ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ500, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ನೋಂದಣಿಯನ್ನು ಕೂಡಾ ಮಾಡಲಾಗಿದೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಕಳೆದ ವಾರವಷ್ಟೇ ಎಕ್ಸ್‌ಯುವಿ ಸರಣಿಯಲ್ಲಿ ಹೊಸದಾಗಿ ಎಕ್ಸ್‌ಯುವಿ700 ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿಯೇ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಇದೀಗ ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಕೇಂದ್ರ ಸಾರಿಗೆ ಇಲಾಖೆ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌‌ಯುವಿ700 ಮಾದರಿಯ ಜೊತೆಗೆ ಎಕ್ಸ್‌ಯುವಿ900 ಸೇರಿದಂತೆ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಸದ್ಯ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿರುವ ನ್ಯೂ ಜನರೇಷನ್ ಎಕ್ಸ್‌ಯುವಿ ಮಾದರಿಯನ್ನೇ ಎಕ್ಸ್‌ಯುವಿ700 ಮಾದರಿಯಾಗಿ ಮತ್ತು ಸ್ಥಗಿತಗೊಳ್ಳಲಿರುವ ಅಲ್ಟುರಾಸ್ ಜಿ4 ಸ್ಥಾನಕ್ಕಾಗಿ ಎಕ್ಸ್‌ಯುವಿ900 ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಎಕ್ಸ್‌ಯುವಿ700 ಬಿಡುಗಡೆಯ ನಂತರ ಎಕ್ಸ್‌ಯುವಿ500 ಮಾದರಿಯನ್ನು ಕೆಲವು ಹೊಸ ಬದಲಾವಣೆಯೊಂದಿಗೆ ಬಿಡುಗಡೆ ಮಾಡಬಹುದು ಎನ್ನಲಾಗಿದ್ದು, ವಿವಿಧ ಹಂತದಲ್ಲಿ ಎಕ್ಸ್‌ಯುವಿ ಸರಣಿಗಳು ವಿವಿಧ ಕಾರುಗಳು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿ ನೀಡಲಿವೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಎಕ್ಸ್‌ಯುವಿ500 ಮಾದರಿಯು ಸದ್ಯ 7 ಸೀಟರ್ ಮಾದರಿಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಎಕ್ಸ್‌ಯುವಿ700 ಬಿಡುಗಡೆಯ ನಂತರ 5 ಸೀಟರ್ ಮಾದರಿಯಾಗಿ ಮತ್ತು ಎಕ್ಸ್‌ಯುವಿ700 ಮಾದರಿಯು ಸೀಟರ್ ಮಾದರಿಯಾಗಿ ಮಾರಾಟಗೊಳ್ಳಬಹುದಾಗಿದೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಎಕ್ಸ್‌ಯುವಿ900 ಮಾದರಿಯು ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಎಂಜಿ ಗ್ಲೊಸ್ಟರ್ ಕಾರುಗಳಿಗೆ ಪೈಪೋಟಿ ಬಿಡುಗಡೆಯಾಗಬಹುದೆಂದು ನೀರಿಕ್ಷಿಸಲಾಗಿದ್ದು, ಎಸ್‌ಯುವಿ ಕಾರು ಮಾದರಿಯಲ್ಲಿ ಎಕ್ಸ್‌ಯುವಿ ಸರಣಿಗಳು ಭರ್ಜರಿ ಪೈಪೋಟಿ ನೀಡಲಿವೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಸ್ಯಾಂಗ್‌ಯಾಂಗ್ ಕಂಪನಿಯ ಜೊತೆಗಿನ ಮಹೀಂದ್ರಾ ಸಹಭಾಗಿತ್ವ ಯೋಜನೆ ಸ್ಥಗಿತದ ನಂತರ ಅಲ್ಟುರಾಸ್ ಜಿ4 ಮಾದರಿಯ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಅಲ್ಟುರಾಸ್ ಜಿ4 ಸ್ಥಾನಕ್ಕಾಗಿ ಮಹೀಂದ್ರಾ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಮತ್ತೊಂದು ಫುಲ್ ಸೈಜ್ ಎಸ್‌ಯವಿ ಮಾದರಿಯನ್ನು ಅಭಿವೃದ್ದಿಗೊಳಿಸುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಹೊಸ ಎಸ್‌ಯುವಿ ಕಾರು ಮಾದರಿಯು ಅಲ್ಟುರಾಸ್ ಜಿ4 ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳಲನ್ನು ಪಡೆದುಕೊಳ್ಳಲಿದ್ದು, 7 ಸೀಟರ್ ಸೌಲಭ್ಯದೊಂದಿಗೆ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಮಹೀಂದ್ರಾ ಹೊಸ ಎಕ್ಸ್‌ಯುವಿ700 ಮಾದರಿಯ ಉತ್ಪಾದನಾ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿರುವ ಮಹೀಂದ್ರಾ ಕಂಪನಿಯು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದ್ದು, 2022ರ ಮಧ್ಯಂತರದಲ್ಲಿ ಹೊಸ ಕಾರು ರಸ್ತೆಗಿಳಿಯಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಹೊಸ ಕಾರು ಉತ್ಪಾದನೆಗಾಗಿ ಕಂಪನಿಯ ವಿನೂತನ ಡಬ್ಯು601 ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ದಿಪಡಿಸುತ್ತಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಎಂಜಿನ್ ಆಯ್ಕೆ ಮತ್ತು ಟೆಕ್ನಾಲಜಿ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

Most Read Articles

Kannada
English summary
Mahindra Trademarked New XUV900 Name, Replacement For The Alturas G4.
Story first published: Monday, April 12, 2021, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X