ಭಾರತದಲ್ಲಿ Rapid Matte Edition ಬಿಡುಗಡೆ ಮಾಡಿದ Skoda India

ಸ್ಕೋಡಾ ಇಂಡಿಯಾ(Skoda India) ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಮಾದರಿಯಾದ ರ‍್ಯಾಪಿಡ್ ಮಾದರಿಯಲ್ಲಿ ರ‍್ಯಾಪಿಡ್ ಮ್ಯಾಟೆ ಎಡಿಷನ್(Rapid Matte Edition) ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ರ‍್ಯಾಪಿಡ್ ಮ್ಯಾಟೆ ಎಡಿಷನ್ ಮಾದರಿಯನ್ನು ಮೊದಲ ಬಾರಿಗೆ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಸ್ಕೋಡಾ ಇಂಡಿಯಾ ಕಂಪನಿಯು ಇದೀಗ ಹೊಸ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರದೆ ಎನ್ನಲಾಗಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಸ್ಕೋಡಾ ಕಂಪನಿಯು ರ‍್ಯಾಪಿಡ್ ಮ್ಯಾಟೆ ಎಡಿಷನ್ ಕಾರಿನಲ್ಲಿ ಕೇವಲ 400 ಯನಿಟ್ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು 400 ಯುನಿಟ್ ಮಾರಾಟದ ನಂತರ ಸ್ಥಗಿತಗೊಳ್ಳಲಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಹೊಸ ರ‍್ಯಾಪಿಡ್ ಮ್ಯಾಟೆ ಎಡಿಷನ್ ಸ್ಥಗಿತದ ನಂತರ ಸ್ಟ್ಯಾಂಡರ್ಡ್ ರ‍್ಯಾಪಿಡ್ ಮಾದರಿಯ ಮಾರಾಟವು ಮುಂದುವರಿಯಲಿದ್ದು, ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್‌ಗಳನ್ನು ಹೊಂದಿರುವ ಹೊಸ ಮ್ಯಾಟೆ ಎಡಿಷನ್‌ನಲ್ಲಿ ಹೆಚ್ಚುವರಿಯಾಗಿ ಕಾರ್ಬನ್ ಸ್ಟೀಲ್ ಮ್ಯಾಟೆ ಶೇಡ್ ಬಣ್ಣದ ಆಯ್ಕೆ ನೀಡಲಾಗಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಕಾರಿನ ಹೊರಮೈ ಜೊತೆಗೆ ಫ್ರಂಟ್ ಗ್ರಿಲ್, ಲಿಪ್ ಸ್ಪಾಯ್ಲರ್, ಬಾಡಿ ಮೊಲ್ಡಿಂಗ್, ರಿಯರ್ ಡಿಫ್ಯೂಸರ್, ಟೈಲ್‌ಗೇಟ್ ಸ್ಪಾಯ್ಲರ್, ಟ್ರಕ್ ಲಿಪ್ ಗಾರ್ನಿಶ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ನೀಡಲಾಗಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಹೊಸ ರ‍್ಯಾಪಿಡ್ ಮ್ಯಾಟೆ ಎಡಿಷನ್ ಮಾದರಿಯಲ್ಲಿ ಸ್ಕೋಡಾ ಕಂಪನಿಯು ಟೆಲ್ಲರ್ ಗ್ರೇ ಮತ್ತು ಬ್ಲ್ಯಾಕ್ ಬಣ್ಣದ ಡ್ಯುಯಲ್ ಟೋನ್ ಇಂಟಿರಿಯಲ್ ಬಣ್ಣದ ಆಯ್ಕೆ ನೀಡಿದ್ದು, ಲೆದರ್ ಆಸನಗಳಲ್ಲಿ ಆಕ್ಲಾಂಟರ್ ಇನ್ಸರ್ಟರ್ ನೀಡಲಾಗಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಇದರ ಜೊತೆಗೆ ಸ್ಪೆಷಲ್ ಎಡಿಷನ್ ಮಾದರಿಗಾಗಿ ಕಂಪನಿಯು ಹೈ ಪರ್ಫಾಮೆನ್ಸ್ ಹೊಂದಿರುವ ಹೆಡ್‌ಲ್ಯಾಂಪ್ಸ್ ಜೋಡಣೆ ಮಾಡಿದ್ದು, ಇನ್ನುಳಿದಂತೆ ಎಲ್ಲಾ ತಾಂತ್ರಿಕ ಸೌಲಭ್ಯಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಜೋಡಣೆಯಾಗಲಿರಲಿವೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಹೊಸ ಸ್ಪೆಷನ್ ಎಡಿಷನ್ ಮಾದರಿಯು ಸ್ಟೈಲ್ ಮತ್ತು ಮಾಂಟೆ ಕಾರ್ಲೊ ಮಾದರಿಗಳ ನಡುವಿನ ಸ್ಥಾನದಲ್ಲಿ ಇರಿಸಲಾಗಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 20 ಸಾವಿರದಿಂದ ರೂ.30 ಸಾವಿರದಷ್ಟು ದುಬಾರಿಯಾಗಿರಲಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ರ‍್ಯಾಪಿಡ್ ಮ್ಯಾಟೆ ಎಡಿಷನ್ ಮಾದರಿಯು ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 13.49 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಹೊಸ ಕಾರು 1.0-ಲೀಟರ್(999 ಸಿಸಿ) ಟಿಎಸ್ಐ ಟರ್ಬೋ ಪೆಟ್ರೋಲ್ ಆಯ್ಕೆ ಹೊಂದಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು ಗರಿಷ್ಠ 18.97ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು 16.24 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಹೊಸ ರ‍್ಯಾಪಿಡ್ ಕಾರಿನಲ್ಲಿ ಎಂಜಿನ್ ಬದಲಾವಣೆ ಹೊರತುಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನ ಮಾದರಿಯೆಂತೆ ಮುಂದುವರಿಸಲಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಕಫ್ ಪ್ಲೇಟ್, ಫ್ಲ್ಯಾಟ್ ಬಾಟಮ್ ಸ್ಟ್ರೀರಿಂಗ್ ವೀಲ್ಹ್, ಎಲ್‌ಇಡಿ ಲೈಟ್‌ಗಳು, ಲೆದರ್ ಸೀಟ್‌ಗಳು ಪ್ರಮುಖ ಆಕರ್ಷಣೆಯಾಗಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಹಾಗೆಯೇ ಪ್ರಯಾಣಿಕ ಸುರಕ್ಷತೆಗಾಗಿ ಕ್ರೂಸ್ ಕಂಟ್ರೋಲ್, 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ವ್ಯೂ ಕ್ಯಾಮೆರಾ ಮತ್ತು ಸೆನ್ಸಾರ್, ಬ್ರೇಕ್ ಅಸಿಸ್ಟ್ ಮತ್ತು 16-ಇಂಚಿನ ಅಲಾಯ್ ವೀಲ್ಹ್‌ನೊಂದಿಗೆ ಪ್ರಮುಖ ಆರು ಬಣ್ಣಗಳ ಆಯ್ಕೆ ಹೊಂದಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ಹೊಸ ರ‍್ಯಾಪಿಡ್ ಕಾರು ಹೊಸ ಆವೃತ್ತಿಯೊಂದಿಗೆ ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೊ ಆವೃತ್ತಿಗಳ ಮಾರಾಟವನ್ನು ಹೊಂದಿದ್ದು, ಪ್ರತಿ ಮಾದರಿಯಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ನೀಡಲಾಗಿದೆ.

ಭಾರತದಲ್ಲಿ ತನ್ನ ಜನಪ್ರಿಯ ಸೆಡಾನ್ Rapid Matte Edition ಬಿಡುಗಡೆ ಮಾಡಿದ Skoda India

ರ‍್ಯಾಪಿಡ್ ಸ್ಟ್ಯಾಂಡರ್ಡ್ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.19 ಲಕ್ಷದಿಂದ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯ ರೂ. 13.29 ಲಕ್ಷ ಬೆಲೆ ಹೊಂದಿದ್ದು, ಕಂಪನಿಯು ಹೊಸ ಮಾದರಿಯ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ

Most Read Articles

Kannada
Read more on ಸ್ಕೋಡಾ skoda
English summary
Skoda rapid matte edition launched in india at rs 11 99 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X