ಗುಡ್ ನ್ಯೂಸ್: ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ

ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಸಾಧಿಸಿರುವ ಅಮೆರಿಕದ ದೈತ್ಯ ಆಟೋ ಉತ್ಪಾದನಾ ಕಂಪನಿಯಾದ ಟೆಸ್ಲಾ ಗ್ರಾಹಕರ ಬೇಡಿಕೆಯೆಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ವಾಹನಗಳ ಮಾರಾಟ ಜಾಲವನ್ನು ವಿಸ್ತರಿಸುತ್ತಿದ್ದು, ಭಾರತದಲ್ಲೂ ಎಲೆಕ್ಟ್ರಿಕ್ ಕಾರು ಮಾರಾಟ ಆರಂಭಿಸಲು ಅಂತಿಮ ಹಂತದ ಸಿದ್ದತೆಯಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಮಾಲಿನ್ಯ ತಡೆಗಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಮುಂದಿನ ಕೆಲವೇ ದಿನಗಳಲ್ಲಿ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಇವಿ ವಾಹನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಜಾಗತಿಕ ಮನ್ನಣೆ ಪಡೆದಿರುವ ಟೆಸ್ಲಾ ಕೂಡಾ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಜೂನ್ ಮಧ್ಯಂತರದಲ್ಲಿ ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಮಾಡೆಲ್ 3 ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವ ಟೆಸ್ಲಾ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ(Research and development) ಕೇಂದ್ರವನ್ನು ತರೆಯಲು ನಿರ್ಧರಿಸಿದೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ತೆರೆಯಲು ಈಗಾಗಲೇ ಅಗತ್ಯ ಪತ್ರ ವ್ಯವಹಾರಗಳನ್ನು ನಡೆಸುತ್ತಿರುವ ಟೆಸ್ಲಾ ಕಂಪನಿಯು ನೋಂದಣಿಯ ಪ್ರಕ್ರಿಯೆಯನ್ನು ಸಹ ಪೂರ್ಣಗೊಳಿಸಿದ್ದು, ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿರುವ ಸ್ಕಾವ್ 909 ಕಾರ್ಪೊರೇಟ್ ಕಚೇರಿಯ 14ನೇ ಮಹಡಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ತೆರೆಯುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಟೆಸ್ಲಾ ಕಂಪನಿಯು ಭಾರತದಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ ಆ್ಯಂಡ್ ಎನರ್ಜಿ ಪ್ರವೈಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಣಿ ಪ್ರಕ್ರಿಯೆ ಕೈಗೊಂಡಿದ್ದು, ಬೆಂಗಳೂರಿನಲ್ಲಿಯೇ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಯು ಖಚಿತಗೊಂಡಿರುವುದಿಂದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಟೆಸ್ಲಾ ಹೊಸ ಯೋಜನೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಗ್ರೀನ್ ಮೊಬಿಲಿಟಿಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಕರ್ನಾಟಕದಲ್ಲಿ ಹೊಸ ಯೋಜನೆಗಳು ಆರಂಭಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಅವರಿಗೆ ಟ್ವೀಟ್ ಮೂಲಕ ಶುಭಕೋರಿದ್ದಾರೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಇನ್ನು ಟೆಸ್ಲಾ ಕಂಪನಿಯು ಹೊಸ ಕಾರು ಖರೀದಿಗಾಗಿ ಶೀಘ್ರದಲ್ಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸುತ್ತಿದ್ದು, ಜೂನ್ ಆರಂಭದಲ್ಲಿ ಕಾರು ವಿತರಣೆಗೆ ಅಧಿಕೃತ ಚಾಲನೆ ನೀಡುವುದಾಗಿ ಖಚಿತಪಡಿಸಿದೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಕಳೆದ 2017ರಲ್ಲೇ ಟೆಸ್ಲಾ ಮೊದಲ ಇವಿ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಮಾಡೆಲ್ 3 ಕಾರು ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯ ಇವಿ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಿಗೆ ಟೆಸ್ಲಾ ಕಂಪನಿಯು ಹೊಸ ಇವಿ ಕಾರು ಮಾದರಿಯನ್ನು ಅಮೆರಿಕದಿಂದಲೇ ರಫ್ತುಗೊಳಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಅತ್ಯುತ್ತಮ ದರ್ಜೆಯ ಬ್ಯಾಟರಿ ಸೌಲಭ್ಯ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದಿಂದಾಗಿ ಟೆಸ್ಲಾ ಇವಿ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿದ್ದಲ್ಲದೇ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿವೆ.

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಕೇಂದ್ರ ಕಚೇರಿ

ಮಾಡೆಲ್ 3 ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಹೆಚ್ಚು ಮೈಲೇಜ್ ಹೊಂದಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಲಿದೆ. ಸಂಪೂರ್ಣವಾಗಿ ಆಮದು ಕಾರು ಮಾದರಿಯಾಗಿರುವುದರಿಂದ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 55 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಟೆಸ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ

ಆರಂಭಿಕವಾಗಿ ಸಿಬಿಯು ಆಮದು ನೀತಿಯಡಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟ ಮಾಡಲಿರುವ ಟೆಸ್ಲಾ ಕಂಪನಿಯು ಮುಂಬರುವ 2023ರ ವೇಳೆಗೆ ಭಾರತದಲ್ಲಿ ಕಾರು ಉತ್ಪಾದನೆಯನ್ನು ಆರಂಭಿಸುವ ಸಿದ್ದತೆಯಲ್ಲಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla Research And Development Unit Registered In Bengaluru. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X