ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಫೋರ್ಡ್ ಇಂಡಿಯಾ ಇತ್ತೀಚೆಗೆ ಇಕೋಸ್ಪೋರ್ಟ್‌ನ ಹೊಸ ಎಸ್ಇ ವೆರಿಯೆಂಟ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದು ಈ ಮೊದಲು ಭಾರತದಲ್ಲಿ ಮಾರಾಟವಾದ ವೆರಿಯೆಂಟ್ ಗಿಂತ ಭಿನ್ನವಾಗಿದೆ.

ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್‌‌ನ ಟೈಲ್ ಗೇಟ್ ನಲ್ಲಿ ಸ್ಪೇರ್ ವ್ಹೀಲ್ ಇರುವುದಿಲ್ಲ. ಆದರೆ ಟೈಲ್ ಗೇಟ್ ನಲ್ಲಿ ಸ್ಪೇರ್ ವ್ಹೀಲ್ ಅನ್ನು ಹೊಂದಿರುವ ಸಮಾನ್ಯ ಮಾದರಿಯನ್ನು ಎಸ್ ವೆರಿಯೆಂಟ್ ಎಂದು ಕರೆಯಲಾಗುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಅಲೆಯನ್ನು ಪ್ರಾರಂಭಿಸಿದ ಮಾದರಿಗಳಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕೂಡ ಒಂದು ಆಗಿದೆ.

ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಪೋರ್ಡ್ ಕಂಪನಿಯು ಇತ್ತೀಚೆಗೆ ಪರಿಚಯಿಸಲಾದ ಎಸ್‌ಇ ವೆರಿಯೆಂಟ್‌‌ನ ಹೊಚ್ಚ ಹೊಸ ಟಿವಿಸಿಯನ್ನು ಬಿಡುಗಡೆ ಮಾಡಿದೆ. ಈ ಟಿವಿಸಿ ವೀಡಿಯೋವನ್ನು ಫೋರ್ಡ್ ಇಂಡಿಯಾ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಹೊಸದಾಗಿ ಪರಿಚಯಿಸಲಾದ ಎಸ್‌ಇ ವೆರಿಯೆಂಟ್ ಅದರ ಅಮೇರಿಕ ಮತ್ತು ಯುರೋಪಿನ ಮಾದರಿಗಳಿಂದ ವಿನ್ಯಾಸದ ಕೆಲವು ಅಂಶಗಳನ್ನು ಎರವಲು ಪಡೆದುಕೊಂಡಿದೆ. ಅಮೇರಿಕ ಮತ್ತು ಯುರೋಪಿನ ಮಾರುಕಟ್ಟೆಯಲ್ಲಿ ಮಾರಟವಾಗುವ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಹಿಂಭಾಗದಲ್ಲಿ ಸ್ಪೇರ್ ವ್ಜೀಲ್ ಇಲ್ಲದೆ ಮಾರಾಟವಾಗುತ್ತದೆ.

ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಫೋರ್ಡ್ ಬಿಡುಗಡೆ ಮಾಡಿದ ಹೊಸ ಟಿವಿಸಿಯಲ್ಲಿ ಎಸ್ಇ ವೆರಿಯೆಂಟ್ ಮತ್ತು ಸಮಾನ್ಯ ಮಾದರಿಯ ನಡುವಿನ ವ್ಯತ್ಯಾಸವನ್ನು ಆಕರ್ಷಕವಾಗಿ ಪ್ರದರ್ಶಿಸಿದ್ದಾರೆ. ಪೋರ್ಡ್ ಟಿವಿಸಿಯಲ್ಲಿ ಒಂದೇ ರೀತಿಯ ಅವಳಿಗಳಿದ್ದರೆ ಎದುರಾಗುವ ಸವಾಲುಗಳನ್ನು ಹಾಸ್ಯಮಯ ರೀತಿಯಲ್ಲಿ ತೋರಿಸಿದ್ದಾರೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಅವರಿಬ್ಬರೂ ಒಂದೇ ರೀತಿಯ ಅವಳಿಗಳಾಗಿದ್ದರೂ, ಅವರಿಬ್ಬರೂ ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿದ್ದರು ಆದರೆ, ಜನರು ಅವರನ್ನು ಸಮಾನವಾಗಿ ಪರಿಗಣಿಸುತ್ತಿದ್ದರು ಮತ್ತು ಅವಳಿಗಳು ಅಂತಿಮವಾಗಿ ಅದರಿಂದ ಬೇಸತ್ತಿದ್ದಾರೆ. ನಂತರ ಅವರು ಅಂತಿಮವಾಗಿ ಇಕೋಸ್ಪೋರ್ಟ್ ಎಸ್ಇ ಮತ್ತು ಇಕೋಸ್ಪೋರ್ಟ್ ಎಸ್ ಅನ್ನು ಕಂಡುಕೊಳ್ಳುತ್ತಾರೆ,

ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಇದು ಎರಡು ಒಂದೇ ರೀತಿ ಕಾಣುತ್ತದೆ ಆದರೆ ವಿಭಿನ್ನವಾಗಿರುತ್ತದೆ. ಇನ್ನು ಹೊಸ ಪೋರ್ಡ್ ಇಕೊಸ್ಪೋರ್ಟ್ ಎಸ್ಇ ವೆರಿಯೆಂಟ್ ಬಗ್ಗೆ ಹೇಳುವುದಾದರೆ, ಈ ಹೊಸ ವೆರಿಯೆಂಟ್ ಗ್ರಾಹಕರಿಗೆ ಎರಡು ವಿಭಿನ್ನ ಬಾಡಿ ಶೈಲಿಗಳ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಪೆಟ್ರೋಲ್ ಮಾದರಿಯ ಬೆಲೆಯು ರೂ.10.49 ಲಕ್ಷಗಳಾದರೆ, ಡೀಸೆಲ್ ಮಾದರಿಗೆ ರೂ.10.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಇಕೋಸ್ಪೋರ್ಟ್ ಎಸ್ಇ ಮತ್ತು ಎಸ್ ವೆರಿಯೆಂಟ್‌ಗಳ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಎಸ್ಇ ವೆರಿಯೆಂಟ್ ನಲ್ಲಿ ಫೋರ್ಡ್ ಸ್ಪೇಸ್ ಸೇವರ್ ಅನ್ನು ಸಹ ನೀಡುತ್ತಿಲ್ಲ. ಬದಲಾಗಿ ಫೋರ್ಡ್ ಏಗ್ರಾಹಕರಿಗೆ ಪಂಕ್ಚರ್ ರಿಪೇರಿ ಕಿಟ್ ನೀಡುತ್ತಿದ್ದಾರೆ. ಇನ್ನು ಸೂಕ್ಷ್ಮ ಬದಲಾವಣೆಗಳು ಇಕೋಸ್ಪೋರ್ಟ್ ಎಸ್ಇ ಅನ್ನು ಎಸ್ ರೂಪಾಂತರದಿಂದ ಪ್ರತ್ಯೇಕಿಸುತ್ತವೆ.

Most Read Articles

Kannada
Read more on ಫೋರ್ಡ್ ford
English summary
Ford India Releases New TVC For EcoSport SE & EcoSport S. Read In Kannada.
Story first published: Friday, March 12, 2021, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X