Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಐಷಾರಾಮಿ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರು
ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ತನ್ನ 2021ರ ಐ-ಪೇಸ್ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬಹುನಿರೀಕ್ಷಿತ ಈ ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರು ಭಾರತದ ತೀರಕ್ಕೆ ತಲುಪಿದೆ.

ಮುಂಬೈ ಬಳಿಯ ಜೆಎನ್‌ಪಿಟಿಯಲ್ಲಿ ಭಾರತಕ್ಕೆ ಬಂದಿಳಿದ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರಿನ ಕೆಲವು ಚಿತ್ರಗಳನ್ನು ಕಂಪನಿಯು ಹಂಚಿಕೊಂಡಿದೆ. ಈ ಎಲೆಕ್ಟ್ರಿಕ್ ಕಾರು ಎಸ್, ಎಸ್ಇ ಮತ್ತು ಎಚ್‌ಎಸ್‌ಇ ಎಂಬ ಮೂರು ವೆರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರು ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಮೂರು ಹಂತದ ಎಸಿ ಹೋಂ ಚಾರ್ಚಿಂಗ್ ಸೇರಿದಂತೆ ಹಲವಾರು ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ಐಷಾರಾಮಿ ಎಲೆಕ್ಟ್ರಿಕ್ ಕಾರು 4682 ಎಂಎಂ ಉದ್ದ, 2011 ಎಂಎಂ ಅಗಲ ಮತ್ತು 1566 ಎಂಎಂ ಎತ್ತರವನ್ನು ಹೊಂದಿದೆ. ಈ ಕಾರು 2990 ಎಂಎಂ ವ್ಹೀಲ್ ಬೇಸ್ ಮತ್ತು 174 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಇನ್ನು ಫ್ಯೂಜಿ ವೈಟ್, ಕ್ಯಾಲ್ಡೆರಾ ರೆಡ್, ಸ್ಯಾಂಟೊರಿನಿ ಬ್ಲ್ಯಾಕ್, ಯುಲಾಂಗ್ ವೈಟ್, ಸಿಂಧೂ ಸಿಲ್ವರ್, ಫೈರೆಂಜ್ ರೆಡ್, ಸೀಸಿಯಮ್ ಬ್ಲೂ, ಬೊರಾಸ್ಕೊ ಗ್ರೇ, ಐಗರ್ ಗ್ರೇ, ಪೋರ್ಟೊಫಿನೊ ಬ್ಲೂ, ಫರಾಲ್ಲನ್ ಪರ್ಲ್ ಬ್ಲ್ಯಾಕ್ ಮತ್ತು ಅರುಬಾ ಎಂಬ 12 ಬಣ್ಣಗಳಲ್ಲಿ ಈ ಐ-ಪೇಸ್ ಎಲೆಕ್ಟ್ರಿಕ್ ಕಾರು ಲಭ್ಯವಿರುತ್ತದೆ.

ಜಾಗ್ವಾರ್ ಕಂಪನಿಯು ಐ-ಪೇಸ್ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಮ್ಯಾಗ್ನೆಟ್ ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ 90 ಕಿವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾಗುತ್ತದೆ. ಈ ಎಲೆಕ್ಟ್ರಿಕ್ ಪವರ್‌ಟ್ರೇನ್ 395 ಬಿಹೆಚ್‍ಪಿ ಪವರ್ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಐ-ಪೇಸ್ ಎಲೆಕ್ಟ್ರಿಕ್ ಕಾರಿನಲ್ಲಿ 11 ಕಿ.ವ್ಯಾಟ್ ಆನ್‌ಬೋರ್ಡ್ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಕಾರಿನಲ್ಲಿ ಫಾಸ್ಟ್ ಜಾರ್ಜಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ವರ್ಲ್ಡ್‌ವೈಡ್ ಹಾರ್ಮೋನೈಸ್ಡ್ ಲೈಟ್ ವೆಹಿಕಲ್ಸ್ ಟೆಸ್ಟ್ ಪ್ರೊಸೀಜರ್‌ನ ಅಂಕಿಅಂಶಗಳ ಪ್ರಕಾರ, ಈ ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರು ಒಂದು ಗಂಟೆ ಜಾರ್ಜ್ ಮಾಡಿದರೆ 53 ಕಿ.ಮೀ ಚಲಿಸಬಹುದಾಗಿದೆ. ಈ ಎಲೆಕ್ಟ್ರಿಕ್ ಕಾರನ್ನು ಪೂರ್ಣ ಪ್ರಮಾಣದ ಜಾರ್ಜ್ ಮಾಡಲು 8.6 ಗಂಟೆಗಳವರೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹಿಂದಿನ ಐ-ಪೇಸ್ ಎಲೆಕ್ಟ್ರಿಕ್ ಕಾರು 7 ಕಿ.ವ್ಯಾಟ್ ಸಿಂಗಲ್-ಫೇಸ್ ಚಾರ್ಜಿಂಗ್ ಕೇವಲ ಒಂದು ಗಂಟೆ ಚಾರ್ಜ್ ಮಾಡಿದರೆ 35 ಕಿ.ಮೀ ಮೈಲೇಜ್ ಅನ್ನು ನೀಡುತ್ತಿತ್ತು. ಹಿಂದಿನ ಮಾದರಿಯು ಪೂರ್ಣ ಪ್ರಮಾಣದ ಜಾರ್ಜ್ ಆಗಲು 13 ಗಂಟೆಗಳವರೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ.

ಇನ್ನು ಈ ಕಾರಿನಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 12.3-ಇಂಚಿನ ಡಿಸ್ ಪ್ಲೇ ಮತ್ತು 10-ಇಂಚಿನ ಮತ್ತು 5-ಇಂಚಿನ ಮೇಲಿನ ಮತ್ತು ಕೆಳಗಿನ ಟಚ್‌ಸ್ಕ್ರೀನ್‌ಗಳನ್ನು ಇನ್ಫೋಟೈನ್‌ಮೆಂಟ್ ಮತ್ತು ಎಲೆಕ್ಟ್ರಿಕ್-ಕಾರಿನ ವಿವಿಧ ಕಂಟ್ರೋಲ್ ಗಳಿಂದ ಕೂಡಿದೆ.

ಇನ್ನು ಹೊಸ ಜಾಗ್ವಾರ್ ಎಲೆಕ್ಟ್ರಿಕ್ ಕಾರು ನವೀಕರಿಸಿದ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಹೊಸ ಪಿವಿ ಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುವ ಬ್ರ್ಯಾಂಡ್‌ನ ಮೊದಲ ಎಸ್‍ಯುವಿಯಾಗಿದೆ.

ಈ ಹೊಸ್ ಜಾಗ್ವಾರ್ ಐ-ಪೇಸ್ ಕಾರಿನಲ್ಲಿ ಹೊಸ ಅಟ್ಲಾಸ್ ಗ್ರೇ ಗ್ರಿಲ್ ಟಿಪ್ ಫಿನಿಶ್, ಹೊಸ ಅಲಾಯ್ ವ್ಹೀಲ್ ವಿನ್ಯಾಸ ಮತ್ತು ಐಷಾರಾಮಿ ಹೊಸ ಬ್ರೈಟ್ ಪ್ಯಾಕ್ ಆಯ್ಕೆ ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ಹೊಂದಿವೆ. ಈ ಐ-ಪೇಸ್ ಎಲೆಕ್ಟ್ರಿಕ್ ಕಾರಿನಲ್ಲಿ ಹೊಸ 3D ಸರೌಂಡ್ ಕ್ಯಾಮೆರಾವನ್ನು ಸಹ ಹೊಂದಿದೆ. ಇನ್ನು ಈ ಹೊಸ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.