ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಎಲೆಕ್ಟ್ರಿಕ್ ವಾಹನಗಳಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಆದರೆ ಮಾರುತಿ ಸುಜುಕಿ ಕಂಪನಿಯು ಇದುವರೆಗೂ ಯಾವುದೇ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿಲ್ಲ.

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಆದರೆ ಮಾರುತಿ ಸುಜುಕಿ ಡಿಜೈರ್ ಕಾರಿನ ಮಾಲೀಕರೊಬ್ಬರು ತಮ್ಮ ಕಾರ್ ಅನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿದ್ದಾರೆ. ಪರಿವರ್ತನೆಗೊಂಡ ಈ ಡಿಜೈರ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 250 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಕಾರು 8 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರಿನಲ್ಲಿ ಫಾಸ್ಟ್ ಚಾರ್ಜರ್ ವ್ಯವಸ್ಥೆಯನ್ನು ನೀಡಲಾಗಿಲ್ಲ. ಪರಿವರ್ತನೆಗೊಂಡಿರುವ ಈ ಡಿಜೈರ್ ಕಾರ್ ಅನ್ನು 2020ರ ಫೆಬ್ರವರಿಯಲ್ಲಿ ಖರೀದಿಸಲಾಗಿದೆ. ಇತ್ತೀಚಿಗೆ ಈ ಕಾರ್ ಅನ್ನು ಪೂರ್ತಿಯಾಗಿ ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರ್ ಅನ್ನು ನಾರ್ಥನ್ ಮೋಟಾರ್ಸ್ಪೋರ್ಟ್ ಎಂಬ ಕಂಪನಿಯು ಎಲೆಕ್ಟ್ರಿಕ್ ಕಾರ್ ಆಗಿ ಬದಲಿಸಿದೆ. ಈ ಕಂಪನಿಯು ಹಲವಾರು ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಿದೆ.

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರಿನಲ್ಲಿರುವ ಎಂಜಿನ್ ಅನ್ನು ಈ ಕಂಪನಿಯೇ ನಿರ್ಮಿಸಿದೆ. ಪರಿವರ್ತನೆಗೊಂಡಿರುವ ಡಿಜೈರ್ ಕಾರಿನಲ್ಲಿ 15 ಕಿ.ವ್ಯಾ ಮೋಟರ್ ಅನ್ನು ಅಳವಡಿಸಲಾಗಿದೆ. ಈ ಮೋಟರ್ 35 ಕಿ.ವ್ಯಾ ಪವರ್ ಹಾಗೂ 170 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರಿನ ಫ್ಯೂಯಲ್ ಟ್ಯಾಂಕ್, ಟ್ರಾನ್ಸ್ ಮಿಷನ್ ಟನಲ್ ಹಾಗೂ ಎಕ್ಸ್ ಟೆಂಷನ್ ಎಕ್ಸಾಸ್ಟ್ ಏರಿಯಾಗಳಲ್ಲಿ ಮೂರು ಬ್ಯಾಟರಿ ಪ್ಯಾಕ್‌ಗಳನ್ನು ನೀಡಲಾಗಿದೆ. ಫ್ಯೂಯಲ್ ಟ್ಯಾಂಕ್‌ನಲ್ಲಿ 13 ಕಿ.ವ್ಯಾ ಬ್ಯಾಟರಿ ಪ್ಯಾಕ್, ಟ್ರಾನ್ಸ್ ಮಿಷನ್ ಟನಲ್'ನಲ್ಲಿ 15 ಕಿ.ವ್ಯಾ ಹಾಗೂ ಎಕ್ಸಾಸ್ಟ್ ಏರಿಯಾದಲ್ಲಿ 18 ಕಿ.ವ್ಯಾ ಬ್ಯಾಟರಿ ಪ್ಯಾಕ್'ಗಳನ್ನು ನೀಡಲಾಗಿದೆ.

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರಿನಲ್ಲಿ ವಾಟರ್ ಸೀಲ್ಡ್ ಹಾಗೂ ಐಪಿ 67 ರೇಟಿಂಗ್‌ ಅಳವಡಿಸಲಾಗಿದೆ. ಈ ಡಿಜೈರ್ ಕಾರು ಐದು ಸ್ಪೀಡಿನ ಮ್ಯಾನುವಲ್ ಎಲೆಕ್ಟ್ರಿಕ್ ಗೇರ್ ಬಾಕ್ಸ್ ಹೊಂದಿದೆ. ಇದರ ತೂಕವು ಹಿಂದಿನ ಗೇರ್ ಬಾಕ್ಸ್'ಗೆ ಹೋಲಿಸಿದರೆ 3 ಕೆ.ಜಿಯಷ್ಟು ಹೆಚ್ಚಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರಿನ ತೂಕ ವಿತರಣೆಯನ್ನು 5%ನಷ್ಟು ದೋಷದೊಂದಿಗೆ ಮೊದಲಿನಂತೆ ನಿರ್ವಹಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರು ಸುಮಾರು 3 ಟನ್'ಗಳಷ್ಟು ತೂಕವನ್ನು ಸಾಗಿಸಬಲ್ಲದು. 8 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುವ ಈ ಕಾರ್ ಅನ್ನು ಚಾರ್ಜ್ ಮಾಡಲು 15 ಆಂಪಿಯರ್ ಸಾಕೆಟ್'ನ ಅಗತ್ಯವಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರಿನಲ್ಲಿರುವ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಅನ್ನು ಈ ಕಾರಿನ ಅನೇಕ ಮಾಹಿತಿಯನ್ನು ಒದಗಿಸುವ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಕಾರಿನಲ್ಲಿರುವ ಟ್ಯಾಕೋಮೀಟರ್ ಮೋಟರ್ ಆರ್'ಪಿಎಂ, ಫ್ಯೂಯಲ್ ಗೇಜ್ ಬ್ಯಾಟರಿ ಲೆವೆಲ್, ಎಂಜಿನ್ ಚೆಕ್ ಲೈಟ್ ಮೋಟಾರ್ ಡ್ರೈವ್ ಫಾಲ್ಟ್, ಟೆಂಪರೇಚರ್ ಗೇಜ್'ಗಳನ್ನು ತೋರಿಸುತ್ತದೆ.

ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್

ಈ ಕಾರು ಪವರ್ ಸ್ಟೀಯರಿಂಗ್, ಎಬಿಎಸ್ ವಿತ್ ಇಬಿಡಿ, ಏರ್‌ಬ್ಯಾಗ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್'ಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಎಲೆಕ್ಟ್ರಕ್ ವಾಹನವನ್ನು ಬಿಡುಗಡೆಗೊಳಿಸಿದಾಗ ಯಾವ ಫೀಚರ್'ಗಳಿರಲಿವೆ ಎಂಬುದನ್ನು ನೋಡಬೇಕಿದೆ. ಚಿತ್ರ ಕೃಪೆ: ಹೇಮಂಕ್ ದಭಾಡೆ

Most Read Articles

Kannada
English summary
Maruti Suzuki Dzire converted as electric car. Read in Kannada.
Story first published: Monday, January 25, 2021, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X