ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಫೋರ್ಸ್ ಮೋಟಾರ್ಸ್(Force Motors) ಕಂಪನಿಯು ತನ್ನ ಬಹುನೀರಿಕ್ಷಿತ 2021ರ ಗೂರ್ಖಾ( Gurkha) ಆಫ್-ರೋಡ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಭಾರೀ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಹೊಸ ಗೂರ್ಖಾ ಆಫ್ ರೋಡ್ ಎಸ್‌ಯುವಿ ಮಾದರಿಯನ್ನು ಕೋವಿಡ್ ಕಾರಣಕ್ಕಾಗಿ ಬಿಡುಗಡೆ ಮಂದೂಡಿಕೆ ಮಾಡುತ್ತಾ ಬಂದಿದ್ದ ಫೋರ್ಸ್ ಮೋಟಾರ್ಸ್ ಕಂಪನಿಯು ಇದೀಗ ಹೊಸ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಸದ್ಯ ಅನಾವರಣಗೊಂಡಿರುವ ಹೊಸ ಆವೃತ್ತಿಯು ಇದೇ ತಿಂಗಳು 27ರಂದು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಬಿಎಸ್-6 ಎಮಿಷನ್‌ಗೆ ಅನುಗುಣವಾಗಿ ಹೊಸ ಗೂರ್ಖಾ ಎಸ್‌ಯುವಿ ಮಾದರಿಯನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಉನ್ನತೀಕರಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ನವೀಕೃತ ಗೂರ್ಖಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಮಾದರಿಯು ಅಭಿವೃದ್ದಿಗೊಂಡಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

2021ರ ಗೂರ್ಖಾ ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರೀಯರನ್ನು ಸೆಳೆಯಲಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್, ಬ್ಲ್ಯಾಕ್ ಔಟ್ ಫ್ರಂಟ್ ಬಂಪರ್, ಎಂಜಿನ್ ಬಾಷ್ ಪ್ಲೇಟ್, ಫಾಗ್ ಲ್ಯಾಂಪ್, ಬಾಡಿ ಕ್ಲ್ಯಾಡಿಂಗ್, ಸ್ನೋರ್ಕಲ್ ಸೌಲಭ್ಯವಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಹಾಗೆಯೇ ರಿಪ್ಲೆಕ್ಟಕ್ ಹೊಂದಿರುವ Gurkha ಬ್ಯಾಡ್ಜ್ ಮತ್ತು ಆಫ್ ರೋಡ್ ಎಕ್ಸಾಸ್ಟ್ ಗಮನಸೆಳೆಯಲಿದ್ದು, ಹೊರ ಭಾಗದಲ್ಲಿ ಮಾತ್ರವಲ್ಲ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಸಾಕಷ್ಟು ಬದಲಾವಣೆಗೊಂಡಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಮ್ಯಾನುವಲ್ ಎಸಿ ವೆಂಟ್ಸ್ , 12V ಚಾರ್ಜಿಂಗ್ ಸಾಕೆಟ್ ಮತ್ತು ಡ್ಯುಯಲ್ ಯುಎಸ್‌ಬಿ ಸಾಕೆಟ್ ನೀಡಲಾಗಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಫೋರ್ಸ್ ಮೋಟಾರ್ಸ್ ಕಂಪನಿಯು ಕಾರು ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ನೀಡಲಾಗಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಹೊಸ ಕಾರು ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಥಾರ್ ಮಾದರಿಗೆ ಪ್ರಬಲ ಪೈಪೋಟಿ ನೀಡಲಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಗೂರ್ಖಾ ಹೊಸ ಆವೃತ್ತಿಯು 4116 ಎಂಎಂ ಉದ್ದ, 1812 ಎಂಎಂ ಎತ್ತರ, 2400 ವ್ಹೀಲ್ ಬೆಸ್ ಮತ್ತು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಕಾರು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಬಿಎಸ್-6 ಜಾರಿಯಾಗಿರುವ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಹೊಸ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4X4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಫೋರ್ಸ್ ಮೋಟಾರ್ಸ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಕ್ಸೆಸರಿಸ್‌ಗಳನ್ನು ಹೊರತುಪಡಿಸಿ ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೌಲ್ಯದ ಆಕ್ಸೆಸರಿಸ್ ಪ್ಯಾಕೇಜ್ ಆಯ್ಕೆ ನೀಡಲಿದ್ದು, ಹೆಚ್ಚುವರಿ ಆಕ್ಸೆಸರಿಸ್‌ನಲ್ಲಿ ವಿಂಡ್ ಸ್ಕೀನ್ ಬಾರ್, ರೂಫ್ ಕ್ಯಾರಿಯರ್, ರಿಯರ್ ರ್ಯಾಡರ್, ಅಲಾಯ್ ವೀಲ್ಹ್ ಮತ್ತು ರಿಯರ್ ಸೈಡ್ ಫೇಸಿಂಗ್ ಚೈಲ್ಡ್ ಸೀಟ್ ನೀಡಲಾಗಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಇನ್ನು ಹೊಸ ಕಾರು ರೆಡ್, ಗ್ರಿನ್, ವೈಟ್, ಆರೇಂಜ್, ಗ್ರೆ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಆಫ್ ರೋಡ್ ಎಸ್‌ಯುವಿ ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಬಹುನೀರಿಕ್ಷಿತ 2021ರ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿ ಅನಾವರಣ

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷವೆಂದರೆ ಫೋರ್ಸ್ ಮೋಟಾರ್ಸ್ ಕಂಪನಿಯಯು ಸ್ಟ್ಯಾಂಡರ್ಡ್ ಆಗಿ 3 ಡೋರ್ ಜೊತೆಗೆ 5 ಡೋರ್ ವರ್ಷನ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, ಆರಂಭಿಕವಾಗಿ 3 ಡೋರ್ ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಿರುವ ಕಂಪನಿಯು ಕೆಲ ತಿಂಗಳ ನಂತರ 5 ಡೋರ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Force gurkha bs6 officially unveiled ahead of india launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X