ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಪೋರ್ಷೆ ತನ್ನ ಜನಪ್ರಿಯ ಎಂಟ್ರಿ ಲೆವಲ್ ಸ್ಪೋರ್ಟ್ ಎಸ್‌ಯುವಿ ಮಾದರಿಯಾದ ಮಕಾನ್ ಫೇಸ್‌ಲಿಫ್ಟ್ ಬಿಡುಗಡೆಗೊಳಿಸಿದ್ದು, ಹೊಸ ಕಾರು ಈ ಬಾರಿ ಸುಧಾರಿತ ಎಂಜಿನ್ ಮತ್ತು ನವೀಕೃತ ಸ್ಪೋರ್ಟಿ ವಿನ್ಯಾಸದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಗ್ರಾಹಕರ ಬೇಡಿಕೆ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಮಕಾನ್, ಮಕಾನ್ ಎಸ್ ಮತ್ತು ಮಕಾನ್ ಜಿಟಿಎಸ್ ಎಂಬ ಮೂರು ರೂಪಾಂತರಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 83.21 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಪೋರ್ಷೆ ಕಂಪನಿಯು ಸದ್ಯ ಆರಂಭಿಕ ಮಾದರಿಯಾದ ಸ್ಟ್ಯಾಂಡರ್ಡ್ ಮಕಾನ್ ಬೆಲೆ ಮಾಹಿತಿ ಮಾತ್ರ ಹಂಚಿಕೊಳ್ಳುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಕಾರು 2022ರ ಜನವರಿ ಮಧ್ಯಂತರದಲ್ಲಿ ಗ್ರಾಹಕರ ಕೈಸೇರಲಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಪ್ರಸ್ತುತ ಮಾದರಿಗಿಂತಲೂ ಹೊಸ ಆವೃತ್ತಿಯ ಕೆಲವು ಬದಲಾವಣೆಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಸುಮಾರು ರೂ. 14 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ನವೀಕೃತ ವಿನ್ಯಾಸಗಳು ಮತ್ತು ಸುಧಾರಿತ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಹೊಸ ಕಾರು ಹಳೆದ ಮಾದರಿಗಿಂತ ಸಾಕಷ್ಟು ದುಬಾರಿಯಾಗಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಎಂಟ್ರಿ-ಲೆವೆಲ್ ಮಕಾನ್ ಎಸ್‍ಯುವಿಯಲ್ಲಿ ಈ ಹಿಂದಿನ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಇದು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸಹಾಯದೊಂದಿಗೆ 265 ಬಿಹೆಚ್‍ಪಿ ಉತ್ಪಾದಿಸುತ್ತದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಮಧ್ಯಂತರ ಆವೃತ್ತಿಯಾದ ಮಕಾನ್ ಎಸ್ ರೂಪಾಂತರದಲ್ಲಿ ಪೋರ್ಷೆ ಕಂಪನಿಯು ಈ ಹಿಂದಿನ 3.0-ಲೀಟರ್ ವಿ6 ಎಂಜಿನ್ ಅನ್ನು ಬದಲಾಯಿಸಿ ಹೊಸ ತಂತ್ರಜ್ಞಾನ ಪ್ರೇರಿತ 2.9-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಇದು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸಹಾಯದೊಂದಿಗೆ 380 ಬಿಎಚ್‌ಪಿ(ಹಿಂದಿನ ಮಾದರಿಗಿಂತ 26 ಬಿಎಚ್‌ಪಿ ಹೆಚ್ಚು) ಉತ್ಪಾದಿಸಲಿದ್ದು, ಹೈ ಎಂಡ್ ಮಾದರಿಯಾದ ಜಿಟಿಎಸ್ ಮಾದರಿಯು 440 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ನವೀಕೃತ ಆವೃತ್ತಿಯಲ್ಲಿ ಕಂಪನಿಯ ಈ ಬಾರಿ ಸ್ಟ್ಯಾಂಡರ್ಡ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, ಆರಂಭಿಕ ಮಾದರಿಯು 6.2 ಸೆಕೆಂಡುಗಳಲ್ಲಿ ಸೊನ್ನೆಯಿಂದ ಪ್ರತಿಗಂಟೆಗೆ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದರೆ ಪರ್ಫಾಮೆನ್ಸ್ ಆವೃತ್ತಿಯಾಗಿರುವ ಜಿಟಿಎಸ್ ಮಾದರಿಯು ಕೇವಲ 4.3 ಸೆಕೆಂಡುಗಳಲ್ಲಿ ಸೊನ್ನೆಯಿಂದ ಪ್ರತಿ ಗಂಟೆಗೆ 100 ಕಿ.ಮೀ ವೇಗ ಪಡೆದುಕೊಳ್ಳುವ ಬಲಶಾಲಿ ಕಾರು ಆವೃತ್ತಿಯಾಗಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಇದರೊಂದಿಗೆ ಹೊಸ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಕೆಲವು ಸೂಕ್ಷ್ಮವಾದ ಸ್ಟೈಲಿಂಗ್ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದರಲ್ಲಿ ನವೀಕರಿಸಿದ ಮುಂಭಾಗದ ಗ್ರಿಲ್, ನವೀಕೃತ ಹಿಂಭಾಗದ ಡಿಫ್ಯೂಸರ್, ಹೊಸ ಸ್ಟ್ಯಾಂಡರ್ಡ್-ಫಿಟ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ವಿವಿಧ ರೂಪಾಂತರಗಳಿಗಳಿಗೆ ಅನುಗುಣವಾಗಿ 19ರಿಂದ 21 ಇಂಚುಗಳ ದೊಡ್ಡದಾದ ವ್ಹೀಲ್ ಗಳನ್ನು ಪಡೆದುಕೊಂಡಿವೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಟಾಪ್ ಎಂಡ್ ಜಿಟಿಎಸ್ ರೂಪಾಂತರವು ಪೋರ್ಷೆ ಕಂಪನಿಯ ಸಾಂಪ್ರದಾಯಿಕ ಬ್ಲ್ಯಾಕ್ ಟ್ರಿಮ್ ಅಂಶಗಳ ಜೊತೆಗೆ ಬೆಸ್ಪೋಕ್ ರಿಯರ್ ಡಿಫ್ಯೂಸರ್ ಅನ್ನು ಹೊಂದಿದ್ದು, ಹೊಸ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಇಂಟಿರಿಯರ್ ಕೂಡಾ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಸ್ಪೋರ್ಟ್ ಎಸ್‍ಯುವಿಯಲ್ಲಿ ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಮತ್ತು ಕಂಟ್ರೋಲ್ ಸ್ಟ್ಯಾಕ್ ಮಕಾನ್ ಅನ್ನು ಅದರ ದೊಡ್ಡ ಮಾದರಿಗಳಾದ ಕಯೆನ್ ಮತ್ತು ಹೊಸ ಪನಾಮೆರಾ ಫಾಸ್ಟ್‌ಬ್ಯಾಕ್‌ಗೆ ಅನುಗುಣವಾಗಿ ಹೊಸ ಮಾದರಿಯಲ್ಲಿ ಪರಿಚಯಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಫೇಸ್‌ಲಿಫ್ಟ್ ಮಾದರಿಯ ಗೇರ್ ಸೆಲೆಕ್ಟರ್‌ನ ಎರಡೂ ಬದಿಗಳಲ್ಲೂ ಸೆಂಟ್ರಲ್ ಕನ್ಸೋಲ್‌ನಲ್ಲಿ ಫಿಸಿಕಲ್ ಬಟನ್ ಗಳು ಮತ್ತು ಸ್ವಿಚ್‌ಗಳನ್ನು ತೆಗೆದುಹಾಕಿರುವುದು ಅತ್ಯಂತ ಸ್ಪಷ್ಟವಾದ ಬದಲಾವಣೆಯಾಗಿದ್ದು, ಇದರ ಸಾಂಪ್ರದಾಯಿಕ ಹ್ಯಾಪ್ಟಿಕ್ ಐಕಾನ್‌ಗಳೊಂದಿಗೆ ಬದಲಾಯಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಎಸ್‍ಯುವಿಯಲ್ಲಿ ಕಂಪನಿಯು 10.9-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇಯನ್ನು ಈ ಹಿಂದಿನ ಮಾದರಿಯಂತೆ ಮುಂದುವರಿಸಿದ್ದು, ಯಾವುದೇ ದೊಡ್ಡ ನವೀಕರಣಗಳನ್ನು ಪಡೆದುಕೊಂದಿಲ್ಲ. ಆದರೆ ಪೋರ್ಷೆ ಕಂಪನಿಯು ಇನ್ಫೋಟೈನ್‌ಮೆಂಟ್ ಸಾಫ್ಟ್‌ವೇರ್‌ನಲ್ಲಿ ಕೆಲವು ಅಪ್‌ಗ್ರೇಡ್ ಮಾಡಲಾಗಿದ್ದು, ಆರಾಮದಾಯಕ ಪ್ರಯಾಣದೊಂದಿಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ದುಬಾರಿ ಬೆಲೆಯೊಂದಿಗೆ ಭಾರತದಲ್ಲಿ ನವೀಕೃತ ಪೋರ್ಷೆ ಮಕಾನ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಕಾರು ಈ ಬಾರಿ ವಿವಿಧ ರೂಪಾಂತರಗಳಿಗೆ ಅನುಗುಣವಾಗಿ 14 ಬಣ್ಣಗಳ ಆಯ್ಕೆ ನೀಡಲಾಗಿದ್ದು, ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿನ ಐಷಾರಾಮಿ ಕಾರು ವಿಭಾಗದಲ್ಲಿನ ರೇಂಜ್ ರೋವಲ್ ವೆಲಾರ್, ಬಿಎಂಡಬ್ಲ್ಯು ಎಕ್ಸ್4 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Porsche macan facelift launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X