Just In
Don't Miss!
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Finance
ಮಾರ್ಚ್ 04ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Movies
ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೈಟೆಕ್ ಬ್ಯಾಟರಿ ತಂತ್ರಜ್ಞಾನದೊಂದಿಗೆ 2021ರ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ
ಎಂಜಿ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಜೆಡ್ಎಸ್ ಇವಿ ಕಾರಿನ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ.

ಇಂಧನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ತನ್ನ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯನ್ನು ಹಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದೆ. 2020ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆ ಹೆಚ್ಚುವರಿ ಬ್ಯಾಟರಿ ಸಾಮಾರ್ಥ್ಯ ಸೇರಿದಂತೆ ವಿವಿಧ ಸುಧಾರಿತ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯು ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಎಕ್ಸೈಟ್ ಮಾದರಿಯು ರೂ. 20,99,800 ಮತ್ತು ಎಕ್ಸ್‌ಕ್ಲೂಸಿವ್ ಮಾದರಿಯು ರೂ. 24,18,000 ಬೆಲೆ ಹೊಂದಿದೆ.

ಎಂಜಿ ಕಂಪನಿಯು ಹೊಸ ಕಾರಿನಲ್ಲಿ ವಿಸ್ತರಿತ ಬ್ಯಾಟರಿ ರೇಂಜ್ ನೀಡಿರುವುದು ಜೆಡ್ಎಸ್ ಎಲೆಕ್ಟ್ರಿಕ್ ಮಾರಾಟದಲ್ಲಿ ಮತ್ತಷ್ಟು ಬೇಡಿಕೆಗೆ ಕಾರಣವಾಗಲಿದ್ದು, ಹೈಟೆಕ್ ತಂತ್ರಜ್ಞಾನ ಪ್ರೇರಿತ 44.5 kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ.

ಹೊಸ ಬ್ಯಾಟರಿ ಪ್ಯಾಕ್ ಜೋಡಣೆಯಿಂದಾಗಿ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ ಈ ಹಿಂದಿನ 340 ಕಿಮೀ ನಿಂದ 419 ಕಿಮೀ ಗೆ ಏರಿಕೆಯಾಗಿದ್ದು, ಹೊಸದಾಗಿ ನೀಡಲಾದ 215/55 17 ಇಂಚಿನ ಟೈರ್ ಮತ್ತು 177 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೀಡಲಾಗಿದೆ. ಇದರೊಂದಿಗೆ ಎಕ್ಸೈಟ್ ಸ್ಟ್ಯಾಂಡರ್ಡ್ ಮಾದರಿಯಲ್ಲಿ 20.32 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, 6 ಏರ್‌ಬ್ಯಾಗ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸೌಲಭ್ಯ ಹೊಂದಿದೆ.

ಎಕ್ಸ್‌ಕ್ಲೂಸಿವ್ ಮಾದರಿಯಲ್ಲಿ ಎಕ್ಸೈಟ್ ಮಾದರಿಯಲ್ಲಿ ಕೆಲವು ತಾಂತ್ರಿಕ ಅಂಶಗಳ ಜೊತೆಗೆ ಹೆಚ್ಚುವರಿಯಾಗಿ ಐ ಸ್ಮಾರ್ಟ್ 2.0 ಕಾರ್ ಕನೆಕ್ಟೆಡ್ ಟೆಕ್ನಾಲಜಿ, 20.32 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಡ್ಯುಯಲ್ ಪನೊರಮಿಕ್ ಸ್ಕೈ ರೂಫ್, ಪಿಎಂ 2.5 ಏರ್ ಫಿಲ್ಟರ್, ಫ್ರಂಟ್ ಮತ್ತು ರಿಯರ್‌ನಲ್ಲಿ ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳಿವೆ.

ಜೊತೆಗೆ ಹೊಸ ಕಾರಿನಲ್ಲಿ 6 ಏರ್‌ಬ್ಯಾಗ್, ಆರು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ರಿಯರ್ ವ್ಯೂ ಮಿರರ್, ಸಿಲ್ವರ್ ಫೀನಿಶಿಂಗ್ ಹೊಂದಿರುವ ರೂಫ್ ರೈಲ್ಸ್ ಮತ್ತು ಸೀಟ್ ಬ್ಯಾಕ್ ಪ್ಯಾಕೇಟ್ ಸೌಲಭ್ಯಗಳಿವೆ.

ಇದರೊಂದಿಗೆ ಹೊಸ ಕಾರನ್ನು ಐದು ವಿಧಗಳಲ್ಲಿ ಚಾರ್ಜಿಂಗ್ ಮಾಡಬಹುದಾಗಿದ್ದು, ಸುಲಭವಾಗಿ ಸಿಗುವ ಹೋಂ ಚಾರ್ಜರ್, ಎಸಿ ಫಾಸ್ಟ್ ಚಾರ್ಜರ್, ಡಿಸಿ ಫಾಸ್ಟ್ ಚಾರ್ಜರ್, ಚಾರ್ಜಿಂಗ್ ನೆಟ್‌ವರ್ಕ್ ಮತ್ತು ರೋಡ್ ಸೈಡ್ ಅಸಿಸ್ಟ್ ಮೂಲಕ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು 2021ರ ಜೆಡ್ಎಸ್ ಇವಿಯೊಂದಿಗೆ ಮತ್ತಷ್ಟು ಹೊಸಗಳಲ್ಲಿ ಇವಿ ಕಾರು ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ.

ಆರಂಭದಲ್ಲಿ ಕೇವಲ 10 ನಗರಗಳಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾರಾಟ ಪರಿಚಯಿಸಿದ್ದ ಎಂಜಿ ಮೋಟಾರ್ ಕಂಪನಿಯು ಕಳೆದ ಕೆಲ ತಿಂಗಳ ಹಿಂದೆ ಎಲೆಕ್ಟ್ರಿಕ್ ಕಾರು ಮಾರಾಟವನ್ನು 20 ನಗರಗಳಿಗೆ ಹೆಚ್ಚಿಸಿತ್ತು. ಇದೀಗ 2021ರ ಜೆಡ್ಎಸ್ ಇವಿಯೊಂದಿಗೆ ಇವಿ ಕಾರು ಮಾರಾಟವನ್ನು 31ರ ನಗರಗಳಿಗೆ ಹೆಚ್ಚಿಸಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಹೊಸ ನಗರಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟ ಆರಂಭಿಸುವುದಕ್ಕೂ ಮುನ್ನ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಕರ್ನಾಟಕದಲ್ಲಿ ಇದೀಗ ಬೆಂಗಳೂರಿನ ನಂತರ ಮಂಗಳೂರು ಮತ್ತು ಮೈಸೂರಿನಲ್ಲೂ ಜೆಡ್ಎಸ್ ಎಲೆಕ್ಟ್ರಿಕ್ ಖರೀದಿಗೆ ಲಭ್ಯವಾಗಿದೆ.