ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಫೋರ್ಡ್ ಎಂಡೀವರ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಪೂರ್ಣ ಗಾತ್ರದ ಎಸ್‍ಯುವಿಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ಫೀಚರ್ಸ್ ಗಳು, ಅಕರ್ಷಕ ವಿನ್ಯಾಸ ಮತ್ತು ಉತ್ತಮ ಆಫ್-ರೋಡ್ ಸಾಮರ್ಥ್ಯದೊಂದಿಗೆ ಈ ಪೋರ್ಡ್ ಎಂಡೀವರ್ ಹೆಚ್ಚಿನ ಗ್ರಾಹಕರ ಗಮನಸೆಳೆಯುತ್ತಿದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಫೋರ್ಡ್ ಎಂಡೀವರ್ ಐಷಾರಾಮಿ ಎಸ್‍ಯುವಿಯಾದರೂ ಮಾಡಿಫೈಗೊಳಿಸುವವರ ಮೆಚ್ಚಿನ ಅಯ್ಕೆಗಳಲ್ಲಿ ಒಂದಾಗಿದೆ. ಎಂಡೀವರ್ ಎಸ್‍ಯುವಿಯನ್ನು ಮಾಡಿಫೈಗೊಳಿಸಿದ ಚಿತ್ರಗಳು ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇವೆ. ಆದರೆ ವಿಭಿನ್ನವಾಗಿ ನೋಡುಗರ ಕಣ್ಣು ಕುಕ್ಕುವ ರೀತಿ ಮಾಡಿಫೈಗೊಳಿಸಿದ ಫೋರ್ಡ್ ಎಂಡೀವರ್ ವೀಡಿಯೊವನ್ನು ಆಟೋ ಮಾರ್ಕ್ ಮತ್ತು ಟರ್ಬೊ ಎಕ್ಸ್‌ಟ್ರೀಮ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ ಸ್ಟಾಕ್ ಗ್ರಿಲ್ ಅನ್ನು ರಾಪ್ಟರ್ ನಂತಹ ಗ್ರಿಲ್ ನೊಂದಿಗೆ ಎಲ್ಇಡಿ ಲ್ಯಾಂಪ್ ಗಳನ್ನು ಬದಲಾಯಿಸಲಾಗಿದೆ. ಇದರೊಂದಿಗೆ ಹೆಡ್‌ಲೈಟ್‌ಗಳನ್ನು ಸಹ ಬದಲಾಯಿಸಲಾಗಿದೆ. ಇದಕ್ಕೆ ಈಗ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಟ್ರಿಪಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ನೀಡಲಾಗಿದೆ. ಇನ್ನು ಲ್ಇಡಿ ಟರ್ನ್ ಇಂಡೀಕೆಟರ್ ಗಳನ್ನು ಹೆಡ್ ಲ್ಯಾಂಪ್ ಒಳಗೆ ಸಂಯೋಜಿಸಲಾಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಹೆಡ್‌ಲ್ಯಾಂಪ್‌ಗಳ ಸ್ವಲ್ಪ ಕೆಳಗೆ, ಆಫ್ಟರ್ ಮಾರ್ಕೆಟ್ ಎಲ್ಇಡಿ ಡಿಆರ್ಎಲ್ ಅನ್ನು ಕಾಣಬಹುದು. ಎಂಡೀವರ್‌ನಲ್ಲಿನ ಬಂಪರ್ ಅನ್ನು ರಾಪ್ಟರ್ ಪ್ರೇರಿತ ಯುನಿಟ್ ಗಳಿಂದ ಬದಲಾಯಿಸಲಾಗಿದೆ. ಎಸ್‌ಯುವಿಯಲ್ಲಿ ಎಲ್ಲಿಯೂ ಕ್ರೋಮ್ ಅಂಶಗಳಿಲ್ಲ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಅವುಗಳನ್ನು ತೆಗೆದುಹಾಕಲಾಗಿದೆ ಅಥವಾ ಅದನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಲಾಗಿದೆ. ಫಾಗ್ ಲ್ಯಾಂಪ್ ಗಳನ್ನು ಬಂಪರ್‌ನೊಳಗೆ ಸೇರಿಸಲಾಗಿದೆ. ಬಂಪರ್ ಮತ್ತು ಫ್ರಂಟ್ ಗ್ರಿಲ್ ಎಸ್‍ಯುವಿಗೆ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ನೀಡಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಬಾನೆಟ್‌ನಲ್ಲಿ ಮಸ್ಕಲರ್ ಲುಕ್ ಅನ್ನು ನೀಡಲು ಬಾನೆಟ್ ಸ್ಕೂಪ್ ಅನ್ನು ಅಳವಡಿಸಿದೆ. ಇನ್ನು ಈ ಎಸ್‍ಯುವಿಯ ಸೈಡ್ ಪ್ರೊಫೈಲ್‌ಗೆ ಬಂದರೆ ಬೃಹತ್ ಪ್ರಮಾಣ ಬ್ಲ್ಯಾಕ್ ರೈನೋ ವಾರ್‌ಲಾರ್ಡ್ ಅಲಾಯ್ ವ್ಹೀಲ್ ಗಳನ್ನು ಕಾಣುತ್ತದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಈ ವ್ಹೀಲ್ ದಪ್ಪವಾದ ಆಫ್-ರೋಡ್ ಟೈರ್‌ಗಳ ಸುತ್ತ ಸುತ್ತುತ್ತದೆ. ಟೈರ್‌ಗಳು ಅಗಲವಾಗಿದ್ದು ವ್ಹೀಲ್ ಅರ್ಚಾರ್ ಗಳ ಹೊರಗೆ ಇದ್ದವು, ಇದನ್ನು ಪರಿಹರಿಸುವ ಸಲುವಾಗಿ ಎಸ್‍ಯುವಿಯಲ್ಲಿ ವ್ಹೀಲ್ ಕಮಾನು ಕ್ಲಾಡಿಂಗ್ ಅನ್ನು ಅಳವಡಿಸಲಾಗಿದೆ. ಈಗ ವ್ಹೀಲ್ ಅರ್ಚಾರ್ ಒಳಗೆ ಟೈರ್ ಈಗ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಈ ಫೋರ್ಡ್ ಎಂಡೀವರ್‌ನ ಹಿಂಭಾಗದ ಎಲ್ಇಡಿ ಲ್ಯಾಂಪ್ ಗಳೊಂದಿಗೆ ರೂಫ್ ಮೇಲೆ ಲೆ ಗ್ಲೋಸ್ ಬ್ಲ್ಯಾಕ್ ಸ್ಪಾಯ್ಲರ್ ಅನ್ನು ಪಡೆಯುತ್ತದೆ. ಉಳಿದ ಪ್ರದೇಶಗಳಲ್ಲಿ ಕಂಡುಬರುವ ಬ್ಲ್ಯಾಕ್ ಥೀಮ್ ಅನ್ನು ಇಲ್ಲಿ ಕಾಣಬಹುದು. ಟೈಲ್ ಲ್ಯಾಂಪ್ ಗಳು ಎಲ್ಇಡಿ ಆದರೆ ಅದಕ್ಕೆ ಸ್ಮೋಕ್ಡ್ ಎಫೆಕ್ಟ್ ಅನ್ನು ನೀಡಿದ್ದಾರೆ.

ಹಿಂಭಾಗದ ಬಂಪರ್‌ನಲ್ಲಿ ಬಾಡಿ ಕಿಟ್ ಅಳವಡಿಸಲಾಗಿದ್ದು ಅದು ಎಸ್‍ಯುವಿಗೆ ಮಸ್ಕಲರ್ ಲುಕ್ ಅನ್ನು ನೀಡುತ್ತದೆ. ಬಾಡಿ ಕಿಟ್ ಜೊತೆ ಕ್ವಾಡ್ ಎಕ್ಸಾಸ್ಟ್ ಟಿಪ್ಸ್ ಅನ್ನು ಪಡೆಯುತ್ತದೆ. ಇಳಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಮಾಡಿಫೈಗೊಂಡ ಫೋರ್ಡ್ ಎಂಡೀವರ್ ಎಸ್‍ಯುವಿಯಲ್ಲಿ ಎಂಜಿನ್ ಅನ್ನು ಬದಲಾಯಿಸಲಾಗಿಲ್ಲ. ಇದರಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಫೋರ್ಡ್ ಎಂಡೀವರ್ ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ. ಫೋರ್ಡ್ ಎಂಡೀವರ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಎಂಜಿ ಗ್ಲೋಸ್ಟರ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Image Courtesy: Auto Marc

Most Read Articles

Kannada
English summary
Modified Ford Endeavour Luxury Suv Looks Stunning. Read In Kananda.
Story first published: Saturday, April 24, 2021, 21:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X