ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

ಕೊರಿಯಾದ ವಾಹನ ತಯಾರಕ ಕಂಪನಿಯಾದ ಕಿಯಾ ತನ್ನ ನಾಲ್ಕನೇ ತಲೆಮಾರಿನ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಮಾದರಿಯನ್ನು ಕೊರಿಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ ಐಷಾರಾಮಿ ಫೀಚರ್ಸ್ ಗಳೊಂದಿಗೆ ನೂತನ ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

4-ಸೀಟರ್ ಕಿಯಾ ಕಾರ್ನಿವಲ್ ಮಾದರಿಯು ಸವಾರಿ ಗುಣಮಟ್ಟವನ್ನು ಹೆಚ್ಚಿಸಲು ವಿಶಾಲವಾದ ಸ್ಪೇಸ್ ಮತ್ತು ಕಾರ್ನೀವಲ್ ಹೈ ಲಿಮೋಸಿನ್‌ನ ವಿವಿಧ ಅನುಕೂಲತೆ ವಿಶೇಷಣಗಳ ಆಧಾರದ ಮೇಲೆ ಹೆಚ್ಚಿನ ಟ್ಯೂನ್ಡ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿರುವ ಮಾದರಿ ಎಂದು ಕಿಯಾ ಹೇಳಿಕೊಂಡಿದೆ. ಕಿಯಾ ಎಂಜಿನಿಯರ್‌ಗಳು ಎರಡನೇ ಸಾಲಿನ ಪ್ರಯಾಣಿಕರಿಗೆ ವಿಭಿನ್ನವಾದ ಸೌಂಕರ್ಯಗಳನ್ನು ಹೆಚ್ಚಿಸುವ ಮೂಲಕ ಐಷಾರಾಮಿ ಸೌಲಭ್ಯವನ್ನು ಹೆಚ್ಚಿಸಿದ್ದಾರೆ.

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

4-ಸೀಟರ್ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ ಒಂದೇ ಸ್ಮಾರ್ಟ್‌ಸ್ಟ್ರೀಮ್ 3.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಪಿವಿಯ ಸಸ್ಪೆಂಕ್ಷನ್ ಸೆಟಪ್ ಗಟ್ಟಿಯಾಗಿದೆ ಮತ್ತು ಶಾಕ್ ಅಬ್ಸಾರ್ಬರ್‌ನ ಡ್ಯಾಂಪಿಂಗ್ ಬಲವು ವಿಭಿನ್ನ ಸವಾರಿ ಗುಣಮಟ್ಟವನ್ನು ಒದಗಿಸಲು ಹೊಂದುವಂತೆ ಮಾಡುತ್ತದೆ.

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

4-ಸೀಟರ್ ಕಿಯಾ ಕಾರ್ನಿವಲ್ ಮಾದರಿಯ ಹಿಂಭಾಗದ ಲಿಮೋಸಿನ್ ಸೀಟ್ ನಲ್ಲಿ 7 ಇಂಚಿನ ಟಚ್-ಟೈಪ್ ಇಂಟಿಗ್ರೇಟೆಡ್ ಕಂಟ್ರೋಲರ್, ರಿಯರ್ ಸೀಟ್ ಕೋಲ್ಡ್/ಹಾಟ್ ಕಪ್ ಹೋಲ್ಡರ್, ರಿಯರ್ ಸೀಟ್ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಂ, ರಿಯರ್ ಸೀಟ್ ಎಕ್ಸ್‌ಕ್ಲೂಸಿವ್ ಟೇಬಲ್, ಫೂಟ್ ಮಸಾಜರ್ ಮತ್ತು ಕೂಲ್/ಹಾಟ್ ಸ್ಟೊರೇಜ್ ಯುನಿಟ್ ಅನ್ನು ಹೊಂದಿದೆ.

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

ಕಿಯಾ ಉನ್ನತ-ಗುಣಮಟ್ಟದ ಸೀಟ್ ಫೋಮ್ ಮತ್ತು ಮೂರು ಆಯಾಮದ ಕ್ವಿಲ್ಟೆಡ್ ನಪ್ಪಾ ಲೆದರ್ ಅನ್ನು ಹಿಂದಿನ ಲಿಮೋಸಿನ್ ಸೀಟಿಗೆ ಸೇರಿಸಿದೆ. ಇದು ‘ಪ್ರೀಮಿಯಂ ರಿಲ್ಯಾಕ್ಸೇಶನ್ ಸೀಟ್' ಫಂಕ್ಷನ್ ನೊಂದಿಗೆ ಬರುತ್ತದೆ

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

ಇದು ಸೊಂಟವನ್ನು ಹಿಂಭಾಕ್ಕೆ ಭಾಗಿಸಲು ಹಾಯ ಮಾಡುತ್ತದೆ ಮತ್ತು ಆರಾಮವಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಈ ಸೀಟುಗಳು ಮೀಸಲಾದ ಟೇಬಲ್ ಅಳವಡಿಸಲಾಗಿದೆ.

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

ಪ್ರಯಾಣಿಕರು ಸೀಟ್ ನಲ್ಲಿ 7 ಇಂಚಿನ ಟಚ್-ಟೈಪ್ ಇಂಟಿಗ್ರೇಟೆಡ್ ಕಂಟ್ರೋಲ್ ನೊಂದಿಗೆ ಹಿಂಭಾಗದ ಸೀಟುಗಳು ಅಥವಾ ಸ್ಮಾರ್ಟ್ ಫೋನ್ ಅಪ್ಲಿಕೇಶನ್ ನಡುವೆ ನಿರ್ವಹಿಸಬಹುದು. ಹಿಂಭಾಗದ ಸೀಟ್ ಲೈಟಿಂಗ್, ಎಸಿ, 21.5-ಇಂಚಿನ ಸ್ಮಾರ್ಟ್ ಮಾನಿಟರ್ ಮತ್ತು ಕಾಲು ಮಸಾಜರ್ ಅನ್ನು ಸಂಯೋಜಿತ ಕಂಟ್ರೋಲರ್ ಗಳಿಂದ ನಿಯಂತ್ರಿಸಬಹುದಾಗಿದೆ.

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

ಬೂಟ್‌ನಲ್ಲಿ, ಎಲ್‌ಇಡಿ ಲೈಟಿಂಗ್‌ನೊಂದಿಗೆ ಎಲ್‌ಇಡಿ ಹ್ಯಾಂಗರ್ ಮತ್ತು ಕೆಳಭಾಗದಲ್ಲಿರುವ ಲಗೇಜ್ ಬಾಕ್ಸ್ ಶೇಖರಣೆಯ ಅನುಕೂಲವನ್ನು ಹೆಚ್ಚಿಸುತ್ತದೆ. ಎಂಪಿವಿ ರಿಮೋಟ್ ಸ್ಮಾರ್ಟ್ ಪಾರ್ಕಿಂಗ್ ಅಸಿಸ್ಟ್, ರಿಮೋಟ್ 360 ಡಿಗ್ರಿ ವ್ಯೂ ಮತ್ತು ರೇನ್ ಸೆನ್ಸರ್ ಇತ್ಯಾದಿಗಳನ್ನು ಹೊಂದಿದೆ.

ಐಷಾರಾಮಿ ಕಿಯಾ ಕಾರ್ನಿವಲ್ ಹೈ ಲಿಮೋಸಿನ್ 4-ಸೀಟರ್ ಬಿಡುಗಡೆ

ಕಿಯಾ ಕಾರ್ನಿವಲ್ ಸ್ಮಾರ್ಟ್‌ಸ್ಟ್ರೀಮ್ 3.5-ಲೀಟರ್ ವಿ 6 ಪೆಟ್ರೋಲ್ ಎಂಜಿನ್ 240 ಬಿಹೆಚ್‌ಪಿ ಪವರ್ ಮತ್ತು 314 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ,

Most Read Articles

Kannada
English summary
4-Seater Kia Carnival High Limousine Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X