ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

Mercedes-Benz ಕಂಪನಿಯು ಭಾರತದಲ್ಲಿನ ತನ್ನ AMG ಸರಣಿಯಲ್ಲಿ ಹೊಸದಾಗಿ AMG GLE 63 S Coupe ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 2.07 ಕೋಟಿ ಬೆಲೆ ಹೊಂದಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಪರ್ಫಾಮೆನ್ಸ್ ಕಾರು ಮಾದರಿಗಳ ಅಭಿವೃದ್ದಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಹೊಂದಿರುವ Mercedes-Benz ಕಂಪನಿಯು AMG ಸರಣಿ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಿಗೆ ಪರಿಚಯಿಸುತ್ತಿದ್ದು, ಕಂಪನಿಯು ಇದೀಗ ಭಾರತದಲ್ಲೂ ಪ್ರಮುಖ ಕಾರುಗಳಲ್ಲಿ AMG ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಹೊಸದಾಗಿ ಬಿಡುಗಡೆಯಾಗಿರುವ AMG GLE 63 S Coupe ಮಾದರಿಯು ಕೂಡಾ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ಪ್ರಮುಖ ವೆರಿಯೆಂಟ್‌ಗಳನ್ನು ಪರಿಚಯಿಸಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಆರಂಭಿಕ ಮಾದರಿಯಾಗಿ AMG E53 ಮತ್ತು ಟಾಪ್ ಎಂಡ್ ಮಾದರಿಯಾಗಿ E63 S ಮಾರಾಟಗೊಳ್ಳಲಿದ್ದು, ಕಂಪನಿಯು ಹೊಸ ಕಾರನ್ನು 48 ವೊಲ್ಟ್ ಮೈಲ್ಡ್ ಹೈಬ್ರಿಡ್ ಎಂಜಿನ್‌ನೊಂದಿಗೆ ಅಭಿವೃದ್ದಿಗೊಳಿಸಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಭಾರತದಲ್ಲಿ Mercedes-Benz ಕಂಪನಿಯು ಪರಿಚಯಿಸಿರುವ 12ನೇ ಕಾರು ಮಾದರಿಯಾಗಿರುವ AMG GLE 63 S Coupe ಮಾದರಿಯು ಪವರ್‌ಫುಲ್ ಎಂಜಿನ್‌ನೊಂದಿಗೆ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

AMG ಮಾದರಿಗಳಲ್ಲೇ GLE 63 S Coupe ಮಾದರಿಯು ಅತಿ ಹೆಚ್ಚು ಪರ್ಫಾಮೆನ್ಸ್ ನೀಡುವ ಮಾದರಿಯಾಗಿದ್ದು, ಹೊಸ ಕಾರಿನ ಕಂಪನಿಯು V8 ಎಂಜಿನ್ ಜೋಡಣೆ ಮಾಡಲಾದ ಮೊದಲ ಕಾರು ಮಾದರಿಯಾಗಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

AMG GLE 63 S Coupe ಮಾದರಿಯಲ್ಲಿ Mercedes-Benz ಕಂಪನಿಯು V8 4.0-ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಬಳಕೆ ಮಾಡಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ ಕಾರು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 612-ಬಿಎಚ್‌ಪಿ ಮತ್ತು 850-ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಹೊಸ ಕಾರಿನಲ್ಲಿ ಜೋಡಣೆ ಮಾಡಲಾಗಿರುವ 48 ವೊಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಎಂಜಿನ್ ಸ್ಟಾರ್ಟರ್ ಆಗಿ ಕಾರ್ಯನಿರ್ವಹಣೆ ಮಾಡುವುದಲ್ಲದೆ ಎಂಜಿನ್ ಪರ್ಫಾಮೆನ್ಸ್ ಹೆಚ್ಚಳಕ್ಕೂ ಸಹಕಾರಿಯಾಗಿದ್ದು, ಸಾಮಾನ್ಯ ಎಂಜಿನ್ ಮಾದರಿಯ ಪರ್ಫಾಮೆನ್ಸ್ ಜೊತೆ ಹೆಚ್ಚುವರಿಯಾಗಿ 22-ಬಿಎಚ್‌ಪಿ ಒದಗಿಸಲಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ Mercedes-Benz ಕಂಪನಿಯು ಸ್ಟ್ಯಾಂಡರ್ಡ್ ಆಗಿ 4 ಮ್ಯಾಟಿಕ್ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ನೀಡಿದ್ದು, ರೇಸ್ ಸೇರಿದಂತೆ ವಿವಿಧ ಏಳು ಡ್ರೈವಿಂಗ್ ಮೋಡ್‌ಗಳು ಈ ಕಾರಿನಲ್ಲಿವೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ರೇಸ್ ಡ್ರೈವಿಂಗ್ ಮೋಡ್‌ನಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳಲು ಕೇವಲ 3 ಸೆಂಕೆಂಡು ತೆಗೆದುಕೊಳ್ಳುವ AMG GLE 63 S Coupe ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 280 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಹೊಸ ಕಾರಿನಲ್ಲಿ ಮೊದಲ ಬಾರಿಗೆ ಆಕ್ಟಿವ್ ಸಿಲಿಂಡರ್ ಡಿಆಕ್ಟಿವೆಷನ್ ಸೌಲಭ್ಯ ಹೊಂದಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

AMG GLE 63 S Coupe ಮಾದರಿಯ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳ ಬಗೆಗೆ ಹೇಳುವುದಾದರೆ ಹೊಸ ಕಾರಿನಲ್ಲಿ ಕಂಪನಿಯು ಬಿಸ್ಪೋರ್ಕ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಎಂಡ್, ದೊಡ್ದ ಗಾತ್ರದ ಸಿಲ್ವರ್ ಕ್ರೋಮ್ ಏರ್ ಇನ್‌ಟೆಕ್, ಕ್ರೊಮ್ ಹೊಂದಿರುವ ಪಾನ್ಅಮೆರಿಕ ಗ್ರಿಲ್ ಮತ್ತು ಬ್ಯಾನೆಟ್‌ನಲ್ಲಿ ಪವರ್‌ಡೊಮ್ ನೀಡಲಾಗಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ ಸ್ಟೀಪರ್ ವೀಂಡ್ ಸ್ಕ್ರೀನ್, ಇಳಿಜಾರಿನಂತಿರುವ ರೂಫ್‌ಲೈನ್, ಪರ್ಫಾಮೆನ್ಸ್ ಸ್ಟೈಲ್ ಹೊಂದಿರುವ ರಿಯರ್ ಡಿಫ್ಯೂಸರ್, AMG ಟ್ವಿನ್ ಎಕ್ಸಾಸ್ಟ್ ಸಿಸ್ಟಂ ಮತ್ತು 22-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಜೋಡಣೆ ಮಾಡಲಾಗಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಹೊರಭಾಗದಲ್ಲಿ ಸ್ಪೋರ್ಟಿ ವಿನ್ಯಾಸದಂತೆಯೇ ಒಳಭಾಗದಲ್ಲೂ ಹೊಸ ಕಾರಿನ ವಿನ್ಯಾಸಗಳು ಸಾಕಷ್ಟು ಆಕರ್ಷಕವಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಪ್ರತಿ ತಾಂತ್ರಿಕ ಅಂಶಗಳು ಸಹ ಕಾರಿನ ಪರ್ಫಾಮೆನ್ಸ್ ಮತ್ತು ನಿಖರವಾದ ಕಾರು ಚಾಲನೆಗೆ ಪೂರಕವಾದ ಅಂಶಗಳಾಗಿವೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಹೊಸ ಕಾರಿನ ಕ್ಯಾಬಿನ್‌ನಲ್ಲಿ ಬಹುತೇಕ ತಾಂತ್ರಿಕ ಅಂಶಗಳು ಗರಿಷ್ಠ ಗುಣಮಟ್ಟದಿಂದ ಕೂಡಿದ್ದು, ಆಕರ್ಷಕವಾದ ಡ್ಯಾಶ್‌ಬೋರ್ಡ್‌ನೊಂದಿಗೆ 12.3-ಇಂಚಿನ ಇನ್ಪೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹಲವು ವಿಶೇಷತೆಗಳನ್ನು ಒಳಗೊಂಡಿರುವ ಸೆಂಟರ್ ಕನ್ಸೊಲ್ ಕಾರಿನ ಪರ್ಫಾಮೆನ್ಸ್‌ಗೆ ಪೂರಕವಾಗಿದೆ.

ರೂ. 2.07 ಕೋಟಿ ಮೌಲ್ಯದ Mercedes AMG GLE 63 S Coupe ಬಿಡುಗಡೆ

ಸ್ಟ್ಯಾಂಡರ್ಡ್ GLE ಮಾದರಿಗಿಂತಲೂ AMG GLE ಮಾದರಿಗಳಲ್ಲಿ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ಜೋಡಣೆ ಮಾಡಲಾಗುತ್ತಿದ್ದು, ತ್ರಿ ಸ್ಪೋಕ್ ಸ್ಟೀರಿಂಗ್ ವ್ಹೀಲ್, ಅಲ್ಯುನಿಯಂ ಶಿಫ್ಟ್ ಪೆಡಲ್, ಎಎಂಜಿ ಪ್ರೇರಣೆಯ ನಪ್ಪಾ ಲೆದರ್ ಆಸನಗಳು, ಕಾರಿನ ಪ್ರಮುಖ ತಾಂತ್ರಿಕ ಸೌಲಭ್ಯಗಳ ಮೇಲೆ AMG ಬ್ಯಾಡ್ಜ್‌ಗಳನ್ನು ಕಾಣಬಹುದಾಗಿದೆ.

Most Read Articles

Kannada
English summary
Mercedes amg gle 63 s coupe launched in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X