ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಅಮೆರಿಕಾ ಮೂಲದ ಫೋರ್ಡ್ ಕಂಪನಿಯು ತನ್ನ ಹೊಸ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಫೋರ್ಡ್ ಎಫ್-150 ರಾಪ್ಟರ್ ಪರ್ಫಾಮೆನ್ಸ್ ಮತ್ತ್ ಆಫ್-ರೋಡ್ ಆಧಾರಿತ ಪಿಕಪ್ ಟ್ರಕ್ ಆಗಿದೆ.

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

2021ರ ಫೋರ್ಡ್ ಎಫ್-150 ರಾಪ್ಟರ್ ಮುಂಭಾಗದಲ್ಲಿ ಕೆಲವು ಮಹತ್ವದ ನವೀಕರಣಗಳನ್ನು ಪಡೆದುಕೊಂಡಿದೆ. ಅದರ ಕೋರ್ ಆಫ್-ರೋಡಿಂಗ್ ಡಿಎನ್‌ಎಯನ್ನು ಹಾಗೇ ಇರಿಸಲು ಕಂಪನಿಯು ನಿರ್ಧರಿಸಿದೆ. ಹೊಸ ರಾಪ್ಟರ್ ಇಂದಿನಿದಕ್ಕಿಂತ ಅತ್ಯಂತ ಕನೆಕ್ಟಿವಿಟಿ ಮತ್ತು ಆಫ್-ರೋಡ್ ಓರಿಯೆಂಟೆಡ್ ರಾಪ್ಟರ್ ಎಂದು ಫೋರ್ಡ್ ಹೇಳಿದೆ. ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್ ಅಪ್ರತಿಮ ಆಫ್-ರೋಡ್ ವಾಹನವಾಗಿದೆ.

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಹೊಸ ಫೋರ್ಡ್ ಎಫ್-150 ರಾಪ್ಟರ್ ಹಿಂಭಾಗದಲ್ಲಿ ಐದು-ಲಿಂಕ್ ಸಸ್ಪೆಂಕ್ಷನ್ ಅನ್ನು ಹೊಂದಿದ್ದು, ಇದು ಆಪ್-ರೋಡ್ ನಲ್ಲಿ ಹೆಚ್ಚು ಸಹಕಾರಿಯಾಗಿದೆ. ಈ ಪಿಕಪ್ ಟ್ರಕ್ ಫಾಕ್ಸ್ ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಇದು ಮುಂಭಾಗದಲ್ಲಿ 35.56 ಸೆಂ.ಮೀ ವರೆಗೆ ವ್ಹೀಲ್ ಟ್ರ್ಯಾವೆಲ್ ಮತ್ತು ಹಿಂಭಾಗದಲ್ಲಿ 38.1 ಸೆಂ.ಮೀ ವರೆಗೆ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇದು ರಾಪ್ಟರ್ ಮಾಡಿದ ಅತ್ಯುತ್ತಮ ಕಾರ್ಯವಾಗಿದೆ.

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಹೊಸ ಫೋರ್ಡ್ ಎಫ್-150 ರಾಪ್ಟರ್ ನಲ್ಲಿ 3.5-ಲೀಟರ್ ಟ್ವಿನ್-ಟರ್ಬೊ ವಿ6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಆದರೆ ಈ ಎಂಜಿನ್ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಇನ್ನು ಬಹಿರಂಗವಾಗಿಲ್ಲ. ಹಿಂದಿನ ಮಾದರಿಯ 3.5-ಲೀಟರ್ ಟ್ವಿನ್-ಟರ್ಬೊ ವಿ6 ಪೆಟ್ರೋಲ್ ಎಂಜಿನ್ 450 ಬಿಹೆಚ್‍ಪಿ ಪವರ್ ಮತ್ತು 691 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು.

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಈ ಫೋರ್ಡ್ ಎಫ್-150 ರಾಪ್ಟರ್ ಪಿಕಪ್ ಟ್ರಕ್ 2022ರಲ್ಲಿ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಕಂಪನಿಯು ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಇನ್ನು ವಿ8 ಚಾಲಿತ ರಾಪ್ಟರ್ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ರಾಪ್ಟರ್ ನಲ್ಲಿ 5.2-ಲೀಟರ್ ಸೂಪರ್ಚಾರ್ಜ್ಡ್ ವಿ8 ಎಂಜಿನ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಫೋರ್ಡ್ ಎಫ್-150 ರಾಪ್ಟರ್ ಮೂಲ ವಿನ್ಯಾಸವು ಸ್ಟ್ಯಾಂಡರ್ಡ್ ಎಫ್ -150 ಅನ್ನು ಹೋಲುತ್ತದೆ. ಆದರೆ ಇದು ಆಫ್-ರೋಡ್/ಪರ್ಫಾರ್ಮೆನ್ಸ್ ಫೋಕಸ್ಡ್ ರೂಪಾಂತರವಾಗಿರುವುದರಿಂದ ಕೆಲವು ಪ್ರಮುಖ ಬದಲಾವಣೆಗಳಿವೆ.

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಫೋರ್ಡ್ ಎಫ್-150 ರಾಪ್ಟರ್ ಬಂಪರ್ ಸ್ಪಷ್ಟವಾಗಿ 'ಬಿಲ್ಟ್ ಫೋರ್ಡ್ ಟಫ್' ಆಗಿದ್ದು, ಪ್ರೊಫೈಲ್‌ನಲ್ಲಿ, ಆಫ್-ರೋಡ್ ಸ್ಪೆಕ್ ಫಾಕ್ಸ್ ಶಾಕ್ ಗಳಿವೆ, ಹೆವಿ ಕ್ಲಾಡಿಂಗ್‌ನಿಂದ ಪೂರಕವಾದ ಬೃಹತ್ ವ್ಹೀಲ್ ಆರ್ಚರ್ ಆಫ್-ರೋಡ್ 35-ಇಂಚಿನ ಟೈರ್‌ಗಳಿಂದ ಕೂಡಿದೆ.

ಅನಾವರಣವಾಯ್ತು ಹೊಸ ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್

ಫೋರ್ಡ್ ಎಫ್-150 ರಾಪ್ಟರ್ ಪಿಕ್ಅಪ್ ಟ್ರಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ. ಇದು ಭಾರತೀಯ ಮಾರುಕಟ್ಟೆಯ ಆಫ್-ರೋಡ್ ಪ್ರಿಯರಿಗೆ ನಿರಾಸೆ ಸುದ್ದಿಯಾಗಿದೆ. ಈ ಫೋರ್ಡ್ ಎಫ್-150 ರಾಪ್ಟರ್ ಅಸಾಧರಣ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಮಾದರಿಯಾಗಿದೆ. ಫೋರ್ಡ್ ಎಫ್-150 ರಾಪ್ಟರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಜನಪ್ರಿಯತೆಯನ್ನು ಹೊಂದಿದೆ.

Most Read Articles

Kannada
Read more on ಫೋರ್ಡ್ ford
English summary
2021 Ford F-150 Raptor Unveiled. Read In Kannada.
Story first published: Saturday, February 6, 2021, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X