ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ನವೀಕರಿಸಿದ ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ (BMW X3 Facelift) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯು ವರದಿಗಳ ಪ್ರಕಾರ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಐಷಾರಾಮಿ ಕಾರು ತಯಾರಕರು ತನ್ನ ಈ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಈ ವರ್ಷದ ಮಧ್ಯಂತರ ಅವಧಿಯಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿತು. ಈ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯು ಸಾಕಷ್ಟು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಈ ಹೊಸ ಮಾದರಿಯು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳನ್ನು ಪಡೆಯುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಬ್ಲ್ಯಾಕ್-ಔಟ್ ಸಿಗ್ನೇಚರ್ ಬಿಎಂಡಬ್ಲ್ಯು ಕಿಡ್ನಿ ಗ್ರಿಲ್ ಅನ್ನು ಹೊಂದಿದೆ. ಸ್ವೆಪ್‌ಬ್ಯಾಕ್ ಹೆಡ್‌ಲೈಟ್‌ಗಳು ಹೆಚ್ಚು ಸ್ಲೀಕರ್ ಆಗಿದೆ. ಇನ್ನು ಈ ಕಾರಿನಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು ಡಾರ್ಕ್ ಟಿಂಟ್ ಹೊಂದಿದೆ, ಹಿಂಭಾಗದಲ್ಲಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಸ್ಪೋರ್ಟಿ ಆಗಿ ಕಾಣುತ್ತದೆ. ಈ ಎಸ್‍ಯುವಿಯು ವ್ಹೀಲ್ ಆರ್ಚರ್ ಸುತ್ತಲೂ ಸ್ಕಲಪಡಡ್ ಆಚರ್ಸ್, ಸ್ಪೋರ್ಟಿ ಬಂಪರ್ ವಿನ್ಯಾಸ ಮತ್ತು ಇತ್ಯಾದಿಗಳನ್ನು ಸಹ ಪಡೆಯುತ್ತದೆ. ಇದಲ್ಲದೆ ಎಸ್‍ಯುವಿಗೆ ಮಾಡಿದ ಎಲ್ಲಾ ಟ್ವೀಕ್‌ಗಳು ಎಕ್ಸ್3 ಅನ್ನು ಹಿಂದಿನ ಮಾದರಿಗಿಂತ ಭಿನ್ನವಾಗಿ ಕಾಣುವಂತೆ ಮಾಡುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಇದರ ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯುತ್ತದೆ. ಈ ಹೊಸ ಐಷಾರಾಮಿ ಎಸ್‍ಯುವಿ ಒಳಭಾಗದಲ್ಲಿ ಹೊಸ ಐಡ್ರೈವ್ 9 ಆಪರೇಟಿಂಗ್ ಸಿಸ್ಟಂ, 12.3-ಇಂಚಿನ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಕೂಡ ಒಳಗೊಂಡಿರುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಇದರೊಂದಿಗೆ ಈ ಐಷಾರಾಮಿ ಕಾರಿನಲ್ಲಿ 16-ಸ್ಪೀಕರ್ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಅನ್ನು ಪಡೆಯುತ್ತದೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಈ ಫೇಸ್‌ಲಿಫ್ಟೆಡ್ ಎಕ್ಸ್3 ಎಸ್‍ಯುವಿಯಲ್ಲಿ 2.0 ಲೀಟರ್ ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 248 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ, ಈ ಎಂಜಿನ್ ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕೂಡ ಜೋಡಿಸಲಾಗುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಇನ್ನು ಇದರೊಂದಿಗೆ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಂಜಿನ್ 184 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯು ಕೇವಲ 6.3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

2022ರ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ ಶೀಘ್ರದಲ್ಲೇ ಆರಂಭವಾಗಲಿದೆ. ಈ ಪ್ರದರ್ಶನಕ್ಕಾಗಿ ವಾಹನ ತಯಾರಕ ಕಂಪನಿಗಳು ಸಿದ್ಧತೆಗಳನ್ನು ನಡೆಸುತ್ತಿವೆ. ಈ ಪ್ರದರ್ಶನದಲ್ಲಿ ವಾಹನ ತಯಾರಕ ಕಂಪನಿಗಳು ಕೆಲವು ಪ್ರಮುಖ ಉತ್ಪನ್ನಗಳನ್ನು ಬಹಿರಂಗಪಡಿಸುವುದಿಲ್ಲ. ಆದರೆ ಕೆಲವು ಆಸಕ್ತಿದಾಯಕ ಉತ್ಪನ್ನಗಳನ್ನು ಪರಿಚಯಿಸುತ್ತವೆ. ಈ ವಾಹನ ತಯಾರಕ ಕಂಪನಿಗಳಲ್ಲಿ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಕೂಡ ಸೇರಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಬವೇರಿಯನ್ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇತ್ತೀಚೆಗಷ್ಟೇ ತನ್ನ iX M60 ಎಲೆಕ್ಟ್ರಿಕ್ ಎಸ್‌ಯು‌ವಿಯನ್ನು ಬಹಿರಂಗಪಡಿಸಿದೆ. ಈಗ ಕಂಪನಿಯು ಬಣ್ಣ ಬದಲಾಯಿಸುವ ತಂತ್ರಜ್ಞಾನವನ್ನು ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಕೇವಲ ಒಂದು ಬಟನ್ ಪ್ರೆಸ್ ಮಾಡುವ ಮೂಲಕ ಕಾರಿನ ಬಣ್ಣವನ್ನು ಬದಲಿಸಬಹುದು. ಸದ್ಯಕ್ಕೆ, ಬಿಎಂಡಬ್ಲ್ಯು ಕಂಪನಿಯು ಈ ತಂತ್ರಜ್ಞಾನವನ್ನು ಯಾವ ವಾಹನಗಳಲ್ಲಿ ಅಳವಡಿಸಲಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ, ಆದರೆ ಕಂಪನಿಯ ಪ್ರಕಾರ ಈ ಪ್ರದರ್ಶನವು ಈ ತಂತ್ರಜ್ಞಾನದ ಪರಿಚಯದ ಒಂದು ಹಂತವಾಗಲಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಈ ತಂತ್ರಜ್ಞಾನದಿಂದ ಬಟನ್ ಪ್ರೆಸ್ ಮಾಡಿದರೆ ಕಾರು ಸ್ಟಾರ್ಟ್ ಆಗಲಿದೆ. ನಂತರ ಕಾರಿನ ಬಾಹ್ಯ ಬಣ್ಣ ಬದಲಾಗುತ್ತದೆ. ಇದರ ಹೊರತಾಗಿ ವಾಹನವು ಎಷ್ಟು ಬಣ್ಣಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿಯು ಬಹಿರಂಗವಾಗಿಲ್ಲ. ಇನ್ನು ಕಂಪನಿಯು ತನ್ನ ಟಾಪ್ ಎಂಡ್ ಪರ್ಫಾಮೆನ್ಸ್ ನೀಡುವ iX M60 ಎಲೆಕ್ಟ್ರಿಕ್ ಕಾರಿನಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಆದರೂ ಬಿಎಂಡಬ್ಲ್ಯು ಕಂಪನಿಯ ಎಲ್ಲಾ ಯೋಜನೆಗಳ ಬಗ್ಗೆ ತಿಳಿಯಲು ಈ ಪ್ರದರ್ಶನವು ಆರಂಭವಾಗುವವರೆಗೆ ಕಾಯಬೇಕಾಗಿದೆ. ಬಿಎಂಡಬ್ಲ್ಯು iX M60 ಕಾರು iX xDrive 50 ಕಾರಿನಲ್ಲಿರುವಂತಹ 111.5 ಕಿ.ವ್ಯಾ ಬ್ಯಾಟರಿ ಪ್ಯಾಕ್ ಹಾಗೂ ಡ್ಯುಯಲ್ ಮೋಟಾರ್‌ಗಳನ್ನು ಬಳಸುತ್ತದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ BMW X3 ಫೇಸ್‌ಲಿಫ್ಟ್ ಎಸ್‍ಯುವಿ

ಎಲ್ಲಾ ಅಪ್‌ಡೇಟ್‌ಗಳು ಮತ್ತು ಟ್ವೀಕ್‌ಗಳೊಂದಿಗೆ ಫೇಸ್‌ಲಿಫ್ಟೆಡ್ ಬಿಎಂಡಬ್ಲ್ಯು ಎಕ್ಸ್3 ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಭಾರತದಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಮತ್ತು ಮುಂಬರುವ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New bmw x3 facelift suv india launch could be january 2022 details
Story first published: Tuesday, December 28, 2021, 10:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X