ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಕಿಯಾ ಕಂಪನಿಯು ತನ್ನ ಸೆಲ್ಟೋಸ್ ಎಸ್‍ಯುವಿಯ ಹೊಸ ನೈಟ್‌ಫಾಲ್ ಎಡಿಷನ್ ಅನ್ನು ಅಮೆರಿಕದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್ ಅನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಕೆಲವು ಸೂಕ್ಷ್ಮ ವ್ಯತ್ಯಾಸಗಳನ್ನು ಕಂಡುಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಹೊಸ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್ ಮಾದರಿಯ ಟಾಪ್-ಸ್ಪೆಕ್ ಎಸ್‌ಎಕ್ಸ್ ಎಡಬ್ಲ್ಯೂಡಿ ಟ್ರಿಮ್‌ಗಿಂತ ಸ್ವಲ್ಪ ಕೆಳಗೆ ಇರುತ್ತದೆ ಮತ್ತು ಸೆಲ್ಟೋಸ್‌ನ ಯುಎಸ್ ಸರಣಿಯ ಎಸ್ ಎಡಬ್ಲ್ಯೂಡಿ ಟ್ರಿಮ್ ಅನ್ನು ಬದಲಾಯಿಸುತ್ತದೆ. ಸೆಲ್ಟೋಸ್‌ನ ನೈಟ್‌ಫಾಲ್ ಎಡಿಷನ್ ಹೊರಭಾಗದಲ್ಲಿ ಬ್ಲ್ಯಾಕ್ ಔಟ್ ರೇಡಿಯೇಟರ್ ಗ್ರಿಲ್, ಬ್ಲ್ಯಾಕ್ ಸೈಡ್ ಸಿಲ್ಸ್, ಬ್ಲ್ಯಾಕ್ ರೂಫ್ ರೈಲ್ ಮತ್ತು 18 ಇಂಚಿನ ಮ್ಯಾಟ್ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳೊಂದಿಗೆ ಡಾರ್ಕ್ ಥೀಮ್ ಅನ್ನು ಅಳವಡಿಸಿಕೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಹೊಸ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್ ಎಸ್‍ಯುವಿಯಲ್ಲಿ ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್ ಬ್ರೇಕಿಂಗ್ ರೂಪದಲ್ಲಿ ಹೆಚ್ಚುವರಿ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ, ಇನ್ನು ಲೇನ್ ಕೀಪಿಂಗ್ ಅಸಿಸ್ಟ್, ಹಿಂಭಾಗದ ಬ್ಲೈಂಡ್-ಸ್ಪಾಟ್ ಮತ್ತು ಇನ್ನಿತರ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಈ ಫೀಚರ್ಸ್ ಗಳು ಈ ಹಿಂದೆ ಎಂಟ್ರಿ-ಲೆವೆಲ್ ಎಲ್‌ಎಕ್ಸ್ ಟ್ರಿಮ್‌ನಲ್ಲಿ ಲಭ್ಯವಿರಲಿಲ್ಲ ಆದರೆ 2021ರ ಸೆಲ್ಟೋಸ್‌ನಲ್ಲಿ ನೀಡಲಾಗಿದೆ. ನವೀಕರಿಸಿದ ಸೆಲ್ಟೋಸ್ ಎಸ್‍ಯುವಿಯಲ್ಲಿ ಹೋಂದಾಣಿಕೆ ಮಾಡಬಹುದಾದ ಸ್ಟೀಯರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಏರ್ ಲೆದರ್ ಸೀಟುಗಳು ಮತ್ತು ಪವರ್ ವಿಂಡೋಸ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್ ಬ್ಲ್ಯಾಕ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ. ಇಂಟಿರಿಯರ್ ನಲ್ಲಿ ಯುವಿಒ ಕನೆಕ್ಟಿವಿಟಿ ಹೊಂದಿರುವ 10.25-ಇಂಚಿನ ಇನ್ಫೋಟೈನ್ಮೆಂಟ್ ಡಿಸ್ ಪ್ಲೇ ಅನ್ನು ಕೂಡ ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಅಮೆರಿಕದಲ್ಲಿ 2021ರ ಸೆಲ್ಟೋಸ್ ಎಸ್‍ಯುವಿಯಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.6-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಇದರಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ 146 ಬಿಹೆಚ್‌ಪಿ ಮತ್ತು 179 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಇದರಲ್ಲಿ ನೈಟ್‌ಫಾಲ್ ಎಡಿಷನ್ ನಲ್ಲಿ 1.6-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 175 ಬಿಹೆಚ್‌ಪಿ ಮತ್ತು 264 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಭಾರತದಲ್ಲಿ ಮಾರಾಟವಾಗುತ್ತಿರುವ ಕಿಯಾ ಸೆಲ್ಟೋಸ್‍ ಎಸ್‍ಯುವಿಯಲ್ಲಿ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ಗಳು ಸೇರಿವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಇದರಲ್ಲಿ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್

ಎಲ್ಲಾ ಎಂಜಿನ್‍ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, ಇದರೊಂದಿಗೆ 1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
New Kia Seltos Nightfall Edition Launched. Read In Kannada.
Story first published: Saturday, May 29, 2021, 21:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X