ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ತನ್ನ ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಆಡಿ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಈ ಹೊಸ ಆಡಿ ಇ-ಟ್ರಾನ್ ಜಿಟಿ ಮಾದರಿಯು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಆಗಿರಬಹುದು. ಇದು ಬ್ರಾಂಡ್‌ನ ಮೂರನೇ ಎಲೆಕ್ಟ್ರಿಕ್ ಮಾದರಿಯಾಗರಲಿದೆ. ಆಡಿ ಭಾರತೀಯ ಮಾರುಕಟ್ಟೆಯ ಐಷಾರಾಮಿ ಕ್ಷೇತ್ರದಲ್ಲಿ ಅತಿದೊಡ್ಡ ಇವಿ ಪೋರ್ಟ್ಫೋಲಿಯೊವನ್ನು ನೀಡುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ ಮಾತ್ರ ಆಡಿ ಇ-ಟ್ರಾನ್ ಜಿಟಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿತು. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆಡಿ ಇ-ಟ್ರಾನ್ ಜಿಟಿ ಕಾರು ಭಾರತೀಯ ಮಾರುಕಟ್ಟೆಗೆ ಸಿಬಿಯು ಯುನಿಟ್ ಗಳಾಗಿ ಬರುತ್ತದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಆಡಿ ಇ -ಟ್ರಾನ್ ಜಿಟಿ ಕೂಪ್ ಅನ್ನು ಕ್ವಾಟ್ರೊ ಮತ್ತು ಆರ್‌ಎಸ್ ಆವೃತ್ತಿಗಳಲ್ಲಿ ನೀಡಲಾಗಿದೆ ಮತ್ತು ಎರಡೂ ರೂಪಾಂತರಗಳು ಭಾರತಕ್ಕೆ ಬರುವ ಸಾಧ್ಯತೆಯಿದೆ. 2018ರ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ಈ ಮಾದರಿಯ ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದ್ದರು. ಈ ಮಾದರಿಯ ದೊಡ್ಡ ಅಗ್ರೇಸಿವ್ ಲೈನ್ ಗಳನ್ನು ಹೊಂದಿದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಈ ಮಾದರಿಯ ಬಾನೆಟ್‌ನಲ್ಲಿ ದೊಡ್ಡ ಇಂಡೆಂಟೇಶನ್ ಮತ್ತು ಗ್ರಿಲ್ ಬದಲು ಇ-ಟ್ರಾನ್ ಪ್ಯಾಟರ್ನ್ ಪ್ಯಾನೆಲ್. ಕೂಪ್ ಆರ್‌ಎಸ್ ಆವೃತ್ತಿಯಲ್ಲಿ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ, ಆದರೆ ಆಡಿ ಲೇಸರ್ ಲೈಟ್ ಎರಡೂ ರೂಪಾಂತರಗಳಲ್ಲಿ ಪ್ರಮಾಣಿತವಾಗಿದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಇನ್ನು ಆಡಿ ಇ-ಟ್ರಾನ್ ಜಿಟಿ 19 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಇದನ್ನು ಏರೋ ಬ್ಲೇಡ್‌ಗಳೊಂದಿಗೆ 21 ಇಂಚಿನ ಅಲಾಯ್ ವ್ಹೀಲ್ ಆಯ್ಕೆಯನ್ನು ಹೊಂದಿರುತ್ತದೆ. ಇನ್ನು ಈ ಕಾರಿನ ಒಳಭಾಗದಲ್ಲಿ ದೊಡ್ಡದಾದ 12.3 ಇಂಚಿನ ವರ್ಚುವಲ್ ಕಾಕ್‌ಪಿಟ್ ಕನ್ಸೋಲ್ ಮತ್ತು 10.1 ಇಂಚಿನ ಎಂಎಂಐ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಈ ಸಿಸ್ಟಂ ವಾಯ್ಸ್ ಕಾಮೆಂಡ್ ಮತ್ತು ಆಡಿ ಕನೆಕ್ಟಿವಿಟಿಯನ್ನು ಹೊಂದಿದೆ. ಈ ಎಂಎಂಐ ನ್ಯಾವಿಗೇಷನ್ ಪ್ಲಸ್ ವೈ-ಫೈ ಹಾಟ್‌ಸ್ಪಾಟ್‌ನೊಂದಿಗೆ ಇ-ಟ್ರಾನ್ ನಿರ್ದಿಷ್ಟ ಕಾರ್ಯಗಳೊಂದಿಗೆ ಇಂಟಿಲಿಜೆಂಟ್ ನ್ಯಾವಿಗೇಷನ್ ನೀಡುತ್ತದೆ. ಇನ್ನು ಪವರ್ ಫುಲ್ ಡಿಸಿ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಕಡಿಮೆ ವೇಗದ ಚಾರ್ಜಿಂಗ್ ಸ್ಟಾಪ್‌ಗಳೊಂದಿಗೆ ವೇಗದ ಮಾರ್ಗವನ್ನು ಲೆಕ್ಕಾಚಾರ ಮಾಡಲು ಇದು ಇ-ಟ್ರಾನ್ ರೂಟ್ ಪ್ಲಾನರ್ ಅನ್ನು ಸಹ ಪಡೆಯುತ್ತದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಈ ಆಡಿ ಇ-ಟ್ರಾನ್ ಜಿಟಿ ಕಾರಿನಲ್ಲಿ ಪವರ್ ಶಾಶ್ವತವಾಗಿ ಉತ್ಸುಕವಾದ ಸಿಂಕ್ರೊನಸ್ ಯಂತ್ರದಿಂದ (ಪಿಎಸ್‌ಎಂ) ಮುಂಭಾಗದಲ್ಲಿ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಹೊಂದಿದೆ. ಹಿಂಭಾಗದ ಆಕ್ಸಲ್‌ನಲ್ಲಿ ಎರಡು ಸ್ಪೀಡ್ ಟ್ರಾನ್ಸ್‌ಮಿಷನ್ ಮತ್ತು ಎಲೆಕ್ಟ್ರಿಕ್ ಆಲ್-ವೀಲ್ ಡ್ರೈವ್‌ನೊಂದಿಗೆ ಜೋಡಿಸಲಾಗಿದೆ.ಇ-ಟ್ರಾನ್ ಜಿಟಿ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಎಲೆಕ್ಟ್ರಿಕ್ ಮೋಟಾರ್‌ಗಳು 350 kW ಹೊಂದಿದ್ದು, ಇದು 469 ಬಿಹೆಚ್‍ಪಿ ಪವರ್ ಮತ್ತು 630 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಆರ್ಎಸ್ ಇ-ಟ್ರಾನ್ ಜಿಟಿ 440 kW ಅನ್ನು ಹೊಂದಿದ್ದು, ಇದು 590 ಬಿಹೆಚ್‍ಪಿ ಪವರ್ ಮತ್ತು 830 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಇ-ಟ್ರಾನ್ ಜಿಟಿ ಸ್ಟ್ಯಾಂಡಡ್ ರೂಪಾಂತರ 4.1 ಸೆಕೆಂಡುಗಳಲ್ಲಿ 0 ದಿಂದ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು 245 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಇನ್ನು ಆರ್ಎಸ್ ರೂಪಾಂತರವು 3.3 ಸೆಕೆಂಡುಗಳಲ್ಲಿ 0 ದಿಂದ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮಾದರಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.ಆಡಿ ಇ-ಟ್ರಾನ್ ಜಿಟಿ ಕಾರಿನಲ್ಲಿ 85 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಕಾರು 488 ಕಿಮೀ ರೇಂಜ್ ಅನ್ನು ಹೊಂದಿರುತ್ತದೆ, 800-ವೋಲ್ಟ್ ತಂತ್ರಜ್ಞಾನದಿಂದ ಬೆಂಬಲಿತವಾಗಿದ್ದು ವೇಗದ DC 270 kW ವರೆಗೆ ಚಾರ್ಜ್ ಆಗುತ್ತದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಆಡಿ ತನ್ನ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಬೆಲೆಯು ರೂ.1.04 ಕೋಟಿಯಾಗಿದೆ. ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ಇಂಗೋಲ್ಸ್ಟಾಟ್ ಆಧಾರಿತ ಕಂಪನಿಯ ವಿಸ್ತರಿಸುವ ಐಷಾರಾಮಿ ಪೋರ್ಟ್ಫೋಲಿಯೊದ ಭಾಗವಾಗಿದೆ. ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನಲ್ಲಿ ವಿ6 2.9-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಟಿಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಬ್ರಾಂಡ್‌ನ ಕ್ವಾಟ್ರೊ ಪರ್ಮನೆಂಟ್ ಆಲ್-ವೀಲ್ ಡ್ರೈವ್ ಮೂಲಕ ಸೆಲ್ಫ್-ಲಾಕಿಂಗ್ ಸೆಂಟರ್ ಡಿಫರೆನ್ಷಿಯಲ್‌ನೊಂದಿಗೆ ಎಲ್ಲಾ ನಾಲ್ಕು ವ್ಭೀಲ್ ಗಳೊಂದಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಎಂಜಿನ್ 6,700 ಆರ್‌ಪಿಎಂನಲ್ಲಿ 443 ಬಿಹೆ‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆಗೊಳಿಸುದ ಆಡಿ

ಆಡಿ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರಿನಲ್ಲಿ ಡ್ರೈವ್ ಸೆಲೆಕ್ಟ್, ಆಲ್-ವೀಲ್ ಸ್ಟೀರಿಂಗ್, ನಿಯಂತ್ರಿತ ಡ್ಯಾಂಪಿಂಗ್, ಮೂರು-ಚೇಂಬರ್ ಏರ್ ಸಸ್ಪೆಂಕ್ಷನ್, ರಿಯರ್-ಆಕ್ಸಲ್ ಡಿಫರೆನ್ಷಿಯಲ್ ಲಾಕ್ ಮತ್ತು ಐಚ್ಛಿಕ ಕಾರ್ಬನ್-ಫೈಬರ್ ಸೆರಾಮಿಕ್ ಡಿಸ್ಕ್ ಬ್ರೇಕ್‌ಗಳು ಮತ್ತು ಇತರ ಅತ್ಯಾಧುನಿಕ ತಂತ್ರಜ್ಙಾನಗಳನ್ನು ಹೊಂದಿರುತ್ತದೆ.

Most Read Articles

Kannada
Read more on ಆಡಿ audi
English summary
New audi e tron gt electric sedan teaser out ahead of launch details
Story first published: Wednesday, August 18, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X