್ ಖಾತೆಯಲ್ಲಿ 65 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದಾರೆ. ಎಲಾನ್ ಮಸ್ಕ್ ರವರು ಈ ಹಿಂದೆ ಕ್ರಿಪ್ಟೋ ಕರೆನ್ಸಿಯ ಬಗ್ಗೆ ಟ್ವೀಟ್ ಮಾಡಿದ್ದರು. ಜೊತೆಗೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ರವರಂತಹ ಪ್ರತಿಸ್ಪರ್ಧಿ ಬಿಲಿಯನೇರ್‌ಗಳನ್ನು ಅಪಹಾಸ್ಯ ಮಾಡಿದ್ದರು. ಎಲಾನ್ ಮಸ್ಕ್ ರವರ ಇತ್ತೀಚಿನ ಪೋಸ್ಟ್ ಗಳಿಗೆ ಕೆಲವು ಗಣ್ಯ ವ್ಯಕ್ತಿಗಳು ಸಹ ಕಾಮೆಂಟ್ ಮಾಡುತ್ತಾರೆ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಇವರಲ್ಲಿ ಜಿಮ್ಮಿ ಡೊನಾಲ್ಡ್‌ಸನ್ ಸಹ ಸೇರಿದ್ದಾರೆ. ಜಿಮ್ಮಿ ಡೊನಾಲ್ಡ್‌ಸನ್ ತಮ್ಮ Mr.Beast ಹಾಗೂ ಯೂಟ್ಯೂಬ್‌ ಚಾನೆಲ್ ಗಳ ಮೂಲಕ ಜನಪ್ರಿಯರಾಗಿದ್ದಾರೆ. ಅವರ ಯೂಟ್ಯೂಬ್ ವೀಡಿಯೊವೊಂದನ್ನು ನವೆಂಬರ್ 25 ರಂದು ಪೋಸ್ಟ್ ಮಾಡಲಾಗಿತ್ತು. ಪೋಸ್ಟ್ ಮಾಡಿದಾಗಿನಿಂದ ಈ ವೀಡಿಯೊ 159 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಈ ಬಗ್ಗೆ ಅವರು ಎಲಾನ್ ಮಸ್ಕ್ ರವರಿಗೆ, ಯುಟ್ಯೂಬ್'ನಲ್ಲಿ ವೀಕ್ಷಣೆಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ನಾನು ನಿಮಗೆ ತಿಳಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದರು.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಟ್ವಿಟ್ಟರ್ ಬಳಕೆದಾರರೊಬ್ಬರು ಎಲಾನ್ ಮಸ್ಕ್ ರವರಿಗೆ ಯೂಟ್ಯೂಬ್ ಚಾನೆಲ್ ಆರಂಭಿಸುವಂತೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಲಾನ್ ಮಸ್ಕ್ ನೂಬ್‌ಟೂಬ್ ಎಂದು ಹೇಳಿದ್ದರು. ಮತ್ತೊಬ್ಬ ಬಳಕೆದಾರರು ಟ್ವಿಟರ್ ನಲ್ಲಿ ಆಗಾಗ್ಗೆ ಸಂದೇಶಗಳನ್ನು ಪೋಸ್ಟ್ ಮಾಡುವ ಎಲಾನ್ ಮಸ್ಕ್‌ರವರ ಪ್ರವೃತ್ತಿಯ ಬಗ್ಗೆ ಪ್ರಶ್ನಿಸಿದ್ದರು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಎಲಾನ್ ಮಸ್ಕ್ 266 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಅವರ ಪ್ರತಿಸ್ಪರ್ಧಿ ಬಿಲಿಯನೇರ್ ಜೆಫ್ ಬೆಜೋಸ್ ಅವರು 200 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಎಲಾನ್ ಮಸ್ಕ್ ರವರ ಸಂಪತ್ತು ಗಗನಕ್ಕೇರಿದೆ. ಈ ಅವಧಿಯಲ್ಲಿ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ. ಟೆಸ್ಲಾ ಷೇರು ಬೆಲೆಯಲ್ಲಿ ಏರಿಕೆ ಕಂಡು ಬಂದಿರುವುದರ ನಡುವೆಯೂ ಎಲಾನ್ ಮಸ್ಕ್ 9,34,091 ಷೇರುಗಳನ್ನು 963 ಮಿಲಿಯನ್ ಡಾಲರ್ ಗಳಿಗೆ ಮಾರಾಟ ಮಾಡಿ, 2.2 ಮಿಲಿಯನ್ ತೆರಿಗೆ ಪಾವತಿಸಿದ್ದರು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಟೆಸ್ಲಾ ಕಂಪನಿಯು ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ವಿಶ್ವದ ಯಾವುದೇ ಕಂಪನಿಯು ಟೆಸ್ಲಾ ಕಂಪನಿಯ ರೀತಿಯಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಎಲಾನ್ ಮಸ್ಕ್ ತಮ್ಮ ಕಂಪನಿಯ ಎಲೆಕ್ಟ್ರಿಕ್ ಕಾರು ಗ್ರಾಹಕರು ಹಾಗೂ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳು ಸೇರಿದಂತೆ ಇತರ ನೆಟಿಜನ್‌ಗಳು ಕೇಳುವ ಪ್ರಶ್ನೆಗಳಿಗೆ ಹಾಗೂ ಕಾಮೆಂಟ್‌ಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡುತ್ತಾರೆ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಇದೇ ವೇಳೆ ಎಲಾನ್ ಮಸ್ಕ್ ಅಂತರ್ಜಾಲದಲ್ಲಿ ವೈರಲ್ ಆಗುವ ವಿಷಯಗಳ ಬಗ್ಗೆಯೂ ಕಾಮೆಂಟ್ ಮಾಡುತ್ತಾರೆ. ಸದ್ಯಕ್ಕೆ ವಿಶ್ವದ ನಂ 1 ಶ್ರೀಮಂತರಾಗಿರುವ ಅವರ ಟ್ವಿಟರ್ ಖಾತೆಯು ಟೆಸ್ಲಾ ಕಂಪನಿಯ ಕಾರ್ಪೊರೇಟ್ ಸಂಪರ್ಕ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚಿಗೆ ಎಲಾನ್ ಮಸ್ಕ್ ರವರು ಮತ್ತೊಮ್ಮೆ ಗ್ರಾಹಕರೊಬ್ಬರ ದೂರಿಗೆ ತ್ವರಿತವಾಗಿ ಸ್ಪಂದಿಸಿದ್ದಾರೆ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಅವರ ಈ ನಡೆ ಅವರ ತ್ವರಿತ ಹಾಗೂ ನಿಖರವಾದ ಪ್ರತಿಕ್ರಿಯೆಗೆ ಉದಾಹರಣೆಯಾಗಿದೆ. ದಕ್ಷಿಣ ಕೊರಿಯಾದ ಟೆಸ್ಲಾ ಮಾಡೆಲ್ 3 ಕಾರು ಮಾಲೀಕರೊಬ್ಬರು ತಮ್ಮ ಐಫೋನ್ ಅನ್ನು ತಮ್ಮ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿರುವ ಸಿಸ್ಟಂಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದಾರೆ. ಇದು ಜಾಗತಿಕ ಸಮಸ್ಯೆಯಾಗಿದೆ. ಈ ಬಗ್ಗೆ 3 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್, ಚೆಕಿಂಗ್... ಎಂದು ಹೇಳಿದರು.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ನಂತರ ಪ್ರತಿಕ್ರಿಯೆ ನೀಡಿದ ಅವರು ಸರ್ವರ್‌ನಲ್ಲಿ ಸಮಸ್ಯೆ ಇದೆ. ಟೆಸ್ಲಾ ಅಪ್ಲಿಕೇಶನ್‌ನಲ್ಲಿ ಸಮಸ್ಯೆಯ ಮೂಲವನ್ನು ಪೋಸ್ಟ್ ಮಾಡಿದ್ದೇನೆ ಎಂದು ತಿಳಿಸಿದರು. ಈ ಪ್ರತಿಕ್ರಿಯೆಗೆ ಖುಷಿಯಾದ ದಕ್ಷಿಣ ಕೊರಿಯಾದ ಕಾರು ಮಾಲೀಕರು ಧನ್ಯವಾದಗಳು ಎಲಾನ್ ಎಂದು ಕಾಮೆಂಟ್ ಮಾಡಿದರು.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಎಲಾನ್ ಮಸ್ಕ್ ರವರ ಈ ನಡೆ ನೆಟಿಜನ್‌ಗಳ ಗಮನ ಸೆಳೆದಿದೆ. ಇದಕ್ಕೆ ನೆಟಿಜನ್‌ಗಳು ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ನವೆಂಬರ್ 19 ರಂದು ಹಲವು ದೇಶಗಳಲ್ಲಿ ಟೆಸ್ಲಾ ಕಾರುಗಳಲ್ಲಿ ಸಾಫ್ಟ್‌ವೇರ್ ಸಮಸ್ಯೆ ಎದುರಾಗಿತ್ತು. ಇದರಿಂದ ಬಹುತೇಕ ಟೆಸ್ಲಾ ಕಾರು ಗ್ರಾಹಕರು ತಮ್ಮ ಕಾರಿನಲ್ಲಿ ಟೆಸ್ಲಾ ಒದಗಿಸಿದ್ದ ಪ್ರೊಸೆಸರ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ.

ಉದ್ಯೋಗ ತ್ಯಜಿಸುವ ಬಗ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ Tesla ಕಂಪನಿ ಸಿಇಒ

ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಸಕ್ರಿಯರಾಗುತ್ತಾರೆ ಎಂದು ತಿಳಿದಿರುವ ಕೆಲವರು ಈ ಬಗ್ಗೆ ಅವರಿಗೆ ದೂರು ನೀಡಿದ್ದಾರೆ. ಈ ದೂರುಗಳಿಗೆ ಸ್ಪಂದಿಸಿರುವ ಎಲಾನ್ ಮಸ್ಕ್ ಉತ್ತರವನ್ನೂ ನೀಡಿದ್ದಾರೆ. ಅದರಲ್ಲಿ ಈ ಮೇಲಿನ ಉತ್ತರವೂ ಸೇರಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಂಪನಿಯ ಕಡೆಯಿಂದ ಕಂಡು ಬರುವ ಯಾವುದೇ ಸಮಸ್ಯೆಗಳಿಗೆ ಕ್ಷಮೆಯಾಚಿಸಲು ಎಲಾನ್ ಮಸ್ಕ್ ಹಿಂಜರಿಯುವುದಿಲ್ಲ.

Most Read Articles

Kannada
Read more on ಟೆಸ್ಲಾ tesla
English summary
Elon musk asks about carrier change on twitter details
Story first published: Saturday, December 11, 2021, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X