ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಜೆಕ್ ಆಟೋ ಕಂಪನಿ ಸ್ಕೋಡಾ ಆಟೋ ಭಾರತದಲ್ಲಿ ಕಾರು ಮಾರಾಟ ಆರಂಭಿಸಿ ಯಶಸ್ವಿ 20 ವರ್ಷ ಪೂರೈಸಿದ್ದು, ಭಾರತದಲ್ಲಿ ಕಾರು ಮಾರಾಟ ಆರಂಭಿಸಿ 20 ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಕಂಪನಿಯು ವಿಶೇಷ ಅಭಿಯಾನದೊಂದಿಗೆ ಸಂಭ್ರಮಾಚರಣೆ ಕೈಗೊಂಡಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಸ್ಕೋಡಾ ಕಂಪನಿಯು ಭಾರತದಲ್ಲಿ ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟ ಆರಂಭಿಸಿದ ನಂತರ ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಯಶಸ್ವಿ 20 ವರ್ಷಗಳ ಪ್ರಯಣವನ್ನು ವಿಶೇಷವಾಗಿ ಆಚರಿಸುವುದಕ್ಕಾಗಿ ಬೃಹತ್ ಗಾತ್ರದ 3ಡಿ ಪ್ರೊಜೆಕ್ಷನ್ ವಿಡಿಯೋ ಒಂದನ್ನು ವಿಶ್ವದ ಎತ್ತರ ರಸ್ತೆ ಮಾರ್ಗವಾಗ ರೋಹ್ಟಾಂಗ್ ಪಾಸ್‌ನಲ್ಲಿ ಪ್ರದರ್ಶನಗೊಳಿಸಿ ಗಮನಸೆಳೆಯಿತು.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಭಾರತದಲ್ಲಿ ಇದುವರೆಗೆ ನಿರ್ಮಾಣ ಮಾಡಲಾಗಿದ್ದ ಅತ್ಯಧಿಕ ಎತ್ತರದ 3ಡಿ ಪ್ರೊಜೆಕ್ಷನ್‌ಗಳಲ್ಲಿ ಸ್ಕೋಡಾ ನಿರ್ಮಾಣದ 3ಡಿ ಪರದೆಯೇ ಅತಿ ಎತ್ತರ ಎನ್ನಲಾಗಿದ್ದು, ಸಮುದ್ರ ಮಟ್ಟದಿಂದ 10,942 ಅಡಿ ಎತ್ತರದಲ್ಲಿರುವ ರೋಹ್ಟಾಂಗ್ ಪಾಸ್‌ನಲ್ಲಿ ಸ್ಕೋಡಾ ವಿಶೇಷ ವಿಡಿಯೋ ಒಂದನ್ನು 3ಡಿ ಪ್ರೊಜೆಕ್ಷನ್ ಮೂಲಕ ಅನಾವರಣಗೊಳಿಸಲಾಯ್ತು.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಅಸಾಧ್ಯವಾದದನ್ನು ಜಯಿಸು(Conquering the Unconquerable) ಅಭಿಯಾನದೊಂದಿಗೆ 3ಡಿ ಪ್ರೊಜೆಕ್ಷನ್ ಮೂಲಕ ವಿಶೇಷ ವಿಡಿಯೋವನ್ನು ಪ್ರಸಾರ ಮಾಡಿದ ಸ್ಕೋಡಾ ಕಂಪನಿಯು ಹೊಸ ದಾಖಲೆಗೆ ಕಾರಣವಾಯಿತು.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಸ್ಕೋಡಾ ಕಂಪನಿಯು ರೋಹ್ಟಾಂಗ್ ಪಾಸ್‌ನಲ್ಲಿ 3ಡಿ ಪ್ರೊಜೆಕ್ಷನ್ ನಿರ್ಮಾಣಕ್ಕಾಗಿ ಬರೋಬ್ಬರಿ 3 ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದು, 156 ಜನರ ತಂಡವು ಬೃಹತ್ ಗಾತ್ರದ ಬರೋಬ್ಬರಿ 12 ಪ್ರೊಜೆಕ್ಟರ್‌ಗಳ ಬಳಸಿ ಈ ವಿಡಿಯೋ ಸಿದ್ದಪಡಿಸಿತ್ತು. ರೋಹ್ಟಾಂಗ್ ಪಾಸ್‌‌ನಲ್ಲಿ ದೊಡ್ಡದಾದ ಕಣಿವೆಗೆ ಹೊಂದಿಕೊಳ್ಳುವಂತೆ ವಿಡಿಯೋ ನಿರ್ಮಾಣ ಮಾಡಿರುವುದೇ ಇದರ ಪ್ರಮುಖ ತಾಂತ್ರಿಕ ಅಂಶವಾಗಿದ್ದು, ಆರು ದಿನಗಳ ಸತತ ಪ್ರಯತ್ನದ ನಂತರ ರೋಹ್ಟಾಂಗ್ ಪಾಸ್‌ನಲ್ಲಿ 20 ವರ್ಷಗಳ ಸಾಧನೆಯ ಹಾದಿಯ ವಿಡಿಯೋ ಪ್ರಸಾರಗೊಳಿಸಲಾಯ್ತು.

ಇನ್ನು ಸ್ಕೋಡಾ ಕಂಪನಿಯು 2002ರಿಂದ ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ನಂತರ ಹಲವಾರು ಏರಿಳಿತಗಳೊಂದಿಗೆ ಕಾರು ಉತ್ಪಾದನೆಯಲ್ಲಿ ಇಂದು ಉತ್ತಮ ಸ್ಥಾನ ಕಾಯ್ದುಕೊಂಡಿದ್ದು, ಕಂಪನಿಯು ಪ್ರೀಮಿಯಂ ಕಾರು ಮಾರಾಟದಲ್ಲಿ ತನ್ನದೆ ಆದ ಗ್ರಾಹಕರ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ಸದ್ಯ 2.0 ಯೋಜನೆ ಅಡಿಯಲ್ಲಿ ರೀಬ್ಯಾಡ್ಜಿಂಗ್ ಮೂಲಕ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದ್ದು, ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಕಾರು ಮಾರಾಟ ಮಳಿಗೆಗಳ ವಿಸ್ತರಣೆ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಭಾರತದ ಪ್ರಮುಖ ಮಾಹಾನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿರುವ ಸ್ಕೋಡಾ ಕಂಪನಿಯು 2021ರ ಅಂತ್ಯಕ್ಕೆ ಹೊಸದಾಗಿ 30 ಶೋರೂಂಗಳ ಮೂಲಕ 150 ಶೋರೂಂ ಗುರಿತಲುಪುವ ಸಿದ್ದತೆಯಲ್ಲಿದ್ದು, ಹೊಸ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿರುವುದರಿಂದ 2022ರ ವೇಳೆಗೆ ಒಟ್ಟು 225 ಮಾರಾಟ ಮಳಿಗೆಗಳೊಂದಿಗೆ 100 ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯ ತೆರೆಯುವ ಭರವಸೆ ನೀಡಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಹೊಸ ಮಾರಾಟ ಮಳಿಗೆಗಳೊಂದಿಗೆ ಮಾರಾಟ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳನ್ನು ಗಟ್ಟಿಗೊಳಿಸುವ ಗುರಿಹೊಂದಿರುವುದಾಗಿ ಹೇಳಿಕೊಂಡಿರುವ ಸ್ಕೋಡಾ ಕಂಪನಿಯು ಹೊಸ ಮಾರಾಟ ಮಳಿಗೆಗಳನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸುತ್ತಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಹೊಸ ಯೋಜನೆಗೆ ಪೂರಕವಾಗಿ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಬ್ರಾಂಡ್ ಅನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರು ಮಾರಾಟ ಮಳಿಗೆಗಳ ಉನ್ನತೀಕರಣ ಮತ್ತು ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸಲಾಗುತ್ತಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ.120 ಕೋಟಿಗೂ ಅಧಿಕ ಖರ್ಚು ಮಾಡಲಾಗುತ್ತಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಕಾರು ಮಾರಾಟ ಶೋರೂಂಗಳ ನವೀಕರಣವು ಭಾರತದಲ್ಲಿ ಇದುವರೆಗೂ ಮಾಡಲಾದ ಅತಿ ದೊಡ್ಡ ನವೀಕರಣವಾಗಿದ್ದು, ಸ್ಕೋಡಾ ಕಂಪನಿಯು ತನ್ನ ಹೊಸ ಕಾರ್ಪೋರೆಟ್ ಐಡೆಂಟಿಟಿ ಹಾಗೂ ಡಿಸೈನ್ (ಸಿ‍ಐ‍‍ಸಿ‍‍ಡಿ) ಅನುಸಾರ ತನ್ನ ಶೋರೂಂಗಳನ್ನು ನವೀಕರಿಸುತ್ತಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಸ್ಕೋಡಾ ಕಂಪನಿಯು ಸದ್ಯ ರ‍್ಯಾಪಿಡ್ ಸೆಡಾನ್, ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ, ಸೂಪರ್ಬ್ ಸೆಡಾನ್, ಆಕ್ಟಿವಿಯಾ ಸೆಡಾನ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳಷ್ಟೇ ಬಿಡುಗಡೆ ಮಾಡಿರುವ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಆರಂಭದಲ್ಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಿರುವ ಕುಶಾಕ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಕುಶಾಕ್ ಕಾರು ಮಾದರಿಯು ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆ ಸೇಫ್ಟಿ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಭಾರತದಲ್ಲಿ ಯಶಸ್ವಿ 20 ವರ್ಷಗಳ ಕಾರು ಮಾರಾಟ ಸಂಭ್ರಮದಲ್ಲಿ ಸ್ಕೋಡಾ

ಇದರ ಜೊತೆಗೆ ಸ್ಕೋಡಾ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕುಶಾಕ್ ಕಾರು ಮಾದರಿಯ ಮೂಲಕ ಗ್ರಾಹಕರ ಆಯ್ಕೆಯನ್ನೇ ಬದಲಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಕಂಪನಿಯು ಸಿ ಸೆಗ್ಮೆಂಟ್ ಸೆಡಾನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಸ್ಥಗಿತಗೊಳಿಸಿ ರ‍್ಯಾಪಿಡ್‌ಗಿಂತಲೂ ಉತ್ತಮ ವಿನ್ಯಾಸದ ಸ್ಲಾವಿಯಾ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda celebrates 20 years in india creating a 3d projection details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X