2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಎಂಜಿ ಮೋಟಾರ್ ಕಂಪನಿಯು ತನ್ನ 2021ರ ಹೆಕ್ಟರ್ ಸರಣಿಗಳನ್ನು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸಿದ್ದು, ಇತ್ತೀಚೆಗೆ ಹೆಕ್ಟರ್ ಪ್ಲಸ್ ಮಾದರಿಯನ್ನು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡಿತು.

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಹೆಕ್ಟರ್ ಫೇಸ್‌ಲಿಫ್ಟ್ ಜೊತೆಗೆ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೆಕ್ಟರ್ ಪ್ಲಸ್ ವೆರಿಯೆಂಟ್ ಕೆಲವು ಬದಲಾವಣೆ ಮಾಡಿರುವ ಕಂಪನಿಯು ಸೆಲೆಕ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಹೆಕ್ಟರ್ ಪ್ಲಸ್ ಮಾದರಿಯನ್ನು ಗ್ರಾಹಕರ ಬೇಡಿಕೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಸ್ಟೈಲ್, ಸೂಪರ್, ಸ್ಮಾರ್ಟ್, ಶಾರ್ಪ್ ವೆರಿಯೆಂಟ್‌ಗಳೊಂದಿಗೆ ಬಿಡುಗಡೆ ಮಾಡಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ಹೊಸದಾಗಿ ಸೆಲೆಕ್ಟ್ ಮಾದರಿಯನ್ನು ಬಿಡುಗಡೆ ಮಾಡಿದೆ.

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ ಕಾರು ಹೊಸ ವೆರಿಯೆಂಟ್ ಸೇರ್ಪಡೆ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 13.62 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19.60 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರಿನಲ್ಲಿ 7 ಸೀಟರ್ ಆಯ್ಕೆಯೇ ಪ್ರಮುಖ ಬದಲಾವಣೆಯಾಗಿದೆ.

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಕಾರಿನಲ್ಲಿ ಆರಂಭಿಕ ಕಾರು ಮಾದರಿಯಾದ ಸ್ಟೈಲ್ ಆವೃತ್ತಿ ಮಾತ್ರವೇ ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಇನ್ನುಳಿದ ಆವೃತ್ತಿಗಳಲ್ಲಿ ಕೆಲವು ಮಾದರಿಗಳಲ್ಲಿ ವೆರಿಯೆಂಟ್‌ಗೆ ಅನುಗುಣವಾಗಿ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

ಹೆಕ್ಟರ್ ಮತ್ತು ಹೆಕ್ಟರ್ ಕಾರು ಮಾದರಿಗಳು ಬಹುತೇಕ ತಾಂತ್ರಿಕ ಅಂಶಗಳನ್ನು ಒಂದೇ ಮಾದರಿಯಲ್ಲಿ ಪಡೆದುಕೊಂಡಿದ್ದು, ಎಂಜಿನ್ ಆಯ್ಕೆ ಮತ್ತು ಆಸನ ಸೌಲಭ್ಯಗಳು ಮಾತ್ರ ವಿಭಿನ್ನತೆಯೊಂದಿಗೆ ಗ್ರಾಹಕರನ್ನು ಸೆಳೆಯಲಿವೆ. ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯು, 6 ಸೀಟರ್ ಮಾದರಿಯಲ್ಲಿರುವಂತಹ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಅನ್ನು ಹೊಂದಿದೆ.

7 ಸೀಟರ್ ಮಾದರಿಯಲ್ಲಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟಿನ ಬದಲಿಗೆ ಬೆಂಚ್ ಸೀಟನ್ನು ನೀಡಲಾಗಿದ್ದು, ಮೂರನೇ ಸಾಲು ವಯಸ್ಕ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲವಾದರೂ ಮಕ್ಕಳಿಗೆ ಉತ್ತಮ ಆಯ್ಕೆಯಾಗಿದೆ.

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

ಇನ್ನು ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಹೆಕ್ಟರ್‌ ಕಾರಿನಲ್ಲಿರುವಂತಹ ಎಂಜಿನ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದ್ದು, ಗ್ರಾಹಕರು ತಮ್ಮಅಗತ್ಯಕ್ಕೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 141 ಬಿಹೆಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 168 ಬಿಹೆಚ್‌ಪಿ, 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

ಮೈಲ್ಡ್ ಹೈಬ್ರಿಡ್ ಮಾದರಿಯನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆಯ್ದ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹೊಸ ಕಾರಿನ ಎಂಜಿನ್‌ಗಳನ್ನು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಮತ್ತು 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆ ಹೊಂದಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2021ರ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರಿನ ಹೊಸ ಟಿವಿ ಜಾಹೀರಾತು ಪ್ರಕಟಿಸಿದ ಎಂಜಿ ಮೋಟಾರ್

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಂಜಿ ಕಂಪನಿಯು ಹೊಸ ಕಾರಿನ ಮೂಲಕ ಎಂಪಿವಿ ಕಾರು ಖರೀದಿದಾರನ್ನು ಸೆಳೆಯುತ್ತಿದೆ.

Most Read Articles

Kannada
English summary
MG Motor Released New TVC For Hector Plus 7 Seater SUV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X