ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಆಟೋ ಉತ್ಪಾದನಾ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನ ಉತ್ಪನ್ನ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಪಡೆದುಕೊಂಡಿದ್ದು, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಲು ದರ ಹೆಚ್ಚಿಸಲಾಗುತ್ತಿದೆ. ಹೊಸ ದರ ಇಂದಿನಿಂದಲೇ ಅನ್ವಯವಾಗುವಂತೆ ಹೊಸ ದರ ನಿಗದಿಪಡಿಸಿರುವ ಮಹೀಂದ್ರಾ ಕಂಪನಿಯು ಬಹುತೇಕ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದು, ಇದು ಈ ವರ್ಷದ ಮೂರನೇ ಅವಧಿಯ ಬೆಲೆ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿರುವ ಮಹೀಂದ್ರಾ ಕಂಪನಿಯು ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಳ ಮಾಡಿರುವುದಾಗಿ ಹೇಳಿಕೊಂಡಿದ್ದು, ಕಾರುಗಳ ಬೆಲೆಗೆ ಅನುಗುಣವಾಗಿ ಶೇ.1 ರಿಂದ ಶೇ.1.50 ರಷ್ಟು ದರ ಏರಿಕೆ ಮಾಡಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಹೊಸ ದರಪಟ್ಟಿಯಲ್ಲಿ ಮಹೀಂದ್ರಾ ವಿವಿಧ ಕಾರುಗಳು ಕನಿಷ್ಠ ರೂ. 2,600 ರಿಂದ ಗರಿಷ್ಠ ರೂ. 92 ಸಾವಿರ ತನಕ ದುಬಾರಿಯಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದರ ಹೆಚ್ಚಿಸಲಾಗಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಹೊಸ ದರ ಪಟ್ಟಿಯಲ್ಲಿ ಆರಂಭಿಕ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರು ಮಾದರಿಯು ರೂ. 3,356 ಗರಿಷ್ಠ ಬೆಲೆ ಹೆಚ್ಚಳದೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.09 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.75 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಹೊಸ ದರ ಪಟ್ಟಿಯಲ್ಲಿ ಎಕ್ಸ್‌ಯುವಿ300 ಕಾರು ಮಾದರಿಯು ಗರಿಷ್ಠ ರೂ.24 ಸಾವಿರ ಏರಿಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.96 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.18 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಹಾಗೆಯೇ ಬೊಲೆರೊ ಕಾರು ರೂ. 22 ಸಾವಿರ ಏರಿಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.63 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.61 ಲಕ್ಷ ಬೆಲೆ ಪಡೆದುಕೊಂಡಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಮರಾಜೋ ಎಂಪಿವಿ ಕಾರು ಮಾದರಿಯು ಹೊಸ ದರಪಟ್ಟಿಯಲ್ಲಿ ಗರಿಷ್ಠ ರೂ. 30 ಸಾವಿರ ಏರಿಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.43 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಇನ್ನು ಸ್ಕಾರ್ಪಿಯೋ ಕಾರು ಮಾದರಿಯು ರೂ.27 ಸಾವಿರದಿಂದ ರೂ. 37 ಸಾವಿರ ದರ ಏರಿಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.43 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಎಕ್ಸ್‌ಯುವಿ500 ಎಸ್‌ಯುವಿ ಮಾದರಿಯು ನ್ಯೂ ಜನರೇಷನ್ ಮಾದರಿಯೊಂದಿಗೆ ಬಿಡುಗಡೆಗೆ ಸಿದ್ದವಾಗಿದ್ದು, ಹಳೆಯ ಮಾದರಿಯು ರೂ. 2,670 ಬೆಲೆ ಹೆಚ್ಚಳದೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.24 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.07 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಇನ್ನುಳಿದ ಥಾರ್ ಹೊಸ ಕಾರು ಮಾದರಿಯು ನ್ಯೂ ಜನರೇಷನ್ ಬಿಡುಗಡೆಯ ನಂತರ ಮೊದಲ ಬಾರಿಗೆ ಅತಿ ಹೆಚ್ಚು ದರ ಏರಿಕೆ ಪಡೆದುಕೊಂಡಿದ್ದು,ಥಾರ್ ಕಾರು ರೂ. 32 ಸಾವಿರದಿಂದ ರೂ.92 ಸಾವಿರ ಹೆಚ್ಚಳದೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.15.08 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಮಹೀಂದ್ರಾ

ಅಲ್ಟುರಾಸ್ ಜಿ4 ಎಸ್‌ಯುವಿ ಕಾರು ಮಾದರಿಯು ಸಹ ರೂ. 3 ಸಾವಿರ ಬೆಲೆ ಬೆಲೆ ಹೆಚ್ಚಳದೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 28.77 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.31.77 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Mahindra Cars Price Hike Announced Across All Models. Read in Kannada.
Story first published: Saturday, July 10, 2021, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X