ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಪೋರ್ಷೆ ಕಂಪನಿಯು ಭಾರತದಲ್ಲಿ ವಿಶಿಷ್ಟವಾದ ಶೋರೂಂ ಅನ್ನು ತೆರೆದಿದೆ. ಕಂಪನಿಯು ದೆಹಲಿಯ ಕೊನಾಟ್ ಪ್ಲೇಸ್‌ನಲ್ಲಿ ಸ್ಟುಡಿಯೋ ಕೆಫೆ ಶೋರೂಂ ಅನ್ನು ಆರಂಭಿಸಿದೆ. ಈ ಶೋರೂಂನಲ್ಲಿ ಗ್ರಾಹಕರು ಕಾರುಗಳನ್ನು ಖರೀದಿಸಬಹುದು ಹಾಗೂ ಕಾರನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಈ ಶೋರೂಂನಲ್ಲಿಯೇ ಅನೇಕ ಕಸ್ಟಮೈಸ್ ಆಯ್ಕೆಗಳು ಲಭ್ಯವಿರುವುದರಿಂದ ಇಲ್ಲಿ ಖರೀದಿಸಿದ ಕಾರುಗಳನ್ನು ಶೋರೂಂನ ಹೊರಗೆ ಕಸ್ಟಮೈಸ್ ಮಾಡುವ ಅಗತ್ಯವಿಲ್ಲವೆಂದು ಪೋರ್ಷೆ ಕಂಪನಿ ಹೇಳಿದೆ. ಶೋರೂಂಗೆ ಬರುವ ಗ್ರಾಹಕರು ತಮ್ಮ ನೆಚ್ಚಿನ ಪೋರ್ಷೆ ಕಾರನ್ನು ಆಯ್ಕೆ ಮಾಡಿಕೊಂಡು ಕಸ್ಟಮೈಸ್ ಮಾಡಬಹುದು. ಗ್ರಾಹಕರು ಆಯ್ಕೆ ಮಾಡಿದ ಕಸ್ಟಮೈಸ್ ಅನ್ವಯ ಕಾರನ್ನು ತಲುಪಿಸಲಾಗುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಗ್ರಾಹಕರಿಗಾಗಿ ಕಾಫಿ ಶಾಪ್ ಪರಿಸರವನ್ನು ರಚಿಸಲಾಗಿದೆ. ಅಲ್ಲಿ ಗ್ರಾಹಕರು ಕಾಫಿ ಕುಡಿಯುತ್ತಾ ಪ್ಯಾಕೇಜ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾರಿನಲ್ಲಿ ಮಾಡಲಾಗುವ ಬದಲಾವಣೆಗಳನ್ನು ತೋರಿಸಲು, ದೊಡ್ಡ ಟಿವಿ ಸ್ಕ್ರೀನ್ ಅಳವಡಿಸಲಾಗಿದೆ. ಈ ಸ್ಕ್ರೀನ್'ನಲ್ಲಿ ಕಾರನ್ನು ಹೊಸ ಉಪಕರಣ ಹಾಗೂ ಕಸ್ಟಮೈಸ್ ಮೂಲಕ ಪ್ರದರ್ಶಿಸಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಈ ಶೋರೂಂನಲ್ಲಿ ಪೋರ್ಷೆ ಕಂಪನಿಯ ಇತಿಹಾಸವನ್ನು ಗ್ರಾಹಕರನ್ನು ಪರಿಚಯಿಸಲು, ಕಂಪನಿಯು ಪೋರ್ಷೆ ಹೆರಿಟೇಜ್ ವಾಲ್ ಅನ್ನು ಸ್ಥಾಪಿಸಿದೆ. ಇದರಲ್ಲಿ ಕಂಪನಿಯ ಐಕಾನಿಕ್ ಕಾರುಗಳನ್ನು ಪ್ರದರ್ಶಿಸಲಾಗುತ್ತದೆ. ವಿಶ್ವಾದ್ಯಂತ ಈ ರೀತಿಯ ಮೂರು ಪೋರ್ಷೆ ಶೋರೂಂಗಳಿವೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ದಕ್ಷಿಣ ಕೊರಿಯಾ, ಮಿಲಾನ್ ಹಾಗೂ ತೈವಾನ್ ನಂತರ ಭಾರತದಲ್ಲಿ ಈ ರೀತಿಯ ಶೋರೂಂ ತೆರೆಯಲಾಗಿದೆ. ಈ ಶೋರೂಂನಲ್ಲಿ, ಕಂಪನಿಯು ಒದಗಿಸಿದ ಕಾರು ಮಾದರಿ ಹಾಗೂ ಬಣ್ಣಗಳ ಆಯ್ಕೆಯ ಪ್ರಕಾರ ಕಾರಿನ ಇಂಟಿರಿಯರ್ ಬಣ್ಣವನ್ನು ಸಹ ಬದಲಿಸಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಕಸ್ಟಮ್ ಅಲಾಯ್ ವ್ಹೀಲ್, ಸೀಟ್ ಕವರ್, ಇಂಟಿರಿಯರ್ ಲೈಟಿಂಗ್, ಸ್ಟೀಯರಿಂಗ್ ವ್ಹೀಲ್ ಸೇರಿದಂತೆ ಕಾರಿನ ಅನೇಕ ಬಿಡಿಭಾಗಗಳು ಈ ಶೋರೂಂನಲ್ಲಿ ಲಭ್ಯವಿರುತ್ತವೆ. ಪೋರ್ಷೆ ಕಂಪನಿಯು ಎಲೆಕ್ಟ್ರಿಕ್ ಕಾರುಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲು ಈ ಶೋರೂಂನಲ್ಲಿ ಎಲೆಕ್ಟ್ರಿಕ್ ಕಾರ್ ಚಾರ್ಜರ್ ಅನ್ನು ಸ್ಥಾಪಿಸಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಟೈಕಾನ್‌ನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ. ಪೋರ್ಷೆ ಕಂಪನಿಯು ತನ್ನ 718 ಸ್ಪೈಡರ್ ಹಾಗೂ ಕೇಮನ್ ಜಿಟಿ 4 ಕಾರುಗಳನ್ನು 2020ರ ಸೆಪ್ಟೆಂಬರ್'ನಲ್ಲಿ ಬಿಡುಗಡೆಗೊಳಿಸಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಪೋರ್ಷೆ 718 ಸ್ಪೈಡರ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.59 ಕೋಟಿಗಳಾದರೆ, ಕೇಮನ್ ಜಿಟಿ 4 ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.63 ಕೋಟಿಗಳಾಗಿದೆ. ಹಗುರ ತೂಕದ ಕನ್ವರ್ಟಿಬಲ್ ಕಾರ್ ಆದ ಪೋರ್ಷೆ 718 ಸ್ಪೈಡರ್ ಅನ್ನು ರೂಫ್ ಬಟನ್ ಪ್ರೆಸ್ ಮಾಡುವ ಮೂಲಕ ಮುಚ್ಚಬಹುದು.

ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ

ಕಂಪನಿಯು ತನ್ನ ಹೊಸ ಪೋರ್ಷೆ ಪನಾಮೆರಾ ಟರ್ಬೊ ಎಸ್ ಇ-ಹೈಬ್ರಿಡ್ ಕಾರ್ ಅನ್ನು ಅನಾವರಣಗೊಳಿಸಿದೆ. ಕಂಪನಿಯು ಈ ಕಾರನ್ನು ಭಾರತದಲ್ಲಿ ಮೂರು ಬಾಡಿ ಸ್ಟೈಲ್‌ಗಳಲ್ಲಿ ಮಾರಾಟ ಮಾಡಲಿದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.44 ಕೋಟಿಗಳಾಗಿದೆ.

Most Read Articles

Kannada
English summary
Porsche company opens India's first Studio Cafe showroom in Delhi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X