Just In
- 9 hrs ago
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- 10 hrs ago
ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಫೋಕ್ಸ್ವ್ಯಾಗನ್ ಟಿಗ್ವಾನ್ ಎಸ್‌ಯುವಿ
- 11 hrs ago
ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ
- 11 hrs ago
ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು
Don't Miss!
- Sports
ಐಪಿಎಲ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್
- News
ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Movies
ಬಿಗ್ಬಾಸ್: ಕೊಡಲಿ ಬಳಸಿ ನಾಮಿನೇಷನ್ ಕತ್ತಿಯಿಂದ ಬಚಾವಾದ ಗೀತಾ ಭಟ್
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪಾರ್ಕಿಂಗ್ ನೀತಿ 2.0- ಇನ್ಮುಂದೆ ಮನೆ ಮುಂದಿನ ವಾಹನ ನಿಲುಗಡೆಗೂ ದುಬಾರಿ ಶುಲ್ಕ ಫಿಕ್ಸ್
ದೇಶಾದ್ಯಂತ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯು ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಹೊಸ ವಾಹನಗಳ ಪರಿಣಾಮ ದೇಶದ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆಯು ತಲೆದೊರಿದೆ.

ಪ್ರತಿ ವರ್ಷ ದೇಶಾದ್ಯಂತ ಸರಾಸರಿಯಾಗಿ 70 ಲಕ್ಷದಿಂದ 80 ಲಕ್ಷ ಹೊಸ ವಾಹನಗಳು ಮಾರಾಟವಾಗುತ್ತಿದ್ದು, ಬಹುತೇಕ ವಾಹನ ಖರೀದಿದಾರರು ಸ್ವಂತ ಪಾರ್ಕಿಂಗ್ ಸೌಲಭ್ಯವಿಲ್ಲವಾದರೂ ಸಾರ್ವಜನಿಕ ಸ್ಥಳಗಳಲ್ಲೇ ವಾಹನ ನಿಲುಗಡೆ ಸೌಲಭ್ಯವನ್ನು ಬಳಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಮುಖ ನಗರಗಳಲ್ಲಿ ಮಾಲಿನ್ಯ ಸಮಸ್ಯೆಯ ಜೊತೆಗೆ ಪಾರ್ಕಿಂಗ್ ಸಮಸ್ಯೆಯು ಕೂಡಾ ಬಿಗಡಾಯಿಸುತ್ತಿದ್ದು, ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ನಮ್ಮ ಬೆಂಗಳೂರಿನಲ್ಲಿ ಪಾರ್ಕಿಂಗ್ ನೀತಿ 2.0 ಜಾರಿಗೆ ತರಲಾಗುತ್ತಿದೆ.

ಪಾರ್ಕಿಂಗ್ ಸಮಸ್ಯೆಗೆ ನಗರ ಭೂ ಸಾರಿಗೆ ನಿರ್ದೇಶನಾಲಯ(ಡಲ್ಟ್) ಸಿದ್ಧಪಡಿಸಿರುವ ಪರಿಷ್ಕೃತ ಪಾರ್ಕಿಂಗ್ ನೀತಿ 2.0ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಸಹ ಅನುಮೋದನೆ ನೀಡಿದ್ದು, ಮುಂದಿನ 6 ತಿಂಗಳು ಅಥವಾ 1 ವರ್ಷದ ಒಳಗಾಗಿ ಹೊಸ ನೀತಿಯು ಕಟ್ಟುನಿಟ್ಟಾಗಿ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.

ಹೊಸ ಪಾರ್ಕಿಂಗ್ ನೀತಿಯನ್ನು ಕ್ರಮಬದ್ದವಾಗಿ ಜಾರಿಗೆ ತರುವಂತೆ ಡಲ್ಟ್ ಮತ್ತು ಬಿಬಿಎಂಪಿಗೆ ಆದೇಶಿಸಿರುವ ರಾಜ್ಯ ಸರ್ಕಾರವು ಹೊಸ ನೀತಿಯನ್ನು ಪ್ರದೇಶಗಳಿಗೆ ಅನುಗುಣವಾಗಿ ಜಾರಿಗೆ ತರಲು ಸಮ್ಮತಿ ಸೂಚಿಸಿದ್ದು, ಹೊಸ ನೀತಿ ಜಾರಿ ನಂತರ ನಗರದ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಉಚಿತವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯು ಇರುವುದಿಲ್ಲ.

ಬೆಂಗಳೂರು ನಗರವೊಂದರಲ್ಲೇ ಈಗಾಗಲೇ ಒಂದು ಅಂದಾಜಿನ ಪ್ರಕಾರ ಸುಮಾರು 90 ಲಕ್ಷಕ್ಕೂ ಅಧಿಕ ವಾಹನಗಳಿದ್ದು, ಆರ್‌ಟಿಒ ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿ ಪ್ರತಿ ದಿನ ಕನಿಷ್ಠ ಒಂದು ಸಾವಿರದಿಂದ ಒಂದೂವರೆ ಸಾವಿರದಷ್ಟು ಹೊಸ ವಾಹನಗಳು ನೋಂದಣಿಯಾತ್ತಿವೆ. ಅಂದರೆ ಬೆಂಗಳೂರಿನಲ್ಲಿ ಪ್ರತಿ ತಿಂಗಳು ಕನಿಷ್ಠ 30 ಸಾವಿರ ವಾಹನಗಳು ರಸ್ತೆಗಿಳಿಯುತ್ತಿದ್ದು, ಹೊಸದಾಗಿ ರಸ್ತೆಗಿಳಿಯುವ ವಾಹನಗಳಿಂದ ಟ್ರಾಫಿಕ್ ದಟ್ಟಣೆ ಹೆಚ್ಚಿತ್ತಿರುವುದಲ್ಲದೆ ಪಾರ್ಕಿಂಗ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಹೊಸ ವಾಹನ ಖರೀದಿ ಮಾಡುವ ಶೇ.60ರಷ್ಟು ಗ್ರಾಹಕರು ಸೂಕ್ತವಾದ ಪಾರ್ಕಿಂಗ್ ಸೌಲಭ್ಯವಿಲ್ಲವಾದರೂ ಸಾರ್ವಜನಿಕ ಸ್ಥಳಗಳನ್ನೇ ಅಕ್ರಮಿಸಿಕೊಂಡು ಪಾರ್ಕಿಂಗ್ ಸೌಲಭ್ಯವನ್ನಾಗಿ ಬಳಕೆ ಮಾಡುತ್ತಿದ್ದು, ಹೊಸ ಪಾರ್ಕಿಂಗ್ ನೀತಿಯು ಇಂತಹ ಪ್ರವೃತ್ತಿಗೆ ಇದೀಗ ಬ್ರೇಕ್ ಹಾಕುತ್ತಿದೆ.

ಪಾರ್ಕಿಂಗ್ ಪಾಲಿಸಿ 2.0 ಜಾರಿಗೆ ಬಂದ ನಂತರ ಹೊಸ ವಾಹನಗಳ ಖರೀದಿ ಕೂಡಾ ಮತ್ತಷ್ಟು ಕಠಿಣವಾಗಲಿದ್ದು, ಪಾರ್ಕಿಂಗ್ ಸೌಲಭ್ಯದ ಬಗೆಗೆ ಸ್ಪಷ್ಟನೆ ನೀಡಿದ ನಂತರವೇ ಹೊಸ ವಾಹನ ಖರೀದಿಗೆ ಒಪ್ಪಿಗೆ ಸಿಗಲಿದೆ.

ಸ್ವಂತ ಪಾರ್ಕಿಂಗ್ ಸೌಲಭ್ಯವಿದ್ದಲ್ಲಿ ಹೊಸ ವಾಹನಗಳ ಖರೀದಿಗೆ ಸುಲಭವಾಗಿ ಅವಕಾಶ ಸಿಗಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವುದಾದರೆ ಹೊಸ ಪಾರ್ಕಿಂಗ್ ನೀತಿ ಅಡಿಯಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಸಲು ಸಿದ್ದರಾಗಬೇಕಾಗುತ್ತದೆ.

ಪ್ರದೇಶವಾರು ಪಾರ್ಕಿಂಗ್ ಯೋಜನೆ ಜಾರಿಯಾಗುವುದರಿಂದ ಮುಖ್ಯ ರಸ್ತೆಯ ಬದಿಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಒಂದು ರೀತಿಯ ಶುಲ್ಕ, ಮಾರುಕಟ್ಟೆ ಬಳಿಯ ನಿಲುಗಡೆ ಮಾಡುವ ವಾಹನಗಳಿಗೆ ಒಂದು ರೀತಿಯ ಪಾರ್ಕಿಂಗ್ ಶುಲ್ಕ ಮತ್ತು ಮನೆ ಮುಂದೆ ನಿಲುಗಡೆಯಾಗುವ ವಾಹನಗಳಿಗೆ ವಾರ್ಷಿಕವಾಗಿ ಶುಲ್ಕು ವಸೂಲಿ ಮಾಡುವ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ.
MOST READ: ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಕಾರು ಖರೀದಿದಾರರಿಗೆ ರೂ. 3 ಲಕ್ಷದ ತನಕ ಸಬ್ಸಡಿ

ಹೊಸ ಪಾರ್ಕಿಂಗ್ ನೀತಿಯೊಂದಿಗೆ ವಾಹನಗಳ ನಿಲುಗಡೆಯನ್ನು ಅಚ್ಚುಕಟ್ಟಾಗಿ ನಿಲ್ಲಿಸಲು ಉತ್ತೇಜಿಸುವುದು ಮತ್ತು ಸ್ವಂತ ವಾಹನಗಳ ಬಳಕೆಯನ್ನು ತಗ್ಗಿಸುವುದು ಹಾಗೆಯೇ ಸಾರ್ವಜನಿಕ ಬಳಕೆಯ ವಾಹನಗಳ ಬಳಕೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಮಾಹಿತಿಯೊಂದರ ಪ್ರಕಾರ, ಹೊಸ ಪಾರ್ಕಿಂಗ್ ನೀತಿ ಅಡಿಯಲ್ಲಿ ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವ ಸಣ್ಣ ಕಾರುಗಳಿಗೆ ವಾರ್ಷಿಕವಾಗಿ ರೂ. 1 ಸಾವಿರದಿಂದ ರೂ. 2 ಸಾವಿರ, ಮಧ್ಯಮ ಗಾತ್ರದ ಕಾರುಗಳಿಗೆ ರೂ. 3 ಸಾವಿರದಿಂದ ರೂ.4 ಸಾವಿರ ಹಾಗೆಯೇ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಗರಿಷ್ಠ ರೂ. 5 ಸಾವಿರ ತನಕ ಪಾರ್ಕಿಂಗ್ ಶುಲ್ಕು ನಿಗದಿಪಡಿಸಬಹುದಾಗಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಆದರೆ ಹೊಸ ಪಾರ್ಕಿಂಗ್ ನೀತಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೂ ಪಾರ್ಕಿಂಗ್ ಸೌಲಭ್ಯವನ್ನು ನಿಗದಿಪಡಿಸಲಾಗುತ್ತಾ ಎನ್ನುವ ಪ್ರಶ್ನೆಗೆ ಸ್ಪಷ್ಟನೆ ಸಿಕ್ಕಿಲ್ಲ. ವಸತಿ ಪ್ರದೇಶಗಳಲ್ಲಿ ಹೊರತುಪಡಿಸಿ ಪ್ರಮುಖ ರಸ್ತೆಗಳಲ್ಲಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಎಲ್ಲಾ ಮಾದರಿಯ ವಾಹನಗಳಿಗೆ ಗಂಟೆಗಳ ಆಧಾರದ ಮೇಲೆ ಶುಲ್ಕ ವಿಧಿಸಬಹುದಾದ ಸಾಧ್ಯತೆಗಳಿವೆ.

ಸದ್ಯಕ್ಕೆ ಹೊಸ ಪಾರ್ಕಿಂಗ್ ನೀತಿಯ ಜಾರಿಗೆ ಅನುಮೂದನೆಗೆ ಗ್ರಿನ್ ಸಿಗ್ನಲ್ ಸಿಕ್ಕಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಪಾರ್ಕಿಂಗ್ ನೀತಿಯು ಏನೆಲ್ಲಾ ಅಂಶಗಳನ್ನು ಒಳಗೊಂಡಿರಲಿದೆ ಎನ್ನುವುದು ಬಿಬಿಎಂಪಿಯು ಪ್ರಕಟಣೆ ಮಾಡಲಿದೆ.