'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಜೀಪ್ ಇಂಡಿಯಾ ಕಂಪನಿಯು ತನ್ನ ಹೊಸ ಕಾರುಗಳ ಉತ್ಪಾದನೆ ಮಹತ್ವದ ಬದಲಾವಣೆ ಪರಿಚಯಿಸುತ್ತಿದ್ದು, ತನ್ನ ಹೊಸ ರ‍್ಯಾಂಗ್ಲರ್ ಆಫ್ ರೋಡ್ ಎಸ್‌ಯುವಿ ಮಾದರಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣ ಮಾಡಿ ಮಾರಾಟಕ್ಕೆ ಚಾಲನೆ ನೀಡಿದೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯನ್ನು ಇದುವೆರೆಗೂ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಜೀಪ್ ಕಂಪನಿಯು ಇದೀಗ ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಮಹಾರಾಷ್ಟ್ರದ ರಂಜನ್ಗಾಂವ್ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣ ಮಾಡಿದ್ದು, ಹೊಸ ಯೋಜನೆಯಡಿ ನಿರ್ಮಾಣ ಮಾಡಿರುವ 2021ರ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ಈ ಹಿಂದಿನ ಮಾದರಿಗಿಂತಲೂ ರೂ. 10 ಲಕ್ಷದಿಂದ ರೂ. 11 ಲಕ್ಷದಷ್ಟು ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಅಭಿವೃದ್ದಿಗೊಂಡ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 53.90 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 57.9 ಲಕ್ಷ ಬೆಲೆ ಹೊಂದಿದ್ದು, ಅನ್‌ಲಿಮಿಟೆಡ್ ಮತ್ತು ರೂಬಿಕಾನ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಆಫ್ ರೋಡ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಗ್ರಾಹಕ ವರ್ಗವನ್ನು ಹೊಂದಿರುವ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ಜಾಗತಿಕ ಮಾರುಕಟ್ಟೆ ಪ್ರವೇಶಿಸಿ ಯಶಸ್ವಿ 80 ವರ್ಷ ಪೂರೈಸಿದ್ದು, ಭಾರತದಲ್ಲೂ ಆಫ್ ರೋಡ್ ಕಾರು ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

2021ರ ಆವೃತ್ತಿಯು ಇದೀಗ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾಗಿರುವುದರಿಂದ ಉತ್ತಮ ಮಾರಾಟ ನೀರಿಕ್ಷೆಯಲ್ಲಿರುವ ಜೀಪ್ ಕಂಪನಿಯು ಹೊಸ ಕಾರನ್ನು 5 ಡೋರ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಈ ಹಿಂದಿನಂತೆಯೇ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಜೀಪ್ ಕಂಪನಿಯು 2.0-ಲೀಟರ್, ಫೋರ್ ಸಿಲಿಂಡರ್ ಪ್ರೇರಣೆಯ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 268-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಆಫ್ ರೋಡ್ ಕೌಶಲ್ಯತೆಗಾಗಿ ಹೊಸ ಕಾರು ಮಾದರಿಯಲ್ಲಿ ವೆರಿಯೆಂಟ್ ಅನುಗುಣವಾಗಿ ಸೆಲೆಕ್ಟ್ ಟ್ರಾಕ್ ಮತ್ತು ರಾಕ್ ಟ್ರಾಕ್ ಎನ್ನುವ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಟೆಕ್ನಾಲಜಿಯನ್ನು ನೀಡಲಾಗಿದ್ದು, ಪರ್ಫಾಮೆನ್ಸ್ ಸಸ್ಷೆಷನ್‌ಗಳು ಕಠಿಣ ಭೂಪ್ರದೇಶಗಳಲ್ಲೂ ಕಾರನ್ನು ಸರಾಗವಾಗಿ ನುಗ್ಗಲು ಸಹಕಾರಿಯಾಗಿವೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಟಾಪ್ ಎಂಡ್ ಆವೃತ್ತಿಯಾದ ರೂಬಿಕಾನ್ ಆವೃತ್ತಿಯು ಬೆಸ್ ಮಾದರಿಗಿಂತಲೂ ಇನ್ನು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಕಾರು ಚಾಲನೆಯನ್ನು ಸುಲಭಗೊಳಿಸಲಿದ್ದು, ಎರಡು ಮಾದರಿಯಲ್ಲೂ 18-ಇಂಚಿನ ಅಲಾಯ್ ವೀಲ್ಹ್ ಜೋಡಣೆಯೊಂದಿಗೆ ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿವೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಹೊಸ ಕಾರಿನಲ್ಲಿ ಆಫ್ ರೋಡ್ ಕೌಶಲ್ಯದ ಜೊತೆಗೆ ಐಷಾರಾಮಿ ಪ್ರಯಾಣಕ್ಕೂ ಸಹಕಾರಿಯಾಗುವ ಹಲವಾರು ತಾಂತ್ರಿಕ ಅಂಶಗಳಿದ್ದು, ಎಲ್ಇಡಿ ಹೆಡ್‌ಲ್ಯಾಂಪ್, ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್, ಲೆದರ್ ಅಪ್‌ಹೋಲಿಸ್ಟ್ರಿ, 7-ಇಂಚಿನ ಮಲ್ಟಿ ಕಲರ್ ಎಂಐಡಿ ಸ್ಕ್ರೀನ್, 8.4-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳಿವೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಹಾಗೆಯೇ ತೆಗೆದುಹಾಕಬಹುದು ಡೋರ್ ಸಿಸ್ಟಂ, ಹಾರ್ಡ್ ಟಾಪ್ ಆಯ್ಕೆ ಸಹ ಹೊಸ ಕಾರಿನಲ್ಲಿದ್ದು, ಸುರಕ್ಷತೆಗಾಗಿ ಎಬಿಸ್ ಜೊತೆ ಇಬಿಡಿ, ಫ್ರಂಟ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಇನ್ನು ಹೊಸ ಕಾರು ಬ್ರೈಟ್ ವೈಟ್, ಸ್ಟಿಂಗ್ ಗ್ರೇ, ಗ್ರಾನೈಟ್ ಕ್ರಿಸ್ಟಲ್, ಬ್ಲ್ಯಾಕ್ ಮತ್ತು ಫೈರ್‌ಕ್ರ್ಯಾಕರ್ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಇತ್ತೀಚೆಗೆ ಬಿಡುಗಡೆಯಾಗಿರುವ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಮಾದರಿಗೆ ಉತ್ತಮ ಪೈಪೋಟಿ ನೀಡಲಿದೆ.

'ಮೇಡ್ ಇನ್ ಇಂಡಿಯಾ' ನಿರ್ಮಾಣದ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ

ಜೊತೆಗೆ ಹೊಸ ಕಾರನ್ನು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣ ಮಾಡಿರುವುದರಿಂದ ಹೊಸ ಕಾರಿನ ಬೆಲೆಯನ್ನು ತಗ್ಗಿಸಲು ಸಹಕಾರಿಯಾಗಿದ್ದು, 2022ರ ವೇಳೆಗೆ ಹೊಸ ಕಾರುಗಳ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳನ್ನು ಸಂಪೂರ್ಣವಾಗಿ ದೇಶಿಯ ಮಾರುಕಟ್ಟೆಯಲ್ಲಿಯೇ ನಿರ್ಮಾಣ ಮಾಡುವ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

Most Read Articles

Kannada
Read more on ಜೀಪ್ jeep
English summary
Made-in-India Jeep Wrangler SUV Launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X