ಜೂನ್ 8ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಮರ್ಸಿಡಿಸ್ ಮೇಬ್ಯಾಚ್ ಜಿಎಲ್ಎಸ್600

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಬಿಡುಗಡೆ ಮಾಹಿತಿಯನ್ನು ಖಚಿತಪಡಿಸಿದ್ದು, ಹೊಸ ಕಾರು ಇದೇ ತಿಂಗಳು 8ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಕಂಪನಿಯು ಟೀಸರ್ ಬಹಿರಂಗಪಡಿಸಿದೆ.

ವಿಶ್ವಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ 2019ರ ಕೊನೆಯಲ್ಲಿ ಬಿಡುಗಡೆಯಾಗಿರುವ ಹೊಸ ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಮಾದರಿಯು ಇದೀಗ ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಹಲವಾರು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಳ್ಳಲಿದೆ.

ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಮರ್ಸಿಡಿಸ್ ಮೇಬ್ಯಾಚ್ ಜಿಎಲ್ಎಸ್600

ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್ 600 ಕಾರು ಮಾದರಿಯ ಭಾರತೀಯ ಮಾರುಕಟ್ಟೆಗಾಗಿ ಹೊಸ ರೂಪಾಂತರ ಪಡೆದುಕೊಳ್ಳಲಿದ್ದು, ಅಲ್ಟ್ರಾ-ಐಷಾರಾಮಿ ಎಸ್‌ಯುವಿ ಎಸ್ಯುವಿಯ ಸ್ಟ್ಯಾಂಡರ್ಡ್ ಮಾದರಿಯ ಮೇಲೆ ಹಲವಾರು ಬದಲಾವಣೆಗಳನ್ನು ಹೊಂದಿರುತ್ತದೆ.

ಪ್ರೀಮಿಯಂ ಐಷಾರಾಮಿ ಎಸ್‌ಯುವಿಯ ಅಲ್ಟ್ರಾ-ಸ್ಮೂಥ್ ಸವಾರಿಗಾಗಿ ಮೇಬ್ಯಾಚ್ ಜಿಎಲ್ಎಸ್ 600 ಕಾರಿನಲ್ಲಿ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಸ್ಷೆಷನ್ ವ್ಯವಸ್ಥೆ ಜೋಡಿಸಲಾಗಿದ್ದು, ಕಂಪನಿಯು ಹೊಸ ಕಾರಿನಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಜೋಡಿಸಿದೆ.

ಜೂನ್ 8ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಮರ್ಸಿಡಿಸ್ ಮೇಬ್ಯಾಚ್ ಜಿಎಲ್ಎಸ್600

ಹೊಸ ಎಂಜಿನ್ ಮಾರಿಯು 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ.

Most Read Articles

Kannada
English summary
2021 Mercedes-Maybach GLS600 India Launch On June 8: New Teaser Video Released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X