ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ ಮೋಟಾರ್ಸ್

ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿರುವ ಟಿಯಾಗೋ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಇದೀಗ ಟಿಯಾಗೋ ಹೊಸ ಕಾರಿನಲ್ಲಿ ಆಕರ್ಷಕವಾದ ಅರಿಜೋನಾ ಬ್ಲೂ ಬಣ್ಣದ ಆಯ್ಕೆ ನೀಡಿದೆ.

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಹೊಸ ಟಿಯಾಗೋ ಕಾರು ಎಂಟ್ರಿ ಲೆವೆಲ್ ಮಾದರಿಗಳಲ್ಲೇ ಅತಿಹೆಚ್ಚು ಸುರಕ್ಷಾ ಫೀಚರ್ಸ್‌ಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ಗೆ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಳ್ಳುವ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಹೊಸ ಕಾರಿಗೆ ನೀರಿಕ್ಷೆಗೂ ಮೀರಿ ಬೇಡಿಕೆ ಹರಿದುಬರುತ್ತಿರುವ ಕಾರಣಕ್ಕೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದೆ.

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಕಳೆದ ತಿಂಗಳ ಹಿಂದಷ್ಟೇ ಟಿಯಾಗೋ ಕಾರಿನಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಸಾಮಾನ್ಯ ಆವೃತ್ತಿಗಳಿಗಾಗಿ ಅರಿಜೋನಾ ಬ್ಲ್ಯೂ ಬಣ್ಣವನ್ನು ಪರಿಚಯಿಸಿದ್ದು, ಶೀಘ್ರದಲ್ಲೇ ಟಿಯಾಗೋ ಕಾರಿನಲ್ಲಿರುವ ಯಲ್ಲೊ ಬಣ್ಣದ ಆಯ್ಕೆಯನ್ನು ತೆಗೆದುಹಾಕಲು ನಿರ್ಧರಿಸಿದೆ.

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಹೀಗಾಗಿ ಹೊಸ ಕಾರಿನಲ್ಲಿ ಹೊಸ ಆಯ್ಕೆ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರತಿ 2 ತಿಂಗಳಿಗೆ ಒಂದು ಬಾರಿ ಹೊಸ ಅಪ್ಡೆಟ್‌ಗಳನ್ನು ಪರಿಚಯಿಸಿದ್ದು, ಇದು ಗ್ರಾಹಕರ ಆಕರ್ಷಣೆ ಪ್ರಮುಖ ಕಾರಣವಾಗಿದೆ ಎನ್ನಬಹುದು.

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.86 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.85 ಲಕ್ಷ ಬೆಲೆ ಹೊಂದಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಗ್ರಾಹಕರು ತಮ್ಮ ಬೇಡಿಕೆಯೆಂತೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಇತ್ತೀಚೆಗೆ ಬಿಡುಗಡೆ ಮಾಡಲಾದ ಸ್ಪೆಷಲ್ ಎಡಿಷನ್ ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಹೊಸ ಆವೃತ್ತಿಯ ಮೂಲಕ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸೆಳೆಯಲು ಮುಂದಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಹ್ಯುಂಡೈ ಸ್ಯಾಂಟ್ರೋ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ವ್ಯಾಗನ್ಆರ್ ಜೊತೆಗೆ ದಟ್ಸನ್ ಗೊ ಕಾರುಗಳಿಗೆ ಇದು ಮತ್ತಷ್ಟು ಪೈಪೋಟಿ ನೀಡುತ್ತಿದೆ.

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಖರೀದಿದಾರರನ್ನು ಸೆಳೆಯಲು ಲಿಮಿಟೆಡ್ ಎಡಿಷನ್ ಮೂಲಕ ಎಕ್ಸ್‌ಟಿ ಮಾದರಿಯಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.79 ಲಕ್ಷ ಬೆಲೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಲಿಮಿಟೆಡ್ ಎಡಿಷನ್ ಮಾದರಿಯು ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಮಾದರಿಗಳ ನಡುವಿನ ಸ್ಥಾನ ಪಡೆದುಕೊಂಡಿದ್ದು, ಎಕ್ಸ್‌ಟಿ ಮಾದರಿಗಿಂತಲೂ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ. ಲಿಮಿಟೆಡ್ ಎಡಿಷನ್‌ ಟಿಯಾಗೋ ಕಾರಿನಲ್ಲಿ ಟಾಟಾ ಕಂಪನಿಯು 14-ಇಂಚಿನ ಹೊಸ ವಿನ್ಯಾಸದ ಅಲಾಯ್ ವೀಲ್ಹ್ ನೀಡಿದೆ.

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಹಾಗೆಯೇ ಹೊಸ ಕಾರಿನಲ್ಲಿ ವಾಯ್ಸ್ ಕಮಾಂಡ್ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ನ್ಯಾವಿಷನ್ ಹೊಂದಿದ್ದು, ಹೆಚ್ಚುವರಿ ಫೀಚರ್ಸ್‌ಗಳಿಂದಾಗಿ ಲಿಮಿಟೆಡ್ ಎಡಿಷನ್ ಮಾದರಿಯು ಎಕ್ಸ್‌ಟಿ ಆವೃತ್ತಿಗಿಂತಲೂ ರೂ. 29 ಸಾವಿರ ದುಬಾರಿಯಾಗಿದ್ದರೆ ಎಕ್ಸ್‌ಜೆಡ್ ಆವೃತ್ತಿಗಿಂತಲೂ ರೂ. 16 ಸಾವಿರ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಟಿಯಾಗೋ ಹ್ಯಾಚ್‌‌ಬ್ಯಾಕ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ

ಲಿಮಿಟೆಡ್ ಎಡಿಷನ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯೆಂತೆ 14-ಇಂಚಿನ ಅಲಾಯ್ ವೀಲ್ಹ್ ನೀಡಿದ್ದರೂ ಬ್ಲ್ಯಾಕ್ಔಟ್ ವಿನ್ಯಾಸ ಪಡೆದುಕೊಂಡಿದ್ದು, ಟಿಯಾಗೋ ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಪ್ಲಸ್‌ನಲ್ಲಿ ಮಾತ್ರ 15-ಇಂಚಿನ ಅಯಾಲ್ ವೀಲ್ಹ್ ಹೊಂದಿದೆ.

Most Read Articles

Kannada
English summary
Tata Motors Introduced New Arizona Blue Colour Option For Tiago. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X