2021ರ ಸೊನೆಟ್ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಕಿಯಾ ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ ಜನಪ್ರಿಯ ಸೆಲ್ಟೊಸ್ ಮತ್ತು ಸೊನೆಟ್ ಕಾರಿನ 2021ರ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಕಿಯಾ ಕಂಪನಿಯು ಹೊಸ ಕಾರುಗಳಿಗಾಗಿ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟಿಸಿದೆ.

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

2021ರ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳು ಬ್ರಾಂಡ್ ನ್ಯೂ ಲೊಗೊ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗಿದೆ. ಇದರ ಜೊತೆಗೆ ಆಸಕ್ತ ಗ್ರಾಹಕರಿಗಾಗಿ ಕಿಯಾ ಕಂಪನಿಯು ವಿವಿಧ ಸೌಲಭ್ಯಗಳನ್ನು ಹೊಂದಿರುವ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಖರೀದಿಗಾಗಿ ಪ್ರತ್ಯೇಕ ದರ ನಿಗದಿಪಡಿಸಲಾಗುತ್ತದೆ.

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಸೊನೆಟ್ ಕಾರು ಹೊಸ ಆವೃತ್ತಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13.35 ಲಕ್ಷ ಬೆಲೆ ಹೊಂದಿದ್ದು, ಎರಡು ಕಾರಿಗಳಿಗೂ ಪ್ರತ್ಯೇಕ ಸೌಲಭ್ಯಗಳನ್ನು ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಲಾಗಿದೆ.

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸೊನೆಟ್ ಕಾರು ಮಾದರಿಗಾಗಿ ಕಿಯಾ ಇಂಡಿಯಾ ಕಂಪನಿಯು ವಿಶೇಷ ವಿನ್ಯಾಸದ ಕ್ರೊಮ್ ಗಾರ್ನಿಶ್ ಆಯ್ಕೆಗಳನ್ನು ನೀಡಿದ್ದು, ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್, ಫಾಗ್ ಲ್ಯಾಂಪ್, ರಿಯರ್ ವ್ಯೂ ಮಿರರ್, ವೀಲ್ಹ್ ಆರ್ಚ್, ಬಾಡಿ ಸೈಡ್ ಮೊಲ್ಡಿಂಗ್, ವಿಂಡೋ ಬಿಡಿಂಗ್, ಡೋರ್ ಹ್ಯಾಂಡಲ್, ಫಿಂಗರ್ ಗಾರ್ಡ್, ಬೂಟ್, ರಿಯರ್ ರಿಫ್ಲೆಕ್ಟರ್, ನಂಬರ್ ಪ್ಲೇಟ್‌ಗಳಲ್ಲಿ ಕ್ರೊಮ್ ಗಾರ್ನಿಶ್ ನೀಡಲಾಗಿದೆ.

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಹಾಗೆಯೇ ಪ್ರೀಮಿಯಂ ಒದಿಸಲು ಹೊಸ ಕಾರಿನಲ್ಲಿ ಬಂಪರ್ ಪ್ರೊಟೆಕ್ಟರ್ ಸ್ಟಾಲಿನ್ ಬ್ಲ್ಯಾಕ್, ಮಡ್ ಫ್ಲಾಪ್, ಟ್ವಿನ್ ಹುಡ್ ಸ್ಕೂಪ್, ಸೈಡ್ ಫಿನ್, ಡೋರ್ ವಿಸರ್, ಸೈಡ್ ಸ್ಟೆಪ್, ಡೋರ್ ಸಿಲ್ ಗಾರ್ಡ್, ಡೋರ್ ಸ್ಟಿಕರ್ಸ್, ಬ್ಲೈಂಡ್ ಸ್ಪಾಟ್ ಮಿರರ್, ಕಾರ್ ಕವರ್, 3ಡಿ ಫ್ಲೊರ್ ಮ್ಯಾಟ್, ಸನ್‌ಶೆಡ್, ಹೆಡ್ ರೆಸ್ಟ್ ಕುಷನ್, ವ್ಯಾಕ್ಯೂಮ್ ಕ್ಲಿನರ್ ಮತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿರುವ ಲೆದರ್ ಆಸನಗಳನ್ನು ಹೊಂದಿದೆ.

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಇನ್ನು 2021ರ ಸೊನೆಟ್ ಮಾದರಿಯಲ್ಲಿ ಕಂಪನಿಯು ಹೊಸ ಲೊಗೊ ಹೊರತುಪಡಿಸಿ ಯಾವುದೇ ಹೊಸ ಬದಲಾವಣೆ ಪರಿಚಯಿಸಿಲ್ಲವಾದರೂ ಹೊಸ ಲೊಗೊ ವಿನ್ಯಾಸವು ಕಿಯಾ ಕಾರುಗಳ ಬಲಿಷ್ಠತೆ ಪೂರಕವಾದ ಹೊರನೋಟ ಹೊಂದಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಸೊನೆಟ್ ಕಾರು ಮಾದರಿಯು ಹೊಸ ಲೊಗೊ ಹೊರತುಪಡಿಸಿ ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆ ತಾಂತ್ರಿಕ ಅಂಶಗಳನ್ನು ಮುಂದುವರಿಸಿದ್ದು, ಹೊಸ ಕಾರು 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಹೊಸ ಸೊನೆಟ್ ಮತ್ತು ಸೆಲ್ಟೊಸ್ ಕಾರುಗಳಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

ಸಬ್ ಫೋರ್ ಮೀಟರ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಿಯಾ ಹೊಸ ಕಾರು ಮಾದರಿಯು ಬಿಡುಗಡೆಯ ನಂತರ ಅತಿ ಕಡಿಮೆ ಅವಧಿಯ ಅತಿ ಹೆಚ್ಚು ಬೇಡಿಕೆ ದಾಖಲಿಸಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾದರಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

Most Read Articles

Kannada
English summary
2021 Kia Sonet Accessories Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X