ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಟಿಯಾಗೋ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಹೊಸ ಕಾರಿನಲ್ಲಿ ಕಳೆದ ವರ್ಷದ ಮಧ್ಯಂತರ ಪರಿಚಯಿಸಲಾಗಿದ್ದ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ತೆಗೆದುಹಾಕಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರುಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಸಣ್ಣಪುಟ್ಟ ಬದಲಾವಣೆ ಪರಿಚಯಿಸುತ್ತಲೇ ಇರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಟಿಯಾಗೋ ಮಾದರಿಯಲ್ಲಿ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆಯನ್ನು ತೆಗೆದುಹಾಕಿದೆ. ಹೊಸ ಬಣ್ಣದ ಆಯ್ಕೆಗೆ ಗ್ರಾಹಕರ ಬೇಡಿಕೆಯಿಲ್ಲದ ಕಾರಣಕ್ಕೆ ವಿಕ್ಟೋರಿ ಯಲ್ಲೊ ಬಣ್ಣವನ್ನು ತೆಗೆದುಹಾಕಲಾಗಿದ್ದು, ಇನ್ನುಳಿದ ಸ್ಟ್ಯಾಂಡರ್ಡ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಟಿಯಾಗೋ ಮಾದರಿಯು ಸದ್ಯ ಫ್ಲೇಮ್ ರೆಡ್, ಅರಿಜೋನಾ ಬ್ಲ್ಯೂ, ವೈಟ್, ಡೆಟೋನಾ ಗ್ರೇ ಮತ್ತು ಪ್ಯೂರ್ ಸಿಲ್ವರ್ ಬಣ್ಣಗಳ ಆಯ್ಕೆ ಹೊಂದಿದ್ದು, ಇತ್ತೀಚೆಗೆ ಬಿಡುಗಡೆಗೊಂಡಿರುವ ಅರಿಜೋನಾ ಬ್ಲ್ಯೂ ಬಣ್ಣದ ಆಯ್ಕೆಯು ಟಿಯಾಗೋ ಮಾದರಿಯಲ್ಲಿ ಫ್ಲೇಮ್ ರೆಡ್ ನಂತರ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೊಸ ಟಿಯಾಗೋ ಕಾರು ಎಂಟ್ರಿ ಲೆವೆಲ್ ಮಾದರಿಗಳಲ್ಲೇ ಅತಿಹೆಚ್ಚು ಸುರಕ್ಷಾ ಫೀಚರ್ಸ್‌ಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ಗೆ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಳ್ಳುವ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೊಸ ಕಾರಿಗೆ ನೀರಿಕ್ಷೆಗೂ ಮೀರಿ ಬೇಡಿಕೆ ಹರಿದುಬರುತ್ತಿರುವ ಕಾರಣಕ್ಕೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಯಲ್ಲೊ ಬಣ್ಣದ ಆಯ್ಕೆ ತೆಗೆದುಹಾಕುವುದಕ್ಕಾಗಿಯೇ ಅರಿಜೋನಾ ಬ್ಲ್ಯೂ ಬಣ್ಣದ ಆಯ್ಕೆ ಪರಿಚಯಿಸಲಾಗಿತ್ತು. ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.86 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.85 ಲಕ್ಷ ಬೆಲೆ ಹೊಂದಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿರುವ ಹೊಸ ಕಾರಿನಲ್ಲಿ ಗ್ರಾಹಕರು ತಮ್ಮ ಬೇಡಿಕೆಯೆಂತೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಸ್ಪೆಷಲ್ ಎಡಿಷನ್ ಕೂಡಾ ಖರೀದಿಗೆ ಲಭ್ಯವಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೊಸ ಆವೃತ್ತಿಯ ಮೂಲಕ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸೆಳೆಯಲು ಮುಂದಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಹ್ಯುಂಡೈ ಸ್ಯಾಂಟ್ರೋ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ವ್ಯಾಗನ್ಆರ್ ಜೊತೆಗೆ ದಟ್ಸನ್ ಗೊ ಕಾರುಗಳಿಗೆ ಇದು ಮತ್ತಷ್ಟು ಪೈಪೋಟಿ ನೀಡುತ್ತಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಖರೀದಿದಾರರನ್ನು ಸೆಳೆಯಲು ಲಿಮಿಟೆಡ್ ಎಡಿಷನ್ ಮೂಲಕ ಎಕ್ಸ್‌ಟಿ ಮಾದರಿಯಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.79 ಲಕ್ಷ ಬೆಲೆ ಹೊಂದಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಲಿಮಿಟೆಡ್ ಎಡಿಷನ್ ಮಾದರಿಯು ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಮಾದರಿಗಳ ನಡುವಿನ ಸ್ಥಾನ ಪಡೆದುಕೊಂಡಿದ್ದು, ಎಕ್ಸ್‌ಟಿ ಮಾದರಿಗಿಂತಲೂ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ. ಲಿಮಿಟೆಡ್ ಎಡಿಷನ್‌ ಟಿಯಾಗೋ ಕಾರಿನಲ್ಲಿ ಟಾಟಾ ಕಂಪನಿಯು 14-ಇಂಚಿನ ಹೊಸ ವಿನ್ಯಾಸದ ಅಲಾಯ್ ವೀಲ್ಹ್ ನೀಡಿದೆ.

ಟಿಯಾಗೋ ಕಾರಿನ ವಿಕ್ಟೋರಿ ಯಲ್ಲೊ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹಾಗೆಯೇ ಹೊಸ ಕಾರಿನಲ್ಲಿ ವಾಯ್ಸ್ ಕಮಾಂಡ್ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ನ್ಯಾವಿಷನ್ ಹೊಂದಿದ್ದು, ಹೆಚ್ಚುವರಿ ಫೀಚರ್ಸ್‌ಗಳಿಂದಾಗಿ ಲಿಮಿಟೆಡ್ ಎಡಿಷನ್ ಮಾದರಿಯು ಎಕ್ಸ್‌ಟಿ ಆವೃತ್ತಿಗಿಂತಲೂ ರೂ. 29 ಸಾವಿರ ದುಬಾರಿಯಾಗಿದ್ದರೆ ಎಕ್ಸ್‌ಜೆಡ್ ಆವೃತ್ತಿಗಿಂತಲೂ ರೂ. 16 ಸಾವಿರ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Tata Tiago Victory Yellow Discontinued. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X