ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಇವಿ ಮತ್ತು ಗ್ಲೊಸ್ಟರ್ ಎಸ್‌ಯುವಿ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಎಸ್‌ಯುವಿ ಕಾರುಗಳಲ್ಲಿ ಹೊಸ ವೆರಿಯೆಂಟ್ ಬಿಡುಗಡೆಯ ಉದ್ದೇಶದೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಹೌದು, ಎಂಜಿ ಮೋಟಾರ್ ಕಂಪನಿಯು ಗ್ಲೊಸ್ಟರ್ ಮತ್ತು ಹೆಕ್ಟರ್ ಪ್ಲಸ್ ಹೊಸ ಆವೃತ್ತಿಯನ್ನು ಈಗಾಗಲೇ ಮಾರಾಟ ಮಾಡುತ್ತಿದ್ದು, ಕಂಪನಿಯು ಎರಡು ಕಾರುಗಳಲ್ಲೂ ಮತ್ತೊಂದು ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುವ ಸನಿಹದಲ್ಲಿದೆ. ಹೊಸ ಆವೃತ್ತಿಗಳ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಹೊಸ ಆವೃತ್ತಿಗಳ ಕುರಿತು ಶೀಘ್ರದಲ್ಲೇ ನಿಖರ ಮಾಹಿತಿಯು ಲಭ್ಯವಾಗಲಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರುಗಳಲ್ಲಿ ನಿರಂತರವಾಗಿ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್‌ನಲ್ಲಿ ಸಿವಿಟಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಗಳು ಮತ್ತಷ್ಟು ಸುಧಾರಿತ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿವೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಹಾಗೆಯೇ ಎಂಜಿ ಮೋಟಾರ್ ಕಂಪನಿಯು ಹೊಸ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಐಷಾರಾಮಿ ಕಾರು ಮಾದರಿಯಾಗಿರುವ ಗ್ಲೊಸ್ಟರ್ ಎಸ್‌ಯುವಿ ಮಾದರಿಯ ಮಾರಾಟದಲ್ಲೂ ಹೊಸ ದಾಖಲೆಗೆ ಕಾರಣವಾಗಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಕಳೆದ ನವೆಂಬರ್‌ನಲ್ಲಿ ಹೊಸ ಗ್ಲೊಸ್ಟರ್ ಕಾರು ಮಾದರಿಯು ಮಾರಾಟ ಆರಂಭಗೊಂಡ ನಂತರ ಹೊಸ ಕಾರು ಭಾರೀ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರಿಗೆ ಹೆಚ್ಚಿನ ಬೇಡಿಕೆ ಹರಿದುಬಂದಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ವೆರಿಯೆಂಟ್ ಹೊಂದಿರುವ ಗ್ಲೊಸ್ಟರ್ ಕಾರು ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಫುಲ್ ಸೈಜ್ ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಹಲವಾರು ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರುವ ಹೊಸ ಗ್ಲೊಸ್ಟರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.35.58 ಲಕ್ಷ ಬೆಲೆ ಪಡೆದುಕೊಂಡಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಇನ್ನು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಯಲ್ಲಿ ಸದ್ಯ ಎಂಜಿ ಮೋಟಾರ್ ಕಂಪನಿಯು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಟರ್ಬೊ ಪೆಟ್ರೋಲ್ ಮಾದರಿಗಳಿಗಾಗಿ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಕಾರುಗಳಲ್ಲಿ ಕಂಪನಿಯು ಇದೀಗ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇಕೋ ಮತ್ತು ಸ್ಪೋಟ್ ಮೋಡ್‌ಗಳನ್ನು ಹೊಸದಾಗಿ ಪರಿಚಯಿಸಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಸಿಟಿವಿ ಗೇರ್‌ಬಾಕ್ಸ್ ಆಯ್ಕೆಯನ್ನ ಹೆಕ್ಟರ್ ಮತ್ತು ಹೆಕ್ಟರ್ ಕಾರುಗಳ ಸ್ಮಾರ್ಟ್ ಮತ್ತು ಶಾರ್ಪ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಹೆಕ್ಟರ್ ಸಿವಿಟಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 16.52 ಲಕ್ಷಕ್ಕೆ ಮತ್ತು ರೂ. 18.10 ಲಕ್ಷಕ್ಕೆ ಖರೀದಿ ಲಭ್ಯವಿದ್ದಲ್ಲಿ ಹೆಕ್ಟರ್ ಪ್ಲಸ್ ಸಿಟಿವಿ ಮಾದರಿಯು ರೂ. 17.22 ಲಕ್ಷಕ್ಕೆ ಮತ್ತು ರೂ. 18.90 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಹೆಕ್ಟರ್ ಪ್ಲಸ್ ಮತ್ತು ಗ್ಲೊಸ್ಟರ್ ಹೊಸ ವೆರಿಯೆಂಟ್‌ಗಳ ಬಿಡುಗಡೆ

ಸಿವಿಟಿ ಗೇರ್‌ಬಾಕ್ಸ್ ಹೊರತಾಗಿ ಹೊಸ ಮಾದರಿಯಲ್ಲೇ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಅಂಶಗಳನ್ನು ಮುಂದುವರಿಸಿದ್ದು, ಹೆಕ್ಟರ್ ಸರಣಿಯು ಇದೀಗ 5 ಸೀಟರ್, 6 ಸೀಟರ್ ಮತ್ತು 7 ಸೀಟರ್ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಾಗುವ ಮೂಲಕ ಮ್ಯಾನುವಲ್, ಸಿವಿಟಿ ಮತ್ತು ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಂತಾಗಿದೆ.

Most Read Articles

Kannada
English summary
MG Hector and Gloster spied testing. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X