ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಕೋವಿಡ್ 2ನೇ ಅಲೆ ಅಬ್ಬರದ ನಡುವೆಯೂ ಕಳೆದ ತಿಂಗಳು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿದ್ದ ವಿವಿಧ ಕಾರು ಕಂಪನಿಗಳು ಕಳೆದ ಹತ್ತು ದಿನಗಳಲ್ಲಿ ಕನಿಷ್ಠ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಕೋವಿಡ್‌ನಿಂದಾಗಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವ ಭೀತಿ ಶುರುವಾಗಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ಕಾರು ಕಂಪನಿಗಳು ಇದೀಗ ಕೋವಿಡ್ 2ನೇ ಅಲೆಯಿಂದಾಗಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಹಕರ ಸೆಳೆಯಲು ಹರಸಾಹಸಪಡುತ್ತಿವೆ. ಒಂದು ಕಡೆಗೆ ವಾಹನಗಳ ಬಿಡಿಭಾಗಗಳ ಬೆಲೆ ಹೆಚ್ಚಳದಿಂದಾಗಿ ವಾಹನಗಳ ಬೆಲೆ ಏರಿಕೆ ಮತ್ತು ವಾಹನ ಮಾರಾಟ ಕುಸಿತವು ಆಟೋ ಕಂಪನಿಗಳಿಗೆ ಭಾರೀ ಪ್ರಮಾಣದ ನಷ್ಟ ಉಂಟು ಮಾಡುವ ಸಾಧ್ಯತೆಗಳಿವೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಹೋಂಡಾ ಕಂಪನಿಯು ಕೂಡಾ ಕಳೆದ ತಿಂಗಳು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಮೇ ತಿಂಗಳ ವಾಹನ ಮಾರಾಟ ತೀವ್ರ ಕುಸಿತ ಕಾಣುವ ಭೀತಿ ವ್ಯಕ್ತಪಡಿಸಿದೆ. ಬೇಡಿಕೆ ಪ್ರಮಾಣದ ಸರಿದೂಗಿಸಲು ವಿವಿಧ ಕಾರು ಮಾದರಿಗಳ ಮೇಲೆ ಕೆಲವು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಬೆಲೆ ಏರಿಕೆಯ ನಡುವೆಯೇ ಡಿಸ್ಕೌಂಟ್ ನೀಡುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಹೊಸ ಆಫರ್‌ಗಳಲ್ಲಿ ಹೋಂಡಾ ಜಾಝ್ ಕಾರು ಖರೀದಿಯ ಮೇಲೆ ರೂ.21,908 ವರೆಗೆ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಇದರಲ್ಲಿ ಗ್ರಾಹಕರು ಹೊಸ ಕಾರು ಖರೀದಿಯ ಮೇಲೆ ರೂ.10 ಸಾವಿರ ಕ್ಯಾಶ್ ಬ್ಲ್ಯಾಕ್ ಮತ್ತು ರೂ.11,908 ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ಹೊರತುಪಡಿಸಿ ಇನ್ನುಳಿದ ಮಾದರಿಗಳ ಮೇಲೆ ರೂ.15 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದ್ದು, ಎಸ್‌ ಎಂಟಿ ಪೆಟ್ರೋಲ್ ದರ್ಜೆಯಲ್ಲಿ ರೂ. 10 ಸಾವಿರ ಅಥವಾ ರೂ. 12,298 ಮೌಲ್ಯದ ಆಕ್ಸೆಸರಿಸ್ ನೀಡಲಾಗುತ್ತಿದೆ. ರೂ.15 ಸಾವಿರ ಎಕ್ಸ್‌ಚೆಂಜ್ ಆಫರ್‌ನೊಂದಿಗೆ ಅಮೆಜ್ ಕಾರು ಖರೀದಿಯ ಮೇಲೆ ಒಟ್ಟು ರೂ. 27,298 ಆಫರ್ ನೀಡಲಾಗುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಡಬ್ಲ್ಯುಆರ್-ವಿ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಒಟ್ಟು ರೂ. 22,158 ಮೌಲ್ಯದ ವಿವಿಧ ಆಫರ್ ನೀಡುತ್ತಿದ್ದು, ಎಕ್ಸ್‌ಚೆಂಜ್ ಆಫರ್ ಜೊತೆಗೆ ರೂ. 10 ಸಾವಿರ ಅಥವಾ ರೂ. 12,298 ಮೌಲ್ಯದ ಆಕ್ಸೆಸರಿಸ್ ನೀಡಲಾಗುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಹ್ಯಾಚ್‌ಬ್ಯಾಕ್, ಡಬ್ಲ್ಯುಆರ್-ವಿ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳ ಮೇಲೆ ಯಾವುದೇ ಆಫರ್ ನೀಡದ ಹೋಂಡಾ ಕಂಪನಿಯು ಗ್ರಾಹಕರಿಗೆ ಸರಳ ಸಾಲಸೌಲಭ್ಯಗಳನ್ನು ಖಾತ್ರಿಪಡಿಸುತ್ತಿದೆ.

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

ಇನ್ನು ಆಟೋ ಉತ್ಪಾದನಾ ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಏರಿಕೆ ಮಾಡಿ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಿಸಿದ ಹೋಂಡಾ

2021ರ ಅವಧಿಯಲ್ಲೇ ಈಗಾಗಲೇ ಒಂದು ಬಾರಿ ಪ್ರಮುಖ ಕಾರುಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇದೀಗ ಎರಡನೇ ಬಾರಿಗೆ ಏಪ್ರಿಲ್ ತಿಂಗಳಿನಲ್ಲಿ ಮತ್ತೆ ಹೊಸ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ. ಹೋಂಡಾ ಕಾರ್ಸ್ ಕಂಪನಿಯು ಕೂಡಾ ಪೂರ್ವ ನಿಗದಿಯೆಂತೆ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ಶೇ.1.50ರಿಂದ ಶೇ.2ರಷ್ಟು ದುಬಾರಿಯಾಗಿವೆ.

Most Read Articles

Kannada
English summary
Honda Cars Offers May 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X