ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳಿಗೆ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಕೋವಿಡ್ 2ನೇ ಅಲೆ ಹೊಡೆತಕ್ಕೆ ದೇಶಾದ್ಯಂತ ದಿನಂಪ್ರತಿ ಸಾವಿರಾರು ಜನ ಪ್ರಾಣಕಳೆದುಕೊಳ್ಳುತ್ತಿದ್ದು, ಇಂತಹ ಸಂಕಷ್ಟ ಸಮಯದಲ್ಲಿ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಉದ್ಯೋಗಿಗಳ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದೆ.

ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಜೀವ ಮತ್ತು ಜೀವನ ಭದ್ರತೆ ಪ್ರತಿಯೊಬ್ಬರಿಗೂ ಮುಖ್ಯವಾಗಿರುವಾಗ ದುಡಿಯುವ ಸ್ಥಳಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಅದೆಷ್ಟೋ ಜೀವಗಳು ಬಲಿಯಾಗಿದ್ದು, ಹ್ಯುಂಡೈ ಕಾರು ಕಂಪನಿಯಲ್ಲಿ ದುಡಿಯುತ್ತಿರುವ ನೂರಾರು ಉದ್ಯೋಗಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗುತ್ತಿದೆ. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯ ಪರಿಣಾಮ ಕೋವಿಡ್‌ನಿಂದಾಗಿ ಬಹುತೇಕ ಉದ್ಯೋಗಿಗಳು ಗುಣಮುಖರಾಗಿದ್ದರೂ ಇನ್ನು ಕೆಲವು ಉದ್ಯೋಗಿಗಳು ಪ್ರಾಣಕಳೆದುಕೊಂಡದ್ದಾರೆ.

ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಸೋಂಕಿಗೆ ಬಲಿಯದ ಮನೆ ಯಜಮಾನನ್ನು ಕಳೆದುಕೊಂಡಿರುವ ಕುಟುಂಬಗಳು ಇದೀಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಉದ್ಯೋಗಿಗಳಿಗೆ ಆರೋಗ್ಯ ಭದ್ರತೆ ನೀಡಲು ಹ್ಯುಂಡೈ ಕಂಪನಿಯ ಹಲವಾರು ಪರಿಣಾಮ ಕ್ರಮಗಳನ್ನು ಪ್ರಕಟಿಸಿದೆ.

ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಗರಿಷ್ಠ ಪರಿಹಾರ ಲಭ್ಯವಾಗುವ ಆರೋಗ್ಯ ವಿಮೆ ಒದಗಿಸಿದ್ದು, ಇದರ ಜೊತೆಗೆ ಉದ್ಯೋಗಿಗಳಿಗಳಿಗೆ ಮತ್ತು ಅವರ ಅವಂಬಿತ ಕುಟುಂಬಸ್ಥರಿಗೆ ಉಚಿತವಾಗಿ ವ್ಯಾಕ್ಸಿನ್ ಒದಗಿಸಲು ಶಿಬಿರಗಳನ್ನು ಆಯೋಜಿಸುತ್ತಿದೆ.

ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಜೊತೆಗೆ ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಕಂಪನಿಯು ತನ್ನ ಖಾಯಂ ಉದ್ಯೋಗಿಗಳಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ವೇತನ ಹೆಚ್ಚಳವನ್ನು ಘೋಷಿಸುವುದರ ಜೊತೆಗೆ ಕೋವಿಡ್ ಸೋಂಕಿತ ಉದ್ಯೋಗಿಗಳಿಗೆ ವಿಶ್ರಾಂತಿ ಅವಶ್ಯವಿರುವುದರಿಂದ ಸಂಬಳ ಸಹಿತ ಧೀರ್ಘಾವಧಿಯ ರಜೆ, ಕಂಪನಿಯ ಉದ್ಯೋಗಿಗಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸಹ ಆರಂಭಿಸಲಾಗಿದೆ.

ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಐಸಿಯು ಮತ್ತು ವೆಂಟಿಲೇಟರ್ ಸೌಲಭ್ಯವುಳ್ಳ 20 ಹಾಸಿಗೆಯುಳ್ಳ ಕೋವಿಡ್ ಕೇರ್ ಅನ್ನು ತೆರೆದಿರುವ ಹ್ಯುಂಡೈ ಕಂಪನಿಯು ತನ್ನ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗಾಗಿ ಕಾಯ್ದಿರಿಸಿದ್ದು, ಕೋವಿಡ್ ಕೇರ್‌ಗಾಗಿ ವಿಶೇಷ ತಜ್ಞ ವೈದ್ಯರನ್ನು ನೇಮಕ ಮಾಡಿಕೊಂಡಿದೆ.

ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಹಾಗೆಯೇ ಉದ್ಯೋಗಿಗಳಿಗೆ ನಿಗದಿತ ಅವಧಿಯೊಳಗೆ ಆರೋಗ್ಯ ತಪಾಸಣೆ ನಡೆಸುತ್ತಿರುವ ಹ್ಯುಂಡೈ ಕಂಪನಿಯು ಸ್ವಯಂ ಪರಿಶೀಲನೆ ಮಾಡಿಕೊಳ್ಳಲು ಸಹ ಪಲ್ಸ್ ಆಕ್ಸಿಮೀಟರ್ ಮತ್ತು ಇನ್ಫ್ರಾರೆಡ್ ಥರ್ಮಾಮೀಟರ್ ಅನ್ನು ಒಳಗೊಂಡಿರುವ ಕೋವಿಡ್-19 ಸುರಕ್ಷತಾ ಕಿಟ್‌ಗಳನ್ನು ಸಹ ವಿತರಿಸಿದೆ.

ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಉದ್ಯೋಗಿಗಳ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹ್ಯುಂಡೈ

ಇದಲ್ಲದೆ ಕಂಪನಿಯು ಕೋವಿಡ್ ಸೋಂಕಿತ ಉದ್ಯೋಗಿಗಳ ಹೆಚ್ಚುವರಿ ಚಿಕಿತ್ಸೆ ಅವಶ್ಯವಿದ್ದಲ್ಲಿ ಬಡ್ಡಿರಹಿತವಾಗಿ ರೂ. 3 ಲಕ್ಷದ ತನಕ ಸಾಲ ವಿತರಿಸಲಿರುವ ಕಂಪನಿಯು ಗರಿಷ್ಠ ಪರಿಹಾರ ಕ್ರಮಗಳನ್ನು ಪ್ರಕಟಿಸಿದ್ದು, ಅವರ ಕುಟುಂಬಗಳಿಗೂ ಸಾಕಷ್ಟು ಅನುಕೂಲವಾಗಲಿದೆ.

Most Read Articles

Kannada
English summary
Hyundai India announces COVID-19 pandemic support initiative for employees. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X