ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಲ್ಯಾಂಬೊರ್ಗಿನಿ ಇಂಡಿಯಾ ತನ್ನ ಉರುಸ್ ಸೂಪರ್ ಎಸ್‌ಯುವಿಯನ್ನು ಹೊಸ ಅರಾನ್ಸಿಯೋ ಲಿಯೋನಿಸ್ ಪರ್ಲ್ ಕ್ಯಾಪ್ಸುಲ್ ಡಿಸೈನ್ ಎಡಿಷನ್ ಮೂಲಕ ಹೊರತರುತ್ತಿದೆ. ಲ್ಯಾಂಬೊರ್ಗಿನಿ ಸೂಪರ್ ಎಸ್‌ಯುವಿಯ ವಿಶಿಷ್ಟ ಶೈಲಿ ಹಾಗೂ ಪರ್ಫಾಮೆನ್ಸ್ ಅನ್ನು ಪ್ರದರ್ಶಿಸಲು ಇಟಲಿ ಮೂಲದ ಲ್ಯಾಂಬೊರ್ಗಿನಿ ಕಂಪನಿಯು ಈ ಕಾರಿನ ಮೂಲಕ ಮೊದಲ ಬಾರಿಗೆ ವಿಶೇಷ ಕಸ್ಟಮೈಸ್ ಆಯ್ಕೆಯನ್ನು ನೀಡುತ್ತಿದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ನಾವು ಇತ್ತೀಚಿಗೆ ಹೊಸ ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯನ್ನು ಮುಂಬೈನ ಪ್ರಭಾದೇವಿಯಲ್ಲಿರುವ ಕಂಪನಿಯ ಶೋರೂಂನಲ್ಲಿ ವೀಕ್ಷಿಸಿದೆವು. ಈ ಕಾರಿನ ಫಸ್ಟ್ ಲುಕ್ ವಾಕ್ ಅರೌಂಡ್ ಅನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಎಕ್ಸ್'ಟಿರಿಯರ್ ಹಾಗೂ ಡಿಸೈನ್

ಈ ಎಸ್‌ಯುವಿಯನ್ನು ಜಿಯಾಲೊ ಇಂಟಿ, ಅರಾನ್ಸಿಯೋ ಬೋರಿಯಾಲಿಸ್, ವರ್ಡೆ ಮಾಂಟಿಸ್ ಎಂಬ ಹೈ-ಗ್ಲೋಸ್ ನಾಲ್ಕು-ಲೇಯರ್ ವಿಶೇಷ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಇದರ ಜೊತೆಗೆ ಈ ಎಸ್‌ಯುವಿಯು ಹೈ ಗ್ಲೋಸ್ ಬ್ಲ್ಯಾಕ್ ರೂಫ್, ರೇರ್ ಡಿಫ್ಯೂಸರ್ ಹಾಗೂ ಸ್ಪಾಯ್ಲರ್ ಲಿಪ್'ಗಳೊಂದಿಗೆ ಮಾರಾಟವಾಗಲಿದೆ. ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಇಂಟರ್ನಲ್ ಕಸ್ಟಮೈಸ್ ನೀಡಲಾಗುತ್ತದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಮುಂಭಾಗದಲ್ಲಿ ಈ ಎಸ್‌ಯುವಿಯು ಗ್ಲೋಸ್ ಬ್ಲ್ಯಾಕ್‌ನಲ್ಲಿರುವ ಗ್ರಿಲ್, ಹೆಡ್‌ಲೈಟ್ ಯುನಿಟ್ ಹಾಗೂ ಗ್ರಿಲ್‌ನ ಮುಂಭಾಗದಲ್ಲಿ ಕ್ಯಾಮೆರಾದಂತೆ ಕಾಣುವ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್'ಗಾಗಿ ಇರುವ ಸೆನ್ಸಾರ್ ಅನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಕಪ್ಪು ಬಣ್ಣದಲ್ಲಿರುವ ಬಂಪರ್'ನ ಕೆಳಭಾಗವು ದೊಡ್ಡ ಏರ್ ಡಕ್ಟ್ ಹೊಂದಿದ್ದು, ಈ ಎಸ್‌ಯುವಿಗೆ ಅಗ್ರೇಸಿವ್ ಲುಕ್ ನೀಡುತ್ತದೆ. ಇನ್ನು ಸೈಡ್ ಪ್ರೊಫೈಲ್‌'ನಲ್ಲಿ ಗ್ಲೋಸಿ ಕಪ್ಪು ಬಣ್ಣದಲ್ಲಿರುವ 23 ಇಂಚಿನ ಅಲಾಯ್ ವ್ಹೀಲ್ ಅಳವಡಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಗ್ರಾಹಕರು ಬಯಸಿದರೆ 22 ಇಂಚಿನ ಅಲಾಯ್ ವ್ಹೀಲ್ ಅಳವಡಿಸಿಕೊಳ್ಳಬಹುದು. ಸ್ಟ್ಯಾಂಡರ್ಡ್ ಉರುಸ್ ಮಾದರಿಯಲ್ಲಿ 20 ಇಂಚಿನ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯಲ್ಲಿರುವ ಕ್ಲಾಡಿಂಗ್ ಗ್ಲೋಸಿ ಬ್ಲಾಕ್ ಬಣ್ಣವನ್ನು ಹೊಂದಿದ್ದರೆ ಸ್ಟ್ಯಾಂಡರ್ಡ್ ಮಾದರಿಯ ಉರುಸ್ ಮ್ಯಾಟ್ ಬ್ಲಾಕ್ ಬಣ್ಣದ ಕ್ಲಾಡಿಂಗ್ ಹೊಂದಿದೆ. ಈ ಗ್ಲೋಸ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಲ್ಯಾಂಬೊರ್ಗಿನಿ ಕಂಪನಿಯ ಸ್ಟೈಲ್ ಪ್ಯಾಕೇಜ್‌ನ ಭಾಗವಾಗಿ ನೀಡಲಾಗುತ್ತದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಉರುಸ್ 440 ಎಂಎಂ ಮೂಲಕ ಅತಿದೊಡ್ಡ ಕಾರ್ಬನ್-ಸೆರಾಮಿಕ್ ಬ್ರೇಕ್ ರೋಟಾರ್‌ಗಳನ್ನು ಹೊಂದಿರುವ ಪ್ರಪಂಚದ ಏಕೈಕ ಉತ್ಪಾದನಾ ಕಾರು. ಈ ಬ್ರೇಕ್‌ಗಳು 305 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಈ ಎಸ್‌ಯುವಿಗೆ ನೆರವಾಗುತ್ತವೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಹಿಂಭಾಗದಲ್ಲಿ ಕಾರಿನ ಬೂಟ್‌ಗೆ ಅಡ್ಡಲಾಗಿ ಲಿಪ್ ಸ್ಪಾಯ್ಲರ್ ನೀಡಲಾಗಿದೆ. ಈ ಲಿಪ್ ಸ್ಪಾಯ್ಲರ್ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಕಾರಿನ ಬಾಡಿ ಕಲರ್'ನಲ್ಲಿದ್ದರೆ,ಪರ್ಲ್ ಕ್ಯಾಪ್ಸುಲ್ ಮಾದರಿಯಲ್ಲಿ ಗ್ಲೋಸಿ ಬ್ಲಾಕ್ ಬಣ್ಣದಲ್ಲಿದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಈ ಎಸ್‌ಯುವಿಯ ಬೂಟ್‌ನಾದ್ಯಂತ ಲ್ಯಾಂಬೋರ್ಗಿನಿ ಬ್ಯಾಡ್ಜಿಂಗ್ ನೀಡಲಾಗಿದೆ. ಈ ಬೂಟ್ 615 ಲೀಟರ್ ಸ್ಪೇಸ್ ಹೊಂದಿದೆ. ಹಿಂದಿನ ಸೀಟ್ ಅನ್ನು ಫೋಲ್ಡ್ ಮಾಡಿದರೆ ಇನ್ನಷ್ಟು ಸ್ಪೇಸ್ ಪಡೆಯಬಹುದು.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಇಂಟಿರಿಯರ್

ಪರ್ಲ್ ಕ್ಯಾಪ್ಸುಲ್ ಆವೃತ್ತಿಯ ಇಂಟಿರಿಯರ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ. ಒಂದು ಕಪ್ಪು ಬಣ್ಣವಾಗಿದ್ದರೆ ಇನ್ನೊಂದು ಬಣ್ಣವನ್ನು ಎಕ್ಸ್'ಟಿರಿಯರ್ ಬಣ್ಣದಿಂದ ಆಯ್ಕೆ ಮಾಡಿಕೊಳ್ಳಬಹುದು.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯು ಕ್ಯೂ-ಸಿಟುರಾ ಸೀಟಿನ ಮೇಲೆ ಲೋಗೋ ಎಂಬ್ರಾಯಿಡರಿ ಹೊಂದಿರುವ ಹೆಕ್ಸಾಗನ್ ಶೇಪಿನ ಅಪ್ ಹೊಲೆಸ್ಟರಿ, ಜೊತೆಗೆ ಕಾರ್ಬನ್ ಫೈಬರ್ ಹಾಗೂ ಬ್ಲಾಕ್ ಆನೊಡೈಸ್ಡ್ ಅಲ್ಯೂಮಿನಿಯಂ ವಿವರಗಳನ್ನು ಹೊಂದಿದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಪರ್ಲ್ ಕ್ಯಾಪ್ಸುಲ್ ಆವೃತ್ತಿಯಲ್ಲಿ ಆರಾಮದಾಯಕವಾಗಿ ಕೂರಲು ಪೂರ್ತಿಯಾಗಿ ಎಲೆಕ್ಟ್ರಿಕ್ ಆದ ಸೀಟುಗಳನ್ನು ನೀಡಲಾಗಿದೆ. ಪಾರ್ಕಿಂಗ್ ಅಸಿಸ್ಟ್ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳುವವರು ಇಂಟೆಲಿಜೆಂಟ್ ಪಾರ್ಕ್ ಅಸಿಸ್ಟ್ ಸ್ಟೇಟ್ ಆಫ್ ಆರ್ಟ್ ಇಂಟೆಲಿಜೆನ್ಸ್ ಪಾರ್ಕ್ ಅಸಿಸ್ಟ್ ಪಡೆಯಬಹುದು.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಈ ಫೀಚರ್ ಸ್ಟೀಯರಿಂಗ್, ಥ್ರೊಟಲ್ ಹಾಗೂ ಬ್ರೇಕ್ ಗಳನ್ನು ನಿರ್ವಹಿಸುವ ಮೂಲಕ ಕಾರನ್ನು ಆಟೋಮ್ಯಾಟಿಕ್ ಆಗಿ ಪಾರ್ಕ್ ಮಾಡಲು ನೆರವಾಗುತ್ತದೆ.ಈ ಎಸ್‌ಯುವಿಯು 730 ವ್ಯಾ ಆಂಪ್ಲಿಫಯರ್ ಹಾಗೂ 17 ಸ್ಪೀಕರ್'ಗಳಿರುವ ಹೊಸ ಪ್ರೀಮಿಯಂ ಸೆನ್ಸೋನಮ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಎಂಜಿನ್

ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯಲ್ಲಿ ಅಳವಡಿಸಿರುವ ಬೈ ಟರ್ಬೋ ಎಂಜಿನ್ 6,000 ಆರ್‌ಪಿಎಂನಲ್ಲಿ 641 ಬಿಹೆಚ್‌ಪಿ ಪವರ್ ಹಾಗೂ 2,250ರಿಂದ 4,500 ಆರ್‌ಪಿಎಂ ನಡುವೆ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಈ ಎಂಜಿನ್'ನೊಂದಿಗೆ ಜೋಡಿಸಲಾಗಿರುವ 8-ಸ್ಪೀಡ್ ಗೇರ್ ಬಾಕ್ಸ್ ಎಲ್ಲಾ ನಾಲ್ಕು ವ್ಹೀಲ್'ಗಳನ್ನು ಎಡಬ್ಲ್ಯೂಡಿ ಸಿಸ್ಟಂ ಮೂಲಕ ಚಾಲನೆ ಮಾಡುತ್ತದೆ.ಈ ಎಸ್‌ಯುವಿಯು ಆರು ವಿಭಿನ್ನ ಡ್ರೈವ್ ಮೋಡ್‌ಗಳನ್ನು ಹೊಂದಿದ್ದು ಚಾಲಕನ ಗಮನವನ್ನು ರಸ್ತೆಯ ಮೇಲಿರುವಂತೆ ಮಾಡುತ್ತದೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಸ್ಟ್ಯಾಂಡರ್ಡ್ ಲ್ಯಾಂಬೊರ್ಗಿನಿ ಉರುಸ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.3.10 ಕೋಟಿಗಳಾಗಿದೆ. ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯಬೆಲೆ ಸ್ಟ್ಯಾಂಡರ್ಡ್ ಉರುಸ್ ಕಾರಿಗಿಂತ 20%ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಅರಾನ್ಸಿಯೋ ಲಿಯೊನಿಸ್ ಪರ್ಲ್ ಕ್ಯಾಪ್ಸುಲ್ ಡಿಸೈನ್ ಎಡಿಷನ್ ಅದ್ಭುತವಾಗಿದ್ದು, ಕೇವಲ ಮೂರು ಬಣ್ಣಗಳಲ್ಲಿ ಮಾರಾಟವಾಗಲಿದೆ. ಪರ್ಲ್ ಕ್ಯಾಪ್ಸುಲ್ ಆವೃತ್ತಿಯನ್ನು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಬಹುದು.

ಫಸ್ಟ್ ಲುಕ್ ರಿವ್ಯೂ: ಹೊಸ ಕಸ್ಟಮೈಜ್ಡ್ ಡಿಸೈನ್‌ನೊಂದಿಗೆ ರಸ್ತೆಗಿಳಿದ ಲ್ಯಾಂಬೊರ್ಗಿನಿ ಉರುಸ್

ಈ ಎಸ್‌ಯುವಿಯ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ದೈನಂದಿನ ಚಾಲನಾ ಸಾಮರ್ಥ್ಯದಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳನ್ನು ಹೊರತುಪಡಿಸಿದರೆಲ್ಯಾಂಬೊರ್ಗಿನಿ ಉರುಸ್ ಅರಾನ್ಸಿಯೋ ಲಿಯೊನಿಸ್ ಪರ್ಲ್ ಕ್ಯಾಪ್ಸುಲ್ ಡಿಸೈನ್ ಎಡಿಷನ್ ಬೇರೆಲ್ಲಾ ಫೀಚರ್'ಗಳನ್ನು ಹೊಂದಿದೆ.

Most Read Articles

Kannada
English summary
Lamborghini Arancio Pearl Capsule first look review. Read in Kannada.
Story first published: Thursday, March 11, 2021, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X