ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಪರ್ಫಾಮೆನ್ಸ್ ಸೆಡಾನ್ ಕಾರು ಮಾದರಿಗಳಾದ ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.02 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಐಷಾರಾಮಿ ಕಾರುಗಳಲ್ಲೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗಾಗಿ ಎಎಂಜಿ ಆವೃತ್ತಿಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಎಎಂಜಿ ಸರಣಿಯಲ್ಲಿ ಇದೀಗ ಹೊಸದಾಗಿ ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಸೆಡಾನ್ ಆವೃತ್ತಿಗಳು ಬಿಡುಗಡೆಗೊಂಡಿವೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಆರಂಭಿಕ ಆವೃತ್ತಿಯಾದ ಇ53 ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ. 1.02 ಕೋಟಿ ಮತ್ತು ಇ63 ಎಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.70 ಕೋಟಿ ಬೆಲೆ ಹೊಂದಿವೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಹೊಸ ಪರ್ಫಾಮೆನ್ಸ್ ಕಾರು ಮಾದರಿಗಳು ಎಂಜಿನ್ ಆಯ್ಕೆಗೆ ಅನುಗುಣವಾಗಿ 4 ಮ್ಯಾಟಿಕ್ ಟೆಕ್ನಾಲಜಿ ಮತ್ತು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಪಡೆದುಕೊಂಡಿದ್ದು, ಸ್ಟ್ಯಾಂಡರ್ಡ್ ಇ-ಕ್ಲಾಸ್ ಮಾದರಿಯನ್ನು ಆಧರಿಸಿ ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ನಿರ್ಮಾಣ ಮಾಡಲಾಗಿದೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಪರ್ಫಾಮೆನ್ಸ್ ಮಾದರಿಗಳಾಗಿರುವುದರಿಂದ ಹೊಸ ಕಾರಿನ ಬಹುತೇಕ ವಿನ್ಯಾಸವು ಸ್ಪೋರ್ಟಿಯಾಗಿರುವುದಲ್ಲದೇ ಕಟಿಂಗ್ ಎಡ್ಜ್ ವಿನ್ಯಾಸ ಹೊಂದಿದ್ದು, ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಎರಡು ಮಾದರಿಗಳು ತಾಂತ್ರಿಕವಾಗಿ ಸಾಕಷ್ಟು ವಿಭಿನ್ನತೆಯನ್ನು ಹೊಂದಿವೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಹೊಸ ಇ53 ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಆಕರ್ಷಕವಾದ ಫ್ರಂಟ್ ಡಿಸೈನ್ ನೀಡಿದ್ದು, ವಿಶಿಷ್ಠವಾದ ಏರ್ ಇನ್‌ಟೆಕ್, ಸೈಡ್ ಪ್ಯಾನೆಲ್‌ಗಳಲ್ಲಿ ಎಎಂಜಿ ಬ್ಯಾಡ್ಜ್, ಎಎಂಜಿ ರೆಡಿಯೆಟರ್ ಗ್ರಿಲ್, ಎಎಂಜಿ ಬ್ಯಾಡ್ಜಿಂಗ್, 19-ಇಂಚಿನ ಎಎಂಜಿ ಅಲಾಯ್ ವೀಲ್ಹ್ ನೀಡಿದೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಇ63 ಎಸ್ ಮಾದರಿಯಲ್ಲೂ ಹೆಚ್ಚಿನ ಮಟ್ಟದ ಸ್ಪೋರ್ಟಿ ವಿನ್ಯಾಸಗಳನ್ನು ಜೋಡಣೆ ಮಾಡಿದ್ದು, ಕಾರಿನ ಸುತ್ತಲು ಅಲ್ಯುನಿಯಂ ಹೊದಿಕೆಯೊಂದಿಗೆ 20-ಇಂಚಿನ ಎಎಂಜಿ ಅಲಾಯ್ ವೀಲ್ಹ್, ಎಎಂಜಿ ಬ್ಯಾಜ್ಡ್ ಹೊಂದಿರುವ ರೆಡ್ ಬ್ರೆಕ್ ಕ್ಯಾಲಿಪರ್, ಎರಡು ಟ್ವಿನ್ ಪೈಪ್ ಎಕ್ಸಾಸ್ಟ್ ಸಿಸ್ಟಂ ಹೊಂದಿರಲಿದೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಜೊತೆಗೆ ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಕಾರುಗಳಲ್ಲಿ 12.3 ಇಂಚಿನ ಇನ್ಪೋಟೈನ್‌ಮೆಂಟ್ ಸ್ಕ್ರೀನ್ ಮತ್ತು 12.3-ಇಂಚಿನ ಇನ್‍ಸ್ಟುಮೆಂಟ್ ಕ್ಲಸ್ಟರ್, ಎಂಬಿಯುಎಕ್ಸ್ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟ್, ಮರ್ಸಿಡಿಸ್ ಮಿ ಕನೆಕ್ಟ್ ಟೆಕ್ನಾಲಜಿ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಎಎಂಜಿ ಸ್ಪೋರ್ಟ್ ಸೀಟುಗಳು, ಆ್ಯಂಬಿಯೆಂಟ್ ಲೈಟಿಂಗ್ಸ್ ನೀಡಲಾಗಿದೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಮರ್ಸಿಡಿಸ್-ಎಎಂಜಿ ಇ53 ಮಾದರಿಯಲ್ಲಿ ಕಂಪನಿಯು 3.0-ಲೀಟರ್ ಸಿಕ್ಸ್ ಸಿಲಿಂಡರ್ ಟ್ವಿನ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇ63 ಎಸ್ ಮಾದರಿಯಲ್ಲಿ 4.0-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

3.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 9-ಸ್ಪೀಡ್ ಎಎಂಜಿ ಸ್ಪೀಡ್‌ಶಿಫ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 429 ಬಿಎಚ್‌ಪಿ, 520 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 4.0-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಮಾದರಿಯು 9-ಸ್ಪೀಡ್ ಎಎಂಜಿ ಸ್ಪೀಡ್‌ಶಿಫ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 603 ಬಿಎಚ್‌ಪಿ, 850 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಪರ್ಫಾಮೆನ್ಸ್ ಸೆಡಾನ್ ಬಿಡುಗಡೆ

ಹೊಸ ಕಾರುಗಳಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಪರ್ಫಾಮೆನ್ಸ್‌ಗಾಗಿ ಮಾತ್ರವಲ್ಲ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, ಹೊಸ ಕಾರಿನಲ್ಲಿ 8 ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಇಎಸ್‌ಪಿ, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್, ಆಕ್ಟಿವ್ ಬ್ಯಾನೆಟ್, ಆಕ್ಟಿವ್ ಬ್ರೇಕಿಂಗ್ ಸಿಸ್ಟಂ, ಅಡಾಪ್ಟಿವ್ ಬ್ರೇಕಿಂಗ್ ಸಿಸ್ಟಂ, ಬ್ಲೈಂಡ್ ಸ್ಪಾಟ್ ಅಸಿಸ್ಟ್ ಸೌಲಭ್ಯಗಳಿವೆ.

Most Read Articles

Kannada
English summary
Mercedes-AMG E53 & E63 S Launched In India At Rs 1.02 Crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X