ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ (BMW X3 Facelift) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯು ಕೆಲವು ವರದಿಗಳ ಪ್ರಕಾರ ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಜರ್ಮನ್ ಐಷಾರಾಮಿ ಕಾರು ತಯಾರಕ ತನ್ನ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಈ ವರ್ಷದ ಮಧ್ಯಂತರ ಅವಧಿಯಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿತು. ಈ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯು ಸಾಕಷ್ಟು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಈ ಹೊಸ ಮಾದರಿಯು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಬ್ಲ್ಯಾಕ್-ಔಟ್ ಸಿಗ್ನೇಚರ್ ಬಿಎಂಡಬ್ಲ್ಯು ಕಿಡ್ನಿ ಗ್ರಿಲ್ ಅನ್ನು ಹೊಂದಿದೆ. ಸ್ವೆಪ್‌ಬ್ಯಾಕ್ ಹೆಡ್‌ಲೈಟ್‌ಗಳು ಹೆಚ್ಚು ಸ್ಲೀಕರ್ ಆಗಿದೆ. ಇನ್ನು ಈ ಕಾರಿನಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು ಡಾರ್ಕ್ ಟಿಂಟ್ ಹೊಂದಿದೆ, ಹಿಂಭಾಗದಲ್ಲಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಸ್ಪೋರ್ಟಿ ಆಗಿ ಕಾಣುತ್ತದೆ. ಈ ಎಸ್‍ಯುವಿಯು ವ್ಹೀಲ್ ಆರ್ಚರ್ ಸುತ್ತಲೂ ಸ್ಕಲಪಡಡ್ ಆಚರ್ಸ್, ಸ್ಪೋರ್ಟಿ ಬಂಪರ್ ವಿನ್ಯಾಸ ಮತ್ತು ಇತ್ಯಾದಿಗಳನ್ನು ಸಹ ಪಡೆಯುತ್ತದೆ. ಇದಲ್ಲದೆ ಎಸ್‍ಯುವಿಗೆ ಮಾಡಿದ ಎಲ್ಲಾ ಟ್ವೀಕ್‌ಗಳು ಎಕ್ಸ್3 ಅನ್ನು ಹಿಂದಿನ ಮಾದರಿಗಿಂತ ಭಿನ್ನವಾಗಿ ಕಾಣುವಂತೆ ಮಾಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಇದರ ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯುತ್ತದೆ. ಹೊಸ ಐಷಾರಾಮಿ ಎಸ್‍ಯುವಿ ಒಳಭಾಗದಲ್ಲಿ ಹೊಸ ಐಡ್ರೈವ್ 9 ಆಪರೇಟಿಂಗ್ ಸಿಸ್ಟಂ, 12.3-ಇಂಚಿನ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಇದರೊಂದಿಗೆ 16-ಸ್ಪೀಕರ್ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಅನ್ನು ಪಡೆಯುತ್ತದೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಈ ಫೇಸ್‌ಲಿಫ್ಟೆಡ್ ಎಕ್ಸ್3 ಎಸ್‍ಯುವಿಯಲ್ಲಿ 2.0 ಲೀಟರ್ ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 248 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಇದರೊಂದಿಗೆ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಂಜಿನ್ 184 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯು ಕೇವಲ 6.3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಬಿಎಂಡಬ್ಲ್ಯು ತನ್ನ ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.43.50 ಲಕ್ಷಗಳಾಗಿದೆ. ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಮಾದರಿಗೆ ಸ್ಟ್ಯಾಂಡರ್ಡ್ 220ಐ ಎಂ ಸ್ಪೋರ್ಟ್ ರೂಪಾಂತರಕ್ಕಿಂತ ಸುಮಾರು ರೂ.1.60 ಲಕ್ಷ ಹೆಚ್ಚು ದುಬಾರಿಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಕಂಪನಿಯು ಬಿಎಂಡಬ್ಲ್ಯು ಇಂಡಿವಿಜುವಲ್ ಹೈ-ಗ್ಲಾಸ್ ಶ್ಯಾಡೋ ಲೈನ್ ಪ್ಯಾಕೇಜ್ ಅನ್ನು ಸಹ ನೀಡುತ್ತಿದೆ ಮತ್ತು ಹೊಸ ಮಾದರಿಯು ಕೇವಲ 24 ಯುನಿಟ್‌ಗಳಿಗೆ ಸೀಮಿತವಾಗಿರುತ್ತದೆ. ಇದು ಲಿಮಿಟೆಡ್ ಎಡಿಷನ್ ಆಗಿದೆ. ಈ ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಬ್ಲ್ಯಾಕ್ ಸಫೈರ್ ಮತ್ತು ಆಲ್ಪೈನ್ ವೈಟ್ ಹಾಗೂ ಸೆನ್ಸಾಟೆಕ್ ಬ್ಲಾಕ್ ಮತ್ತು ಸೆನ್ಸಾಟೆಕ್ ಆಯ್ಸ್ಟರ್ ಎಂಬ ಡ್ಯುಯಲ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್ ಹಲವಾರು ಆಕರ್ಷಕ ಬಾಹ್ಯ ಅಂಶಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಇದು ಕಿಡ್ನಿ ಗ್ರಿಲ್ ಮತ್ತು ಸ್ಪ್ಲಿಟರ್‌ಗಳ ಮೇಲೆ ಕಾರ್ಬನ್ ಫೈಬರ್ ಅಂಶವನ್ನು ಹೊಂದಿದೆ. ಅದರ ಜೊತೆಗೆ ಹೊರಗಿನ ಮೀರರ್ಸ್ ಕ್ಯಾಪ್‌ಗಳು ಕಾರ್ಬನ್ ಫೈಬರ್ ಜೊತೆಗೆ ಕಾರ್ಬನ್ ಫೈಬರ್ ಹಿಂಭಾಗದ ಸ್ಪೋಲಿಯರ್‌ನೊಂದಿಗೆ ಕೂಡ ಬರುತ್ತವೆ. ಇನ್ನು ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್' ಕಾರಿನಲ್ಲಿ ಡಾರ್ಕ್ ಥೀಮ್ ಅನ್ನು 662ಎಂ 18-ಇಂಚಿನ ಜೆಟ್ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳೊಂದಿಗೆ ಸೈಡ್ ಪ್ರೊಫೈಲ್‌ಗೆ ಸಾಗಿಸಲಾಗುತ್ತದೆ. ಈ ಕಾರ್ಬನ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಲ್ಪೈನ್ ವೈಟ್ ಪೇಂಟ್ ವರ್ಕ್ ನಲ್ಲಿ ಪರಿಚಯಿಸಲಾಗಿದೆ. ಕಾರ್ ಕಾಂಟ್ರಾಕ್ಟ್ ಸ್ಟಿಚಿಂಗ್‌ನೊಂದಿಗೆ ಕಾಗ್ನ್ಯಾಕ್/ಬ್ಲ್ಯಾಕ್ ಬಣ್ಣದ ಸಂಯೋಜನೆಯಲ್ಲಿ ಸೆನ್ಸಾಟೆಕ್ ಟ್ರಿಮ್ ಅನ್ನು ಪಡೆಯುತ್ತದೆ. ಇನ್ನು ಹೊಸ ಬಿಎಂಡಬ್ಲ್ಯು 220ಐ ಬ್ಲ್ಯಾಕ್ ಶ್ಯಾಡೋ ಎಡಿಷನ್ ಅನ್ನು ಲಿಮಿಟೆಡ್ ಎಡಿಷನ್ ಆಗಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿ

ಎಲ್ಲಾ ಅಪ್‌ಡೇಟ್‌ಗಳು ಮತ್ತು ಟ್ವೀಕ್‌ಗಳೊಂದಿಗೆ ಫೇಸ್‌ಲಿಫ್ಟೆಡ್ ಬಿಎಂಡಬ್ಲ್ಯು ಎಕ್ಸ್3 ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಭಾರತದಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಮತ್ತು ಮುಂಬರುವ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New bmw x3 facelift suv expected launch soon details
Story first published: Wednesday, December 1, 2021, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X