Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 5 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ಅಮೆರಿಕಾದಲ್ಲಿ ಇಂಡಿಯನ್ ರೆಸ್ಟೋರೆಂಟ್ ಪ್ರಾರಂಭಿಸಿದ ಪ್ರಿಯಾಂಕಾ ಚೋಪ್ರಾ: ಪೂಜೆಯ ಫೋಟೋ ವೈರಲ್
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- News
ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಎಸ್‍ಯುವಿ
ಜಪಾನ್ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಷಿ ತನ್ನ ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಎಸ್‍ಯುವಿಯು ವಿನ್ಯಾಸ ಮತ್ತು ಫೀಚರ್ ಗಳ ನವೀಕರಣಗಳನ್ನು ಪಡೆದುಕೊಡಿದೆ.

ಈ ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಎಸ್‍ಯುವಿಯು ಏಪ್ರಿಲ್ ತಿಂಗಳಲ್ಲಿ ಅಮೆರಿಕಾ, ಕೆನಡಾ ಮತ್ತು ಪೋರ್ಟೊ ರಿಕೊದ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ನಂತರದಲ್ಲಿ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಕೂಡ ಬಿಡುಗಡೆಯಾಗಲಿದೆ, ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಎಸ್‍ಯುವಿಯು 2021ರ ರೋಗ್‌ನಿಂದ ಪ್ಲಾಟ್‌ಫಾರ್ಮ್, ಎಂಜಿನ್ ಮತ್ತು ಹಲವಾರು ಆಂತರಿಕ ಭಾಗಗಳನ್ನು ಹಂಚಿಕೊಳ್ಳುತ್ತದೆ. ಹೊಸ ಮಾದರಿಯು ಸ್ಟ್ಯಾಂಡರ್ಡ್ ಮೂರನೇ ಸಾಲಿನ ಆಸನವನ್ನು ಸಹ ಪಡೆಯುತ್ತದೆ.

ಹೊಸ ಮಾದರಿಯು ‘ಐ-ಫೂ-ಡು-ಡು' ಕಾನ್ಸೆಪ್ಟ್ ಅನ್ನು ಆಧರಿಸಿದೆ, ಈ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಎಸ್‍ಯುವಿಯು ಡೈನಾಮಿಕ್ ಶೀಲ್ಡ್ ಸ್ಟೈಲಿಂಗ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು ಎಂಗಲ್ಬರ್ಗ್ ಟೂರರ್ ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಈ ಹೊಸ ಎಸ್‍ಯುವಿಯ ಒಳಭಾಗ ಸುಧಾರಿತ ಫಿಟ್ ಮತ್ತು ಉತ್ತಮ ಫಿನಿಶಿಂಗ್ ನಿಂದ ಕೂಡಿದೆ. ಇನ್ನು ಇದರಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಅಥವಾ 9 ಇಂಚಿನ ಟಚ್‌ಸ್ಕ್ರೀನ್ ಆಯ್ಕೆಯನ್ನು ಕೂಡ ನೀಡಿದ್ದಾರೆ.

ಇನ್ನು ಎಚ್‌ವಿಎಸಿ ಕಂಟ್ರೋಲ್ ಗಳು, 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹೆಡ್-ಅಪ್ ಡಿಸ್ ಪ್ಲೇ ಮತ್ತು ಇತರವುಗಳನ್ನು ನಿಸ್ಸಾನ್ ರೋಗ್‌ನಿಂದ ಪಡೆಯಲಾಗಿದೆ. ಇದರಲ್ಲಿ 4-ಸ್ಪೋಕ್ ಸ್ಟೀಯರಿಂಗ್ ವ್ಹೀಲ್ ಪಡೆಯುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಎಸ್‍ಯುವಿ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಚ್ಚ ಹೊಸ ಫ್ರಂಟ್ ಗ್ರಿಲ್ ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ರೇಜರ್-ತೆಳುವಾದ ಎಲ್ಇಡಿಗಳನ್ನು ಮೇಲೆ ಇರಿಸಲಾಗಿದ್ದು ಅದು ಡಿಆರ್ಎಲ್ ಮತ್ತು ಟರ್ನ್ ಸಿಗ್ನಲ್ ಗಳಾಗಿ ಕಾರ್ಯನಿರ್ವಹಿಸುತ್ತದೆ.

ಆದರೆ 3-ಜೋನ್ ಲೈಟಿಂಗ್ ಎಲಿಮೆಂಟ್ ಹೊಂದಿರುವ ಮೈನ್ ಹೆಡ್ ಲ್ಯಾಂಪ್ ಅನ್ನು ಬಂಪರ್ ಮೇಲೆ ಕಡಿಮೆ ಇರಿಸಲಾಗಿದೆ. ಕೆಳಗಿನ ಹೆಡ್‌ಲ್ಯಾಂಪ್ ಯುನಿಟ್ ಎಲ್ಇಡಿ ಫಾಗ್ ಲ್ಯಾಂಪ್ ಗಳನ್ನು ಮತ್ತು ಹೈ,ಲೋ ಬೀಮ್ ಗಳನ್ನು ಹೊಂದಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರೊಂದಿಗೆ ಗ್ರಿಲ್‌ನ ಎರಡೂ ಬದಿಯಲ್ಲಿರುವ ಕ್ರೋಮ್‌ನ ಸಿ-ಆಕಾರದ ಪಟ್ಟಿಗಳು ಹಳೆಯ ಮಾಂಟೆರೋ ಎಸ್‍ಯುವಿಯಲ್ಲಿ ನೀಡಲಾಗುವ ಬ್ರಷ್ ಗಾರ್ಡ್‌ಗಳನ್ನು ಹೋಲುತ್ತವೆ. ಇನ್ನು ಎಸ್‍ಯುವಿಯ ಸೈಡ್ ಪ್ರೊಫೈಲ್ ಎಂಗಲ್ಬರ್ಗ್ ಟೂರರ್ ಮಾದರಿಯಿಂದ ಸ್ಫೂರ್ತಿ ಪಡೆದಿದೆ, ಇದರಲ್ಲಿ ಬಲ್ಕಿಂಗ್ ವ್ಹೀಲ್ ಆರ್ಚ್ಸ್ ಮತ್ತು ದೊಡ್ಡ 20 ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಎಸ್‍ಯುವಿಯಲ್ಲಿ ನಿಸ್ಸಾನ್ ರೋಗ್ ಮಾದರಿಯಲ್ಲಿರುವ ಅದೇ 2.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 181 ಬಿಹೆಚ್‌ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಸಿವಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಸ್‍ಯುವಿಯು ಫ್ರಂಟ್-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಹೊಸ ಮಾದರಿ ಹಿಂದಿನ ಮಾದರಿಗಿಂತ 2.6% ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಮಿಟ್ಸುಬಿಷಿ ಕಂಪನಿ ಹೇಳಿಕೊಂಡಿದೆ.