ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಇಕೋಸ್ಪೋರ್ಟ್ ಮಾದರಿಯಲ್ಲಿ ಹೊಸದಾಗಿ ಎಸ್ಇ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್‌ನಲ್ಲಿ ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವೀಲ್ಹ್ ತೆಗೆದುಹಾಕಲಾಗಿದೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವೀಲ್ಹ್ ಮೂಲಕ ವಿಭಿನ್ನ ಗುರುತಿಸಿಕೊಂಡಿದ್ದ ಇಕೋಸ್ಪೋರ್ಟ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಹೊಸ ವಿನ್ಯಾಸವನ್ನು ನೀಡಲಾಗಿದ್ದು, ಮಧ್ಯಂತರ ಆವೃತ್ತಿಯಾದ ಎಸ್ಇ ವೆರಿಯೆಂಟ್‌ ಪರಿಚಯಿಸಲಾಗಿದೆ. ಹೊಸ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿಗೆ ಲಭ್ಯವಿರಲಿದ್ದು, ಹೊಸ ಆವೃತ್ತಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.49 ಲಕ್ಷದಿಂದ ರೂ. 10.99 ಲಕ್ಷ ಬೆಲೆ ಹೊಂದಿದೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಹೊಸ ಆವೃತ್ತಿಯಲ್ಲಿ ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವೀಲ್ಹ್ ತೆಗೆದುಹಾಕಿ ಸಾಮಾನ್ಯ ಕಾರುಗಳಲ್ಲಿರುವಂತೆ ಬೂಟ್‌ಸ್ಪೆಸ್‌ನಲ್ಲಿ ಸ್ಪೇರ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಟೈಟಾನಿಯಂ ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳು ಹೊಸ ಮಾದರಿಯಲ್ಲಿರಲಿವೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ತಾಂತ್ರಿಕವಾಗಿ ಮತ್ತು ಎಂಜಿನ್ ಆಯ್ಕೆಯಲ್ಲಿ ಟೈಟಾನಿಯಂ ಮಾದರಿಯಲ್ಲಿರುವಂತೆ ಸೌಲಭ್ಯಗಳನ್ನು ಪಡೆದುಕೊಂಡಿದ್ದರೂ ಎಸ್‌ಇ ಆವೃತ್ತಿಯ ಬೆಲೆಯು ಸಾಮಾನ್ಯ ಮಾದರಿಗಿಂತ ರೂ. 70 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಹೊಸ ಆವೃತ್ತಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಕಾರಿನಲ್ಲಿ ಪೆಟ್ರೋಲ್ ಮಾದರಿಯು 123-ಬಿಎಚ್‌ಪಿ ಮತ್ತು ಡೀಸೆಲ್ ಮಾದರಿಯು 100-ಬಿಎಚ್‌ಪಿ ಉತ್ಪಾದನಾ ಗುಣ ಹೊಂದಿದೆ. ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಫೋರ್ಡ್ ಇಕೋಸ್ಪೋರ್ಟ್ ಅತ್ಯುತ್ತಮ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಫೋರ್ಡ್ ಕಂಪನಿಯು ಇಕೋಸ್ಪೋರ್ಟ್ ಮಾದರಿಯನ್ನು ಸದ್ಯ ಗ್ರಾಹಕರ ಬೇಡಿಕೆಯೆಂತೆ ಆ್ಯಂಬಿಯೆಂಟ್, ಟ್ರೆಂಡ್, ಟೈಟಾನಿಯಂ, ಎಸ್ಇ, ಸ್ಪೋರ್ಟ್, ಟೈನಾನಿಯಂ ಪ್ಲಸ್ ಮತ್ತು ಸ್ಪೋರ್ಟ್ ಪ್ಲಸ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದ್ದು, ಬಹುತೇಕ ವೆರಿಯೆಂಟ್‌ಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಟಾಪ್ ಎಂಡ್ ಮಾದರಿಯಲ್ಲಿರುವ ಟೈಟಾನಿಯಂ ಪ್ಲಸ್ ಮಾದರಿಯಲ್ಲಿ ಮಾತ್ರವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಇನ್ನುಳಿದ ಎಲ್ಲಾ ವೆರಿಯೆಂಟ್‌ಗಳಲ್ಲೂ ಮ್ಯಾನುವಲ್ ಆವೃತ್ತಿಯನ್ನು ಮಾತ್ರವೇ ಸ್ಟ್ಯಾಂಡರ್ಡ್ ಆಗಿ ನೀಡಲಾಗಿತ್ತಿದೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಸದ್ಯ ಹೊಸದಾಗಿ ಬಿಡುಗಡೆಯಾಗಿರುವ ಎಸ್ಇ ವೆರಿಯೆಂಟ್ ಮಧ್ಯಮ ಕ್ರಮಾಕಂದ ಆವೃತ್ತಿಯಾಗಿದ್ದು, ಎಸ್‌ಇ ನಂತರದ ಸ್ಥಾನದಲ್ಲಿರುವ ಸ್ಪೋರ್ಟ್ ಆವೃತ್ತಿಗೆ ಹೊಸ ಆವೃತ್ತಿಯನ್ನು ಹೋಲಿಕೆ ಮಾಡಿದರೆ ಸ್ಪೋರ್ಟ್ ಆವೃತ್ತಿಯಲ್ಲೇ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳಿವೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಇಕೋಸ್ಪೋರ್ಟ್ ಆವೃತ್ತಿಯು ಆರಂಭಿಕವಾಗಿ ರೂ. 7.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11.49 ಲಕ್ಷ ಬೆಲೆ ಹೊಂದಿದ್ದು, ಎಸ್ಇ ನಂತರದ ಸ್ಥಾನದಲ್ಲಿ ಸ್ಪೋರ್ಟ್ ಮಾದರಿಯು ಎಸ್ಇ ಮಾದರಿಗಿಂತ ರೂ. 50 ಸಾವಿರ ಹೆಚ್ಚುವರಿ ಬೆಲೆ ಹೊಂದಿದೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಎಸ್ಇ ಆವೃತ್ತಿಯಲ್ಲಿ ಫೋರ್ಡ್ ಕಂಪನಿಯು ಡ್ಯುಯಲ್ ಏರ್‌ಬ್ಯಾಗ್, ಇಬಿಡಿ, ರಿಯರ್ ಕ್ಯಾಮೆರಾ, ರಿಯರ್ ವೈಪರ್, ಡಿಫಾಗರ್, 16-ಇಂಚಿನ ಅಲಾಯ್ ವೀಲ್ಹ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಹೆಡ್‌ಲೈಟ್ಸ್, ಕೀ ಲೆಸ್ ಎಂಟ್ರಿ, 9 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಫೋರ್ಡ್ ಪಾಸ್ ಇ-ಕನೆಕ್ಟಿವಿಟಿ , ಸನ್‌ರೂಫ್ ಸೌಲಭ್ಯಗಳಿವೆ.

ಹೊಸ ವಿನ್ಯಾಸದ ಇಕೋಸ್ಪೋರ್ಟ್ ಎಸ್‌ಇ ವೆರಿಯೆಂಟ್ ಬಿಡುಗಡೆ ಮಾಡಿದ ಫೋರ್ಡ್

ಆದರೆ ಎಸ್ಇ ಆವೃತ್ತಿಗಿಂತಲೂ ಬೆಲೆಯಲ್ಲಿ ರೂ.50 ಸಾವಿರ ಹೆಚ್ಚುವರಿ ಬೆಲೆ ಹೊಂದಿರುವ ಸ್ಪೋರ್ಟ್ ಮಾದರಿಯಲ್ಲಿ ಮೇಲೆ ಕೆಲವು ಫೀಚರ್ಸ್‌ಗಳೊಂದಿಗೆ ಹೆಚ್ಚುವರಿಯಾಗಿ ಕರ್ಟೈನ್ ಏರ್‌ಬ್ಯಾಗ್, ಇಸಿಎಸ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, ಹೆಚ್‌ಡಿಐ ಹೆಡ್‌ಲೈಟ್ಸ್, ಆಟೋ ವೈಪರ್, 60:40 ಅನುಪಾತದಲ್ಲಿ ಮಡಿಕೆ ಮಾಡಬಹುದಾದ ರಿಯರ್ ಸೀಟ್, ಸೀಟ್ ಆರ್ಮ್ ರೆಸ್ಟ್ ಸೌಲಭ್ಯಗಳಿವೆ.

Most Read Articles

Kannada
Read more on ಫೋರ್ಡ್ ford
English summary
Ford EcoSport SE Variant Launched. Read in Kannada.
Story first published: Wednesday, March 10, 2021, 13:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X