22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2020ರ ಅಕ್ಟೋಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಈ ಎಸ್‌ಯುವಿಯು ಭಾರೀ ಜನಪ್ರಿಯತೆಯನ್ನು ಪಡೆದಿದೆ.

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಕಾರು ಪ್ರಿಯರು ಈ ಎಸ್‌ಯುವಿಯನ್ನು ಹಲವು ರೀತಿಯಲ್ಲಿ ಮಾಡಿಫೈ ಮಾಡುತ್ತಿದ್ದಾರೆ. ಮಹೀಂದ್ರಾ ಕಂಪನಿಯು ಹೊಸ ಥಾರ್‌ ಎಸ್‌ಯುವಿಗಾಗಿ ಹಲವು ಆಕ್ಸೆಸರಿಸ್'ಗಳನ್ನು ನೀಡಿದ್ದರೂ ಅವು ಸೀಮಿತವಾಗಿವೆ. ಈ ಕಾರಣಕ್ಕೆ ಮಹೀಂದ್ರಾ ಥಾರ್ ಗ್ರಾಹಕರು ಅವುಗಳನ್ನು ಮತ್ತಷ್ಟು ಮಾಡಿಫೈ ಮಾಡುತ್ತಿದ್ದಾರೆ.

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಈಗ ಮಾಡಿಫೈಗೊಂಡಿರುವ ಮಹೀಂದ್ರಾ ಎಸ್‌ಯುವಿಗೆ ಸಂಬಂಧಿಸಿದ ವೀಡಿಯೊವನ್ನು ಯೂಟ್ಯೂಬ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಎಸ್‌ಯುವಿಯನ್ನು ಅಲಾಯ್‌ ವ್ಹೀಲ್ ಮೂಲಕ ಮಾಡಿಫೈಗೊಳಿಸಲಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಈ ಎಸ್‌ಯುವಿಯು ಮುಂಭಾಗದಲ್ಲಿ ಮಹೀಂದ್ರಾ ಕಂಪನಿಯು ನೀಡಿರುವ ಗ್ರಿಲ್ ಅನ್ನು ಹೊಂದಿದೆ. ಇನ್ನು ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿಯಲ್ಲಿ ಅಳವಡಿಸಿರುವ ದೊಡ್ಡ ಗಾತ್ರದ ಅಲಾಯ್ ವ್ಹೀಲ್ ನೋಡಿದ ತಕ್ಷಣ ಗಮನ ಸೆಳೆಯುತ್ತದೆ.

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಈ ಎಸ್‌ಯುವಿಯಲ್ಲಿ 5 ಸ್ಪೋಕ್'ನ 22 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಈ ಅಲಾಯ್ ವ್ಹೀಲ್‌ಗಳು ಸ್ಟಾಲಿನ್ ಕಂಪನಿಗೆ ಸೇರಿವೆ. ಈ ಅಲಾಯ್ ವ್ಹೀಲ್ ಅನ್ನು ಗಮನದಲ್ಲಿಟ್ಟುಕೊಂಡು ಸ್ಲಿಮ್ ಸೈಡ್‌ವಾಲ್‌ನೊಂದಿಗೆ ಬರುವ ವಿಶಾಲವಾದ ಟಯರ್‌ಗಳನ್ನು ಅಳವಡಿಸಲಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಈ ಟಯರ್‌ಗಳು ಬಿಳಿ ಸ್ಟಿಕ್ಕರ್ ಹೊಂದಿದ್ದು ವಿಭಿನ್ನವಾಗಿ ಕಾಣುತ್ತವೆ. ಫ್ರಂಟ್ ಬ್ರೇಕ್ ಕ್ಯಾಲಿಪರ್‌ ಹಾಗೂ ಹಿಂಭಾಗದ ಬ್ರೇಕ್ ಕ್ಯಾಲಿಪರ್‌ಗಳಿಗೆ ಗಾಢಕೆಂಪು ಬಣ್ಣವನ್ನು ನೀಡಲಾಗಿದೆ. ಎಸ್‌ಯುವಿಯ ಲುಕ್ ಹೆಚ್ಚಿಸಲು ಫ್ಲೇರ್ ವ್ಹೀಲ್ ಆರ್ಕ್'ಗಳನ್ನು ಸೇರಿಸಲಾಗಿದೆ.

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಈ ಎಸ್‌ಯುವಿಯನ್ನು ಹತ್ತಲು ಹಾಗೂ ಇಳಿಯಲು ಅಡ್ಡವಾಗಿ ಒಂದು ಮೆಟ್ಟಿಲು ನೀಡಲಾಗಿದೆ. ಮಾಡಿಫೈಗೊಂಡಿರುವ ಈ ಎಸ್‌ಯುವಿಯ ಹಿಂಭಾಗದಲ್ಲಿರುವ ರೇರ್ ಟೇಲ್‌ಗೇಟ್ ಆಫ್ಟರ್ ಮಾರ್ಕೆಟ್ ಅಲಾಯ್ ವ್ಹೀಲ್ ಹೊಂದಿದ್ದು ಎಸ್‌ಯುವಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಈ ಟಯರ್‌ ಹಾಗೂ ಅಲಾಯ್ ವ್ಹೀಲ್'ಗಳಿಗಾಗಿ ಒಟ್ಟು ರೂ.2.20 ಲಕ್ಷ ವೆಚ್ಚ ಮಾಡಲಾಗಿದೆ. ಒಂದು ಟಯರ್ ಕಡಿಮೆ ಮಾಡಿದರೆ ಈ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡಬಹುದು. ಈ ಎಸ್‌ಯುವಿಯ ಮಾಲೀಕರು ಈ ವಾಹನದಲ್ಲಿ ಆಫ್ಟರ್ ಮಾರ್ಕೆಟ್ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ.

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

ಈ ಎಸ್‌ಯುವಿಯಲ್ಲಿರುವ ಹೆಡ್‌ಲ್ಯಾಂಪ್‌, ಫಾಗ್ ಲ್ಯಾಂಪ್‌, ಎಲ್‌ಇಡಿ ಡಿಆರ್‌ಎಲ್‌, ಎಕ್ಸ್ ಟಿರಿಯರ್ ರೇರ್ ವೀವ್ ಮಿರರ್‌, ಟೇಲ್ ಲ್ಯಾಂಪ್‌, ಡೋರ್ ಹ್ಯಾಂಡಲ್‌, ರೇರ್ ರಿಫ್ಲೆಕ್ಟರ್‌ ಹಾಗೂ ವಿಂಡೋ ವೈಸರ್'ಗಳು ಕ್ರೋಮ್ ಬಣ್ಣವನ್ನು ಹೊಂದಿವೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

22 ಇಂಚಿನ ಅಲಾಯ್ ವ್ಹೀಲ್‌ನೊಂದಿಗೆ ಮಾಡಿಫೈಗೊಂಡ ಥಾರ್ ಎಸ್‌ಯುವಿ

2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 150 ಬಿಹೆಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, 2.2 ಲೀಟರ್ ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಚಿತ್ರಕೃಪೆ: ಸಂಜೀತ್ ಜಾತ್

Most Read Articles

Kannada
English summary
Thar SUV modified with 22 inch alloy wheel. Read in Kannada.
Story first published: Saturday, May 8, 2021, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X