Just In
Don't Miss!
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- News
ಬಿಟ್ ಕಾಯಿನ್ ಮೌಲ್ಯ $60,000 ನಂತೆ ಸ್ಥಿರ, ಟ್ರೇಡರ್ಸ್ಗೆ ನೆಮ್ಮದಿ
- Movies
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
- Lifestyle
ಪಾತ್ರೆ ಉಜ್ಜುವ ಸೋಪ್ನಿಂದ ಈ ವಸ್ತುಗಳು ಹಾಗೂ ಸ್ಥಳಗಳನ್ನು ಸ್ವಚ್ಛ ಮಾಡಿ ನೋಡಿದ್ದೀರಾ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತನ್ನ ಕಾರುಗಳಲ್ಲಿ ಮಹೀಂದ್ರಾ ಕಂಪನಿಯ ಎಂಜಿನ್ ಬಳಕೆಯನ್ನು ನಿಲ್ಲಿಸಲಿದೆ ಫೋರ್ಡ್
ಅಮೆರಿಕಾ ಮೂಲದ ಫೋರ್ಡ್ ಕಂಪನಿಯು ತನ್ನ ಕೆಲವು ವಾಹನಗಳಲ್ಲಿ ಮಹೀಂದ್ರಾ ಕಂಪನಿಯು ನಿರ್ಮಿಸಿರುವ ಎಂಜಿನ್ ಗಳನ್ನು ಬಳಸುತ್ತಿದೆ. ಈ ವಿತರಣಾ ಒಪ್ಪಂದವನ್ನು ಶೀಘ್ರದಲ್ಲೇ ಅಂತ್ಯಗೊಳಿಸುವುದಾಗಿ ಫೋರ್ಡ್ ಕಂಪನಿ ತಿಳಿಸಿದೆ.

ಫೋರ್ಡ್ ಕಂಪನಿಯು ತನ್ನ ವಾಹನಗಳಿಗಾಗಿ ಎಂಜಿನ್ ಉತ್ಪಾದನೆಯನ್ನು ಮುಂದುವರಿಸುವುದಾಗಿ ಹೇಳಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಫೋರ್ಡ್ ಕಂಪನಿಗಳು 2017ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಈ ಒಪ್ಪಂದದ ಮೂಲಕ ಎರಡು ಕಂಪನಿಗಳು ವಿಲೀನಗೊಂಡವು. ತಂತ್ರಜ್ಞಾನ, ಎಂಜಿನ್, ಸಂಪರ್ಕ, ಎಲೆಕ್ಟ್ರಿಕ್ ವಾಹನ ಸೇರಿದಂತೆ ಹಲವು ವಿಭಾಗಗಳಲ್ಲಿ ಪರಸ್ಪರ ಹಂಚಿಕೊಳ್ಳಲು ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಒಪ್ಪಂದದ ಹಿನ್ನೆಲೆಯಲ್ಲಿ ಎರಡು ಕಂಪನಿಗಳ ನಡುವೆ 5 ವರ್ಷಗಳ ಕಾಲ ವಿವಿಧ ತಾಂತ್ರಿಕ ವಿನಿಮಯಗಳು ಸರಾಗವಾಗಿ ನಡೆದವು. ಈ ನಡುವೆ ಎರಡು ಕಂಪನಿಗಳು ಕೆಲವು ವಿತರಣೆಗಳನ್ನು ನಿಲ್ಲಿಸಿದ್ದವು. ಆದರೆ ಎಂಜಿನ್ ಹಾಗೂ ಸಂಪರ್ಕ ತಂತ್ರಜ್ಞಾನದಂತಹ ಇತರ ವಿನಿಮಯಗಳು ಮುಂದುವರೆದಿದ್ದವು.

ಈಗ ಎಂಜಿನ್ ವಿನಿಮಯವನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಫೋರ್ಡ್ ಕಂಪನಿ ತಿಳಿಸಿದೆ. ತನ್ನ ಎರಡು ವಾಹನಗಳ ಬಿಡುಗಡೆಯನ್ನು ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಫೋರ್ಡ್ ಕಂಪನಿಯು ಈ ನಿರ್ಧಾರವನ್ನು ಕೈಗೊಂಡಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫೋರ್ಡ್ ಕಂಪನಿಯು ಪಿಎಕ್ಸ್ 744 ಹಾಗೂ ಪಿಎಕ್ಸ್ 772 ಎಂಬ ಎರಡು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿತ್ತು. ಸ್ವತಃ ಎಂಜಿನ್ ಉತ್ಪಾದಿಸುತ್ತಿರುವುದರಿಂದ ಈ ಎರಡು ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಫೋರ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಕಿಯಾ ಸೊನೆಟ್ ಕಾರುಗಳಿಗೆ ಪೈಪೋಟಿ ನೀಡಲು ಪಿಎಕ್ಸ್ 744 ಹಾಗೂ ಸಬ್ 4 ಮೀಟರ್ ಸೆಗ್'ಮೆಂಟಿನಲ್ಲಿ ಪೈಪೋಟಿ ನೀಡಲು ಪಿಎಕ್ಸ್ 772 ಮಾದರಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿತ್ತು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಕಾರುಗಳನ್ನು 2022-2023ರಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿದ್ದವು. ಈ ಹಂತದಲ್ಲಿ ಫೋರ್ಡ್ ಕಂಪನಿಯೇ ಎಂಜಿನ್ ಉತ್ಪಾದನೆಯನ್ನು ಆರಂಭಿಸುವ ನಿರ್ಧಾರವನ್ನು ಕೈಗೊಂಡಿದೆ. ಇದರಿಂದಾಗಿ ಈ ಎರಡೂ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

ಈ ಎರಡೂ ಹೊಸ ಮಾದರಿ ಕಾರುಗಳ ಬಿಡುಗಡೆಯನ್ನು ಆರು ತಿಂಗಳವರೆಗೆ ಮುಂದೂಡಲಾಗಿದೆ. ಫೋರ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಲು ಮುಂದಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರಣಕ್ಕೆ ಫೋರ್ಡ್ ಕಂಪನಿಯು ಹೊಸ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಆರಂಭಿಸಿದೆ. ಈಗ ತನ್ನ ಕಾರುಗಳಿಗೆ ತನ್ನದೇ ಆದ ಎಂಜಿನ್ ಉತ್ಪಾದನೆಯನ್ನು ಮುಂದುವರಿಸುವುದಾಗಿ ಹೇಳಿದೆ.