ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ತನ್ನ ಐ-ಪೇಸ್ ಬ್ಲ್ಯಾಕ್ ಎಡಿಷನ್ ಮಾದರಿಯನ್ನು ಅನಾವರಣಗೊಳಿಸಿದೆ. ಎಸ್‌ಇ ಮತ್ತು ಹೆಚ್‌ಎಸ್‌ಇ ರೂಪಾಂತರಗಳಿರುವ ಐ-ಪೇಸ್ ಸರಣಿಯಲ್ಲಿ ಜಾಗ್ವಾರ್ ಹೊಸ ಬ್ಲ್ಯಾಕ್ ಎಡಿಷನ್ ಅನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್ ಕಾರಿನಲ್ಲಿ ಬ್ಲ್ಯಾಕ್ ಪ್ಯಾಕೇಜ್ ಗ್ರಿಲ್, ಮಿರರ್ ಕ್ಯಾಪ್ಸ್, ವಿಂಡೋ ಸರೌಂಡ್ ಮತ್ತು ಹಿಂಭಾಗದ ಬ್ಯಾಡ್ಜ್‌ಗಳನ್ನು ಸೇರಿವೆ. ಇನ್ನು ಈ ಹೊಸ ಮಾದರಿಯಲ್ಲಿ 5-ಸ್ಪೋಕ್ ವ್ಹೀಲ್ ಗಳು ಸಹ ಬ್ಲ್ಯಾಕ್ ಬಣ್ಣದಲ್ಲಿದೆ. ಇನ್ನು ಒಳಭಾಗದಲ್ಲಿ ಎಬೊನಿ ಲೆದರ್ ಸ್ಪೋರ್ಟ್ಸ್ ಸೀಟುಗಳು ಮತ್ತು ಹೊಂದಾಣಿಕೆಯ ಹೆಡ್‌ಲೈನರ್ ಇವೆ. ಕ್ಯಾಬಿನ್ ಟ್ರಿಮ್ ಬ್ಲ್ಯಾಕ್ ಬಣ್ಣದಲ್ಲಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಇನ್ನು ಈ ಕಾರಿನಲ್ಲಿ ಪನರೋಮಿಕ್ ಸನ್‌ರೂಫ್ ಒಳಗೊಂಡಿದೆ ಇನ್ನು ಈ ಕಾರಿನ ಒಳಭಾಗವು ಕೂಡ ಬ್ಲ್ಯಾಕ್ ಬಣ್ಣದಲ್ಲಿದೆ. ಐ-ಪೇಸ್ ಬ್ಲ್ಯಾಕ್ ಎಡಿಷನ್ ಮಾದರಿಯ ವಿನ್ಯಾಸದಲ್ಲಿ ಬ್ಲ್ಯಾಕ್ ಅಂಶಗಳನ್ನು ನೀಡಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಈ ಐಷಾರಾಮಿ ಎಲೆಕ್ಟ್ರಿಕ್ ಕಾರು ಆಕ್ಸಲ್ ಮೇಲೆ ಇರಿಸಲಾಗಿರುವ ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅವುಗಳನ್ನು 90 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾಗುತ್ತದೆ. 11 ಕಿಲೋವ್ಯಾಟ್ ಆನ್-ಬೋರ್ಡ್ ಚಾರ್ಜರ್ ಮತ್ತು 100 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಈ ಎಲೆಕ್ಟ್ರಿಕ್ ಪವರ್‌ಟ್ರೇನ್ 400 ಬಿಹೆಚ್‍ಪಿ ಪವರ್ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತದೆ. ಜಾಗ್ವಾರ್ ಐ-ಪೇಸ್ ಎಸ್‍ಯುವಿ 470 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಕೇವಲ 4.8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ 200 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಜಾಗ್ವಾರ್ ಐ-ಪೇಸ್ ಎಸ್‍ಯುವಿ ಹಲವಾರು ಪುರಸ್ಕಾರಗಳನ್ನು ಮತ್ತು 80ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಹೊಸ ಕಾರಿಗಾಗಿ 7.4 ಕಿಲೋವ್ಯಾಟ್ ವಾಲ್ ಮೌಂಟ್ ಎಸಿ ಚಾರ್ಜರ್ ನೀಡಲಿರುವ ಕಂಪನಿಯು ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆಗೂಡಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 45 ನಿಮಿಷದಲ್ಲಿ ಶೇ.80 ಚಾರ್ಜಿಂಗ್ ಮಾಡಬಹುದಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಇನ್ನು ಹೊಸ ಕಾರಿನಲ್ಲಿ ಒಳಭಾಗದ ಫೀಚರ್ಸ್‌ಗಳು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ಸ್, ಟೈಲ್ ಲೈಟ್ಸ್, ಫುಲ್ ಸೈಜ್ ಫಿಕ್ಸ್ಡ್ ಗ್ಲಾಸ್ ರೂಫ್, ಡ್ಯುಯಲ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್ ಕಂಟ್ರೊಲ್ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್

ಈ ಹೊಸ ಕಾರಿನ ಹೈ ಎಂಡ್ ಮಾದರಿಯಲ್ಲಿ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಹ್ಯಾಂಡ್ ಫ್ರೀ ಬೂಟ್ ಓಪನ್, ಅಡಾಪ್ಟಿವ್ ಕ್ರೂಸ್ ಕಂಟ್ರೊಲ್, ಹೆಡ್‌ಅಪ್ ಡಿಸ್‌ಪ್ಲೇ, ವಿಂಡ್‌ಸಾರ್ ಲೆದರ್ ಸ್ಪೋಟ್ ಸೀಟ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೊಲ್ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ.

Most Read Articles

Kannada
English summary
Jaguar I-Pace Black Edition Unveiled. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X