2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಕಳೆದ ವಾರ ಅಮೆರಿಕಾದ ಮಾಧ್ಯಮಗಳಲ್ಲಿ ಟೆಸ್ಲಾ ಕಂಪನಿಯು ಚೀನಾದಲ್ಲಿ ಸುಮಾರು 2,85,000 ಕಾರುಗಳನ್ನು ರಿಕಾಲ್ ಮಾಡುತ್ತಿದೆ ಎಂದು ವರದಿಯಾಗಿತ್ತು. ಚೀನಾ ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾಗಿದೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಟೆಸ್ಲಾ ಕಂಪನಿಯು ಆಟೋ ಪೈಲಟ್ ವ್ಯವಸ್ಥೆಯಲ್ಲಿ ಉಂಟಾಗಿರುವ ದೋಷವನ್ನು ಸರಿ ಪಡಿಸಲು ಈ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಎಂದು ವರದಿಯಾಗಿದೆ. ಇನ್ನೂ ಕೆಲವು ವರದಿಗಳು ಆಟೋ ಪೈಲಟ್ ಕಾರಣಕ್ಕೆ ಈ ಕಾರುಗಳನ್ನು ರಿಕಾಲ್ ಮಾಡುತ್ತಿಲ್ಲವೆಂದು ಹೇಳಿವೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಕ್ರೂಸ್ ಕಂಟ್ರೋಲ್'ನಲ್ಲಿ ಚಾಲಕನನ್ನು ಎಚ್ಚರಿಸಲು ಅಳವಡಿಸಿರುವ ಸೌಂಡ್ ಸಿಸ್ಟಂಗಳಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ರಿಕಾಲ್ ಮಾಡಲಾಗುತ್ತಿದೆ ಎಂದು ಕೆಲವು ವರದಿಗಳು ಹೇಳಿವೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಇವು ಸಣ್ಣ ಸಮಸ್ಯೆಗಳೇ ಆದರೂ ಗ್ರಾಹಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಬಯಸದ ಕಾರಣ ಟೆಸ್ಲಾ ಕಂಪನಿಯು ಚೀನಾದಲ್ಲಿ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ರಿಕಾಲ್ ಮಾಡುತ್ತಿದೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಚೀನಾದಲ್ಲಿ ರಿಕಾಲ್ ಮಾಡಲಾಗುತ್ತಿರುವ ಕಾರುಗಳಲ್ಲಿ ಯಾವುದೇ ದೊಡ್ಡ ಸಮಸ್ಯೆಗಳಿಲ್ಲವೆಂದು ಅಮೆರಿಕಾ ಮಾಧ್ಯಮ ವರದಿ ಮಾಡುತ್ತಿದೆ. ಕ್ರೂಸ್ ಕಂಟ್ರೋಲ್ ಅನ್ನು ಆಕ್ಟಿವೇಟ್ ಮಾಡಲಾಗಿದೆ ಎಂಬುದನ್ನು ಚಾಲಕರಿಗೆ ತಿಳಿಸುವ ಉದ್ದೇಶಕ್ಕೆ ಈ ಅಲಾರಾಂ ಬೆಲ್ ಅನ್ನು ನೀಡಲಾಗಿದೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಟೆಸ್ಲಾ ಕಂಪನಿಯು ಚೀನಾದಲ್ಲಿರುವ ತನ್ನ ಕಾರುಗಳ ಸುರಕ್ಷತಾ ತಪಾಸಣೆ ನಡೆಸುತ್ತಿದೆ. ಈ ಕಾರುಗಳಲ್ಲಿರುವ ಆಟೊಪೈಲಟ್ ಕಾರ್ಯವನ್ನು ಪರೀಕ್ಷಿಸಲಾಗುತ್ತಿದೆ. ಆಟೋ ಪೈಲಟ್ ಸಿಸ್ಟಂನಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳಿಂದಾಗಿ ಕೆಲವು ಟೆಸ್ಲಾ ಕಾರುಗಳು ಚೀನಾದಲ್ಲಿ ಅಪಘಾತಕ್ಕೀಡಾಗುತ್ತಿವೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಆಟೋ ಪೈಲಟ್ ಸಮಸ್ಯೆಯು ಟೆಸ್ಲಾ ಕಂಪನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ಹಲವಾರು ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತಗಳಿಗೆ ಕಾರು ಚಾಲಕರು ಸಹ ಕಾರಣರಾಗಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಕಾರು ಆಟೋ ಪೈಲಟ್ ಮೋಡ್'ನಲ್ಲಿದ್ದರೂ ಸಹ, ಚಾಲಕ ಕಾರಿನ ಚಲನೆಯ ಬಗ್ಗೆ ಗಮನ ಹರಿಸಬೇಕು ಎಂದು ಟೆಸ್ಲಾ ಕಂಪನಿ ಹೇಳಿದೆ. ಕಾರು ಆಟೋ ಪೈಲಟ್ ಮೋಡ್'ನಲ್ಲಿ ಚಲಿಸುವಾಗ ಕೆಲವು ಚಾಲಕರು ನಿದ್ರಿಸುತ್ತಾರೆ ಎಂದು ಟೆಸ್ಲಾ ಕಂಪನಿ ತಿಳಿಸಿದೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಇನ್ನೂ ಕೆಲವು ಚಾಲಕರು ಹಿಂಬದಿಯ ಸೀಟಿನಲ್ಲಿ ಕುಳಿತು ವೀಡಿಯೊ ನೋಡುವುದರಲ್ಲಿ ಮಗ್ನರಾಗಿರುತ್ತಾರೆ ಎಂದು ಟೆಸ್ಲಾ ಕಂಪನಿ ಹೇಳಿದೆ. ಆಟೋ ಬಿಲ್ಡ್ ಭವಿಷ್ಯದ ಕಸ್ಟಮ್ ಆಪರೇಟಿಂಗ್ ಸಿಸ್ಟಂ ತಂತ್ರಜ್ಞಾನವಾಗಿದೆ.

2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಟೆಸ್ಲಾ

ಭವಿಷ್ಯದಲ್ಲಿ ಟೆಸ್ಲಾ ಕಂಪನಿಯು ಸ್ವಯಂ ಚಾಲಿತ ಟ್ಯಾಕ್ಸಿಗಳನ್ನು ಬಿಡುಗಡೆಗೊಳಿಸಲಿದೆ ಎಂದು ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ. ಕ್ಯಾಮೆರಾ, ರಾಡಾರ್ ಹಾಗೂ ಸೆನ್ಸಾರ್'ಗಳನ್ನು ಅಳವಡಿಸುವ ಮೂಲಕ ಸ್ವಯಂಚಾಲಿತ ಕಾರುಗಳ ಕಾರ್ಯಾಚರಣೆಯಲ್ಲಿ ಮಾನವ ಹಸ್ತಕ್ಷೇಪವನ್ನು ತಪ್ಪಿಸಬಹುದು ಎಂಬುದು ಅವರ ಅಭಿಪ್ರಾಯ.

Most Read Articles

Kannada
Read more on ಟೆಸ್ಲಾ tesla
English summary
Tesla recalls more than two lakh cars in China. Read in Kannada.
Story first published: Tuesday, June 29, 2021, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X