Just In
- 7 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 9 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
- 9 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್ಲಿಫ್ಟ್
- 10 hrs ago
ಪ್ರೀಮಿಯಂ ಕಾರುಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಮಾದರಿಯೇ ಬೆಸ್ಟ್
Don't Miss!
- Lifestyle
ದಿನ ಭವಿಷ್ಯ: ಭಾನುವಾರದ ರಾಶಿಫಲ ಹೇಗಿದೆ ನೋಡಿ
- Sports
ಐಎಸ್ಎಲ್: ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಷಾರಾಮಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಂತೆ ಮಾಡಿಫೈಗೊಂಡ ಟಾಟಾ ಸುಮೋ
ಜಿ-ವ್ಯಾಗನ್ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಸರಣಿಯ ಐಷಾರಾಮಿ ಮಾದರಿ ಮತ್ತು ಅತ್ಯಂತ ಸಮರ್ಥ ಆಫ್-ರೋಡಿಂಗ್ ಎಸ್‍ಯುವಿಯಾಗಿದೆ. ಮರ್ಸಿಡಿಸ್ ಜಿ-ವ್ಯಾಗನ್ ವಿಶ್ವದಲ್ಲೇ ಅತ್ಯಂತ ದುಬಾರಿ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ.

ಹಲವು ವರ್ಷಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿಂದ ಜಿ-ವ್ಯಾಗನ್ ಆಫ್-ರೋಡ್ ಎಸ್‍ಯುವಿಯು ಮಾರಾಟವಾಗುತ್ತಿದೆ. ಇಲ್ಲಿ ಚಿತ್ರದಲ್ಲಿ ಕಾಣಿಸುತ್ತಿರುವ ಮಾದರಿಯು ನಿಜವಾದ ಜಿ-ವ್ಯಾಗನ್ ಅಲ್ಲ. ಆದರೆ ಇದನ್ನು ಜಿ-ವ್ಯಾಗನ್ ಮಾದರಿಯಂತೆ ಮಾಡಿಫೈಗೊಳಿಸಿದ್ದಾರೆ. ಇದು ಸ್ವದೇಶಿ ಟಾಟಾ ಸುಮೋ ಎಸ್‍ಯುವಿಯಾಗಿದೆ. ಟಾಟಾ ಮೋಟಾರ್ಸ್‌ಗೆ ಅಪಾರ ಯಶಸ್ಸನ್ನು ತಂದುಕೊಟ್ಟಿತು ಮತ್ತು ಇದು ದೇಶದಲ್ಲಿ ಮಾರಾಟವಾದ ಹಳೆಯ ಮಲ್ಟಿ ಯುಟಿಲಿಟಿ ವಾಹನಗಳಲ್ಲಿ ಒಂದಾಗಿದೆ.

ಹಲವು ಜನರು ಐಷಾರಾಮಿ ಕಾರುಗಳ ಖರೀದಿಸಲು ಬಯಸುತ್ತಾರೆ. ಆದರೆ ಅಷ್ಟು ದುಬಾರಿ ಮೊತ್ತವನ್ನು ನೀಡಿ ಖರೀದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಅದೇ ಕಾರಣದಿಂದ ಕೆಲವರು ಐಷಾರಾಮಿ ಕಾರುಗಳ ರೀತಿಯಲ್ಲಿ ಮಾಡಿಫೈಗೊಳಿಸುತ್ತಾರೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇಲ್ಲಿಯು ಕೂಡ ಇವರು ದುಬಾರಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯ ದೊಡ್ಡ ಅಭಿಮಾನಿಯಾಗಿದ್ದಾರೆ. ಇದರಿಂದ ಇವರು ಅದನ್ನು ಖರೀದಿಸಲು ಸಾಧ್ಯವಾಗದೇ ತಮ್ಮ ಟಾಟಾ ಸುಮೋ ಎಸ್‍ಯುವಿಯನ್ನು ಜಿ-ವ್ಯಾಗನ್ ಮಾದರಿಯಂತೆ ಮಾಡಿಫೈಗೊಳಿಸುತ್ತಾರೆ.

ಇನ್ನು ಮಾಡಿಫೈಗೊಂಡ ಈ ಮಾದರಿಯನ್ನು ಮೊದಲ ನೋಟದಲ್ಲಿ ಜಿ-ಕ್ಲಾಸ್ ಅಲ್ಲ ಎಂದು ಹೇಳುವುದು ಕಷ್ಟ. ಇನ್ನು ಮಾಡಿಫೈಗೊಂಡ ಈ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ದೊಡ್ಡ ಮರ್ಸಿಡಿಸ್ ಬೆಂಝ್ ಲೋಗೊವನ್ನು ಅಳವಡಿಸಿದ್ದಾರೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಮುಂಭಾಗದಲ್ಲಿ ರೇಡಿಯೇಟರ್ ಗ್ರಿಲ್, ರೌಂಡ್ ಹೆಡ್‌ಲ್ಯಾಂಪ್‌ಗಳು, ಬಾನೆಟ್, ಫ್ರಂಟ್ ಬಂಪರ್, ವೀಲ್ ಆರ್ಚಾರ್ ಗಳೆಲ್ಲವೂ ಜಿ-ವ್ಯಾಗನ್‌ನಲ್ಲಿರುವಂತೆ ಕಾಣುತ್ತವೆ. ಎಸ್‍ಯುವಿ ಕಾರು ಫಾಕ್ಸ್ ಬಾನೆಟ್-ಮೌಂಟೆಡ್ ಟರ್ನ್ ಇಂಡಿಕೇಟರ್ಸ್, ಬ್ಲ್ಯಾಕ್ಡ್- ಔಟ್ ಒಆರ್ವಿಎಂಗಳು ಮತ್ತು ಇದರ ಉದ್ದಕೂ ಬ್ಲ್ಯಾಕ್ ಸ್ತ್ರೀಪ್ ಅನ್ನು ಅಳವಡಿಸಿದ್ದಾರೆ.

ಇನ್ನು ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿ ಮುಂಭಾಗದ ಡೋರಿನಲ್ಲಿ ಎಎಂಜಿ ಲೋಗೊವನ್ನು ಅಳವಡಿಸಿಸಲಾಗಿದೆ. ಹಿಂಭಾಗದಲ್ಲಿ ಮರ್ಸಿಡಿಸ್ ಲೋಗೊ, ವ್ಹೀಲ್ ಮತ್ತು ಟೈಲ್‌ಲೈಟ್‌ಗಳನ್ನು ಹೊಂದಿವೆ. ಇದು ಓರಿಜಿನಲ್ ಜಿ-ವ್ಯಾಗನ್ ಮಾದರಿಯಂತಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಒಟ್ಟಾರೆಯಾಗಿ ಇದು ಓರಿಜಿನಲ್ ರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯಂತೆಯೇ ಕಾಣುತ್ತದೆ. ಇದು ಟಾಟಾ ಸುಮೋ ಎಂದು ಅಷ್ಟು ಸುಲುಭವಾಗಿ ತಿಳಿಯುವುದಿಲ್ಲ. ಬಹಳ ಅಚ್ಚುಕಟ್ಟಾಗಿ ಈ ವಾಹನವನ್ನು ಮಾಡಿಫೈಗೊಳಿಸಿದ್ದಾರೆ.

ಇನ್ನು ಟಾಟಾ ಸುಮೋ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, 2019ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಸ್ಥಗಿತಗೊಳಿಸಿದ್ದರು. ಇನ್ನು ಟಾಟಾ ಸುಮೋ ಮೊದಲ ಬಾರಿಗೆ 1994ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು.

ಭಾರತೀಯ ಮಾರುಕಟ್ಟೆಯಲ್ಲಿ 25 ವರ್ಷಗಳಿಂದ ಉತ್ಪಾದನೆಯಲ್ಲಿದ್ದ ಟಾಟಾ ಸುಮೋ ದೇಶದ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ಎಸ್‍ಯುವಿ ವಿಫಲವಾದ ಕಾರಣ ಕಂಪನಿಯು ಅಂತಿಮವಾಗಿ ಟಾಟಾ ಸುಮೋ ಉತ್ಪಾದನೆಗೆ 2019ರಲ್ಲಿ ಇತಿಶ್ರೀ ಹಾಡಿತ್ತು.

ಟಾಟಾ ಮೋಟಾರ್ಸ್ ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸುಮೋ ಎಸ್‍ಯುವಿ ನವೀಕರಿಸುವ ಯಾವುದೇ ಯೋಜನೆಯನ್ನು ಹೊಂದಿರಲಿಲ್ಲ. ಟಾಟಾ ಸುಮೋ ಭಾರತದ ಎಐಎಸ್ 145 ಸುರಕ್ಷತಾ ಮಾನದಂಡಗಳು ಮತ್ತು ಬಿಎನ್‍ವಿಎಪಿ(ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸೆಸ್ಮೆಂಟ್ ಪ್ರೋಗ್ರಾಂ) ಈ ಎರಡು ನಿಯಮಗಳನ್ನು ಅನುಸರಿಸಲು ವಿಫಲವಾಗಿದೆ.

ಟಾಟಾ ಸುಮೋ ದೇಶಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍ನಿಂದ ಅತ್ಯಂತ ಜನಪ್ರಿಯ ಮಾದರಿಯಾಗಿತ್ತು. ಟಾಟಾ ಸುಮೋ ಕಂಪನಿಯ ಎಂಪಿವಿ ಮತ್ತು ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ಟಾಟಾ ಸುಮೋ ದೇಶಿಯ ಮಾರುಕಟ್ಟೆಯಲ್ಲಿ ಕೊನೆಯ ರೂಪಾಂತರವಾಗಿ ಟಾಟಾ ಸುಮೋ ಗೋಲ್ಡ್ ಅನ್ನು ಬಿಡುಗಡೆಗೊಳಿಸಿದ್ದರು.