ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಇಟಲಿ ಮೂಲದ ಸೂಪರ್‍‍‍ಕಾರ್ ಉತ್ಪಾದನಾ ಸಂಸ್ಥೆಯಾದ ಫೆರಾರಿ ತನ್ನ ಹೊಸ 296 ಜಿಟಿಬಿ ಕಾರನ್ನು ಅನಾವರಣಗೊಳಿಸಿದೆ. ಫೆರಾರಿ 296 ಜಿಟಿಬಿ ಕಾರು ಮಿಡ್-ಮೌಂಟೆಡ್ ವಿ8 ಬದಲಿಗೆ ಎಲ್ಲಾ ಹೊಸ ಹೈಬ್ರಿಡ್ ವಿ6 ಎಂಜಿನ್ ಅನ್ನು ಪಡೆದುಕೊಂಡಿದೆ.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಈ ಕಾರಿನ ಹೆಸರಿನ 296 ಜಿಟಿಬಿಯು 2,996 ಸಿಸಿ, ಆರು-ಸಿಲಿಂಡರ್ ಎಂಜಿನ್ ಅರ್ಥವನ್ನು ತಿಳಿಸುತ್ತದೆ. ಆದರೆ ಫೆರಾರಿ ಸ್ಪೋರ್ಟ್ಸ್‌ಕಾರ್‌ಗಳ ಸರಣಿಯಲ್ಲಿ ಇದು ಹೊಸದು ಎಂದು ತಿಳಿಯುತ್ತದೆ. ಫೆರಾರಿ ತನ್ನ ಪ್ರಮುಖ ಸ್ಪೋರ್ಟ್ಸ್‌ಕಾರ್ ಲೈನ್‌ಗಾಗಿ ವಿ8 ಎಂಜಿನ್ ನಿಂದ ವಿ6ಗೆ ಬದಲಾಯಿಸಿದ್ದು, ಈ ವರ್ಷದ ಆರಂಭದಿಂದ ಪ್ರತಿಸ್ಪರ್ಧಿ ಮೆಕ್‌ಲಾರೆನ್ ಕೂಡ ಆರ್ಟುರಾ ಕಾರಿನಲ್ಲಿ ವಿ6 ಪ್ಲಗ್-ಇನ್ ಹೈಬ್ರಿಡ್ ಸ್ಪೋರ್ಟ್ಸ್ ಸೀರೀಸ್ ಅನ್ನು ಪರಿಚಯಿಸಲಿದೆ.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಹೊಸ ಫೆರಾರಿ 296 ಜಿಟಿಬಿ ಕಾರು ಜಿಟಿಬಿಯ ಬೆಲೆಗಳು ಮತ್ತು ಲಭ್ಯತೆಯ ವಿವರಗಳು ಇನ್ನು ಕೂಡ ಬಹಿರಂಗಗೊಂಡಿಲ್ಲ, ಆದರೆ ಎಸ್‌ಎಫ್ 90 ಸ್ಟ್ರಾಡೇಲ್‌ಗಿಂತ ಎಫ್8 ಟ್ರಿಬ್ಯುಟೊ ಕಾರಿನ ಬೆಲೆಗೆ ಹೆಚ್ಚು ಸಾಮ್ಯತೆಯನ್ನು ಹೊಂದಿರಬಹುದು.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಫೆರಾರಿ ಕಂಪನಿಯು 1960 ಮತ್ತು 1970 ರ ದಶಕಗಳಲ್ಲಿ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರುಗಳಲ್ಲಿ ವಿ6 ಎಂಜಿನ್ ಅನ್ನು ಬಳಿಸಿದ್ದರು. ಈ ಕಾರುಗಳನ್ನು ಡಿನೋ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಯಿತು.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಹೊಸ 296 ಜಿಟಿಬಿ ಕಾರಿನ ಟ್ವಿನ್-ಟರ್ಬೋಚಾರ್ಜ್ಡ್ 3.0-ಲೀಟರ್ ಎಂಜಿನ್ ಅನ್ನು ಫೆರಾರಿ ಕಂಪನಿಯೇ ಅಭಿವೃದ್ಧಿಪಡಿಸಿದೆ. ಬೆಸ್ಪೋಕ್ ಪವರ್ ಪ್ಲಾಂಟ್ 654 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಪ್ರತಿ ಲೀಟರ್‌ಗೆ 218 ಬಿಹೆಚ್‌ಪಿಗೆ ಸಮನಾಗಿರುತ್ತದೆ.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಇನ್ನು ಹೊಸ ಎಂಜಿನ್ 8,000 ಆರ್‌ಪಿಎಂನಲ್ಲಿ 819 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 740 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫೆರಾರಿ ಕೇವಲ 2.9 ಸೆಕೆಂಡುಗಳ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಹೊಸ 296 ಜಿಟಿಬಿ ಳೆಯ 1963 250 ಎಲ್ಎಂ ಸೇರಿದಂತೆ ಕ್ಲಾಸಿಕ್ ಮಾದರಿಗಳಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿಕೊಂಡಿದೆ, ಈ ಹೊಸ ಫೆರಾರಿ ಕಾರು ರ್ಯಾಪಾರೌಂಡ್ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಹೊಸ ಫೆರಾರಿ 296 ಜಿಟಿಬಿ ಕಾರು ಎಸ್‌ಎಫ್ 90 ಸ್ಟ್ರಾಡೇಲ್‌ನಲ್ಲಿರುವವರಿಂದ ಪ್ರೇರಿತವಾದ 'ಏರೋ' ಬ್ರೇಕ್ ಕ್ಯಾಲಿಪರ್‌ಗಳನ್ನು ಒಳಗೊಂಡಿದೆ. ಹಿಂಭಾಗದ ವಿನ್ಯಾಸವು ಸ್ಪೈಡರ್ ಮತ್ತು ಕೂಪೆ ಸ್ಟೈಲಿಂಗ್ ಅನ್ನು ಹೊಂದಿದೆ.

ಹೊಸ ಹೈಬ್ರಿಡ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಫೆರಾರಿ 296 ಜಿಟಿಬಿ ಕಾರು

ಹೊಸ ಫೆರಾರಿ 296 ಜಿಟಿಬಿ ಕಾರು ಎಫ್8 ಟ್ರಿಬ್ಯುಟೊ ಮಾದರಿಗಿಂತ 50 ಎಂಎಂ-ಕಡಿಮೆ ವ್ಹೀಲ್‌ಬೇಸ್ ಅನ್ನು ಹೊಂದಿದೆ, ಇನ್ನು ಈ ಕಾರು 1,470 ಕೆಜಿ ತೂಕವನ್ನು ಹೊಂದಿದೆ. ಹೊಸ ಫೆರಾರಿ 296 ಜಿಟಿಬಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
New Ferrari 296 GTB Revealed. Read In Kananda.
Story first published: Friday, June 25, 2021, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X