ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಕೂಡ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಇದೀಗ ಅಧಿಕ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮರ್ಸಿಡಿಸ್ ಬೆಂಝ್ ತನ್ನ ಹೊಸ ವಿಷನ್ ಇಕ್ಯೂಎಕ್ಸ್ಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರನ್ನು ಮುಂದಿನ ವರ್ಷದ ಜನವರಿ 3 ರಂದು ಅನಾವರಣವಾಗಲಿದೆ ಎಂದು ಘೋಷಿಸಿದೆ. ಅನಾವರಣವಾಗುವ ಮುನ್ನ ಇದೀಗ ಹೊಸ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ,

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಟೀಸರ್ ಕಾರಿನ ಸಿಲೂಯೆಟ್ ಅನ್ನು ಸ್ವಲ್ಪ ಹೆಚ್ಚು ಬಹಿರಂಗಪಡಿಸುತ್ತದೆ, ಬದಿಯಿಂದ ನಯವಾದ ವಿನ್ಯಾಸದ ಸಾಲುಗಳನ್ನು ಪ್ರದರ್ಶಿಸುತ್ತದೆ. ಹೊಸ ಮರ್ಸಿಡಿಸ್ ಬೆಂಝ್ ವಿಷನ್ ಇಕ್ಯೂಎಕ್ಸ್ಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಏರೋಡೈನಾಮಿಕ್ ವಿನ್ಯಾಸ ಮತ್ತು ರೇಂಜ್ ಅಂಶಗಳೆರಡರಲ್ಲೂ ಇಲ್ಲಿಯವರೆಗಿನ ಬ್ರ್ಯಾಂಡ್‌ನ ಅತ್ಯಂತ ಪರಿಣಾಮಕಾರಿ ಕಾರು ಎಂದು ಮರ್ಸಿಡಿಸ್ ಹೇಳಿಕೊಂಡಿದೆ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಇನ್ನು ಈ ಹೊಸ ಎಲೆಕ್ಟ್ರಿಕ್ ಕಾರು 1,000 ಕಿ.ಮೀ ರೇಂಜ್ ಹೊಂದಿರಲಿದೆ ಎಂದು ಜರ್ಮನ್ ಕಾರು ತಯಾರಕರು ಹೇಳಿಕೊಂಡಿದ್ದಾರೆ. ಹೊಸ ಮರ್ಸಿಡಿಸ್ ಕಾನ್ಸೆಪ್ಟ್ ಮಾದರಿಯು ಹಲವಾರು ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನವನ್ನು ಪರಿಚಯಿಸುತ್ತದೆ, ಅದರಲ್ಲಿ ಹೆಚ್ಚಿನವುಗಳನ್ನು ತನ್ನ ಗ್ರಾಹಕ ಉತ್ಪನ್ನಗಳಲ್ಲಿ ಸಂಯೋಜಿಸಲಾಗುವುದು ಎಂದು ಕಂಪನಿಯು ವಿಶ್ವಾಸ ಹೊಂದಿದೆ

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ನೈಜ ರಸ್ತೆ ಪರಿಸ್ಥಿತಿಗಳಲ್ಲಿ ಸಿಂಗಲ್ ಚಾರ್ಜ್‌ನಲ್ಲಿ 1,000 ಕಿ.ಮೀ ವರೆಗೆ ಚಲಿಸಬಲ್ಲ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಲು ವಾಹನ ತಯಾರಕರು ಬಯಸಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಸಾಮಾನ್ಯ ಹೆದ್ದಾರಿ ವೇಗದಲ್ಲಿ ಪ್ರತಿ 100 ಕಿ.ಮೀಗೆ ಕಿಲೋವ್ಯಾಟ್-ಗಂಟೆಗಳ ಏಕ-ಅಂಕಿಯ ಬಳಕೆಯ ಮೌಲ್ಯವನ್ನು ಸಾಧಿಸುವುದು ಗುರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಮರ್ಸಿಡಿಸ್ ಬೆಂಝ್ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಕಾರು ಒಂದು ಶೋ ಕಾರ್ ಅಲ್ಲ ಎಂದು ಅವರು ಸೇರಿಸಿದರು ಏಕೆಂದರೆ ಇದು ಹೆಚ್ಚು ಆಧುನಿಕ ತಂತ್ರಜ್ಞಾನ ಹೊಂದಿರುವ ಮಾದರಿ ಎಂದು ಹೇಳಿಕೊಂಡಿದೆ. ಮರ್ಸಿಡಿಸ್-ಬೆಂಝ್ ಕಂಪನಿಯು ಈ ಹೊಸ ಮಾದರಿಯ ವಿನ್ಯಾಸ ಮತ್ತು ತಾಂತ್ರಿಕ ವಿಶೇಷಣಗಳಂತಹ ಇತರ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಆದರೂ ಟೀಸರ್ ಚಿತ್ರಗಳು ಇದು ಲೋ-ಇಶ್ ಪ್ರೊಫೈಲ್‌ನೊಂದಿಗೆ ಸೆಡಾನ್ ಆಗಲಿದೆ ಎಂದು ಬಹಿರಂಗಪಡಿಸುತ್ತದೆ. ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಸಹ ಏರೋಡೈನಾಮಿಕ್ ಪರಿಭಾಷೆಯಲ್ಲಿ ಪರಿಣಾಮಕಾರಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಉತ್ಪಾದನಾ ವಾಹನ ವಿಭಾಗದಲ್ಲಿ ಕಡಿಮೆ ಡ್ರ್ಯಾಗ್ ಗುಣಾಂಕವನ್ನು ಹೊಂದಿರುವ EQS ನ 0.20 ಡ್ರ್ಯಾಗ್ ಗುಣಾಂಕವನ್ನು ಮೀರುವುದು ಗುರಿಯಾಗಿದೆ ಎಂದು ಕಂಪನಿ ಹೇಳಿದೆ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ವಾಹನದ ಪ್ರಮುಖ ಅಂಶವೆಂದರೆ ಅದರ ಬ್ಯಾಟರಿ ಪ್ಯಾಕ್ ಆಗಿದ್ದು, ಮರ್ಸಿಡಿಸ್-ಬೆಂಝ್ ಇಕ್ಯೂಎಸ್‌ಗೆ ಹೋಲಿಸಿದರೆ ಸೆಲ್ ಮಟ್ಟದಲ್ಲಿ ಶಕ್ತಿಯ ಸಾಂದ್ರತೆಯನ್ನು ಇನ್ನೂ 20 ಪ್ರತಿಶತದಷ್ಟು ಹೆಚ್ಚಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ಸ್ಕಾಫರ್ ತಿಳಿಸಿದ್ದಾರೆ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಇನ್ನು ಮರ್ಸಿಡಿಸ್ ಬೆಂಝ್ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ. ಇತರ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಇಂಧನ ಚಾಲಿತ ವಾಹನಗಳನ್ನು ಕೈಬಿಟ್ಟು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖಮಾಡುತ್ತಿದ್ದಾರೆ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಮರ್ಸಿಡಿಸ್ ಬೆಂಝ್ ಕಂಪನಿಯು ಇದರೊಂದಿಗೆ ತನ್ನ ಇಕ್ಯೂ ಎಲೆಕ್ಟ್ರಿಕ್ ಕಾರಿನ ಸರಣಿಯನ್ನು ವಿಸ್ತರಿಸುತ್ತಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಮತ್ತು ಇಕ್ಯೂಎಸ್ ನಂತರ ಹೊಸ ಇಕ್ಯೂಇ ಪೋರ್ಟ್ಫೋಲಿಯೊಗೆ ಸೇರುವ ಸಮಯ ಬಂದಿದೆ. ಇದೀಗ ಜರ್ಮನ್ ಕಾರು ತಯಾರಕರು ಇಕ್ಯೂಇ ಕಾರಿನ ಟೀಸರ್ ಇತ್ತೀಚೆಗೆ ಬಿಡುಗಡೆಗೊಳಿಸಿತು. ಸ್ಟೈಲಿಂಗ್ ಅಂಶಗಳ ವಿಷಯದಲ್ಲಿ ಇದು ಹೆಚ್ಚು ಸಿಲೂಯೆಟ್ ಇಕ್ಯೂಎಸ್ ಮಾದರಿಯಂತಿದೆ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಈ ಟೀಸರ್ ಚಿತ್ರವು ಸೂಚಿಸುವಂತೆ ಇದು ನೋಡಲು ಹೆಚ್ಚು ಭಿನ್ನವಾಗಿರುವುದಿಲ್ಲ ಆದರೆ ಒಳಾಂಗಣವು ನಾವು ಇಕ್ಯೂಎಸ್ ನಲ್ಲಿ ನೋಡಿದಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಮುಂಬರುವ 2021ರ ಐಎಎ ಮ್ಯೂನಿಚ್ ಮೋಟಾರ್ ಶೋನಲ್ಲಿ ಫ್ರಾಂಕ್‌ಫರ್ಟ್ ಮೋಟಾರ್ ಶೋ ಬದಲಿಗೆ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಆದರೆ ಅಭಿವೃದ್ಧಿಯು ಕೇವಲ ಇಕ್ಯೂಇಗೆ ಸೀಮಿತವಾಗಿಲ್ಲ. ಮರ್ಸಿಡಿಸ್ ಇಕ್ಯೂಎಸ್ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ಎಎಂಜಿ ಎಡಿಷನ್ ಮತ್ತು ಎಲೆಕ್ಟ್ರಿಕ್ ಮರ್ಸಿಡಿಸ್-ಮೇಬ್ಯಾಕ್ ಎಸ್‍ಯುವಿಯು ಕಾನ್ಸೆಪ್ಟ್ ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ನಂತರ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಸಹ ಸ್ಟ್ಯಾಂಡ್‌ನಲ್ಲಿರುವ ನಿರೀಕ್ಷೆಯಿದೆ, ಮ್ಯೂನಿಚ್ ಮೋಟಾರ್ ಶೋ "ಎಲೆಕ್ಟ್ರಿಫೈಡ್" ಆಗಲಿದೆ ಮತ್ತು ಕೆಲವು ಭವಿಷ್ಯದ ಮಾದರಿಗಳೊಂದಿಗೆ ಭರವಸೆ ನೀಡುತ್ತದೆ. ಟೀಸರ್ ಚಿತ್ರವು ಇಕ್ಯೂಇಯ ಮೂರು ಇನ್-ಡ್ಯಾಶ್ ಡಿಸ್ ಪ್ಲೇಗಳನ್ನು ಒಂದೇ ಗ್ಲಾಸ್ ಪೇನ್ ಅಡಿಯಲ್ಲಿ ಮುಚ್ಚಿರುವುದನ್ನು ತೋರಿಸುತ್ತದೆ,

ಅನಾವರಣವಾಗಲಿದೆ 1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX

ಮರ್ಸಿಡಿಸ್ ಬೆಂಝ್ ತನ್ನ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍ಯುವಿಯಾದ ಇಕ್ಯೂಸಿ(EQC) ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿತು.ಇದೀಗ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಇಕ್ಯೂಸಿ ಎಲೆಕ್ಟ್ರಿಕ್ ಐಷಾರಾಮಿ ಎಸ್‌ಯುವಿಯ ಮುಂದಿನ ಬ್ಯಾಚ್‌ಗಾಗಿ ಬುಕ್ಕಿಂಗ್ ಸ್ವೀಕರಿಸಲು ಆರಂಭಿಸಿದೆ. ಪ್ರಸ್ತುತ, ಎಲೆಕ್ಟ್ರಿಕ್ ಎಸ್‌ಯುವಿಯು ಭಾರತಕ್ಕೆ ಸಂಪೂರ್ಣ ನಿರ್ಮಿತ ಯುನಿಟ್ (ಸಿಬಿಯು) ಮಾದರಿಯಾಗಿ ಬರುತ್ತಿದೆ. ಇನ್ನು ಈ ಹೊಸ ಮರ್ಸಿಡಿಸ್ ಬೆಂಝ್ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಅನಾವರಣಗೊಂಡ ವೇಳೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

Most Read Articles

Kannada
English summary
New mercedes benz vision eqx teased range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X