ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಮೂರನೇ ತಲೆಮಾರಿನ ಹೆಚ್‌ಆರ್-ವಿ ಎಸ್‍ಯುವಿಯನ್ನು ಜಪಾನ್‌ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿದೆ. ಈ 2021ರ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಜಪಾನ್‌ನಲ್ಲಿ ಹೊಂಡಾ ಹೆಚ್‌ಆರ್-ವಿ ಎಸ್‍ಯುವಿಯು ಹೋಂಡಾ ವೆಜೆಲ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಈ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಜಿ, ಇ: ಹೆಚ್ಇವಿ ಎಕ್ಸ್, ಇ: ಹೆಚ್ಇವಿ ಎಕ್ಸ್, ಇ: ಹೆಚ್ಇವಿ ಝಡ್ ಮತ್ತು ಇ: ಹೆಚ್ಇವಿ ಪ್ಲೇ ಎಂಬ ನಾಲ್ಕು ವೆರಿಯೆಂಟ್ ಗಳಲ್ಲಿ ಬಿಡುಗಡೆಯಾಗಲಿದೆ.

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ವಿನ್ಯಾಸ

2021ರ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಫ್ರಂಟ್ ಗ್ರಿಲ್, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಅಗ್ರೇಸಿವ್ ಫ್ರಂಟ್ ಬಂಪರ್, ಚಿಸೆಲ್ಡ್ ಬಾನೆಟ್ ಮತ್ತು ಸ್ಪೋರ್ಟಿ ಫಾಗ್ ಲ್ಯಾಂಪ್ ಜೋಡಣೆಯೊಂದಿಗೆ ಕೂಪ್ ತರಹದ ಲುಕ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಸೈಡ್ ಪ್ರೊಫೈಲ್ ನಲ್ಲಿ ಹಿಂಭಾಗದ ಡೋರಿನ ಹ್ಯಾಂಡಲ್‌ಗಳೊಂದಿಗೆ ಕೋನೀಯ ಸಿ-ಪಿಲ್ಲರ್, ಸ್ಲೋಪಿಂಗ್ ರೂಫ್‌ಲೈನ್, ಡ್ಯುಯಲ್-ಟೋನ್ ಮೆಷಿನ್ ಕಟ್ ಅಲಾಯ್ ವ್ಹೀಲ್, ಟರ್ನ್ ಇಂಡಿಕೇಟರ್‌ಗಳೊಂದಿಗೆ ಡ್ಯುಯಲ್ ಟೋನ್ ಒಆರ್‌ವಿಎಂ ಮತ್ತು ಸೈಡ್ ಬಾಡಿ ಕ್ಲಾಡಿಂಗ್‌ನಿಂದ ಅಲಂಕರಿಸಲಾಗಿದೆ.

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಫೀಚರ್‌ಗಳು

ಇನ್ನು ಹೊಸ ಹೊಂಡಾ ಹೆಚ್‌ಆರ್-ವಿ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಟಿಎಫ್‌ಟಿ, ಹೋಂಡಾ ಕನೆಕ್ಟ್, ವೈರ್‌ಲೆಸ್ ಚಾರ್ಜಿಂಗ್, ಹಿಂಭಾಗದ ಎಸಿ ವೆಂಟ್ಸ್, ಪನೋರೊಮಿಕ್ ಸನ್‌ರೂಫ್, ರಿಮೋಟ್ ಬೂಟ್ ಓಪನಿಂಗ್, ಹಿಲ್ ಡಿಸೆಂಟ್ ಮತ್ತು ಹೋಂಡಾ ಸೆನ್ಸಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಎಂಜಿನ್

ಹೊಸ ತಲೆಮಾರಿನ ಹೆಚ್‌ಆರ್-ವಿ ಎಸ್‍ಯುವಿಯಲ್ಲಿ 1.5 ಎಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಒಳಗೊಂಡಿರುವ ಹೋಂಡಾದ ಇ: ಎಚ್‌ಇವಿ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ. ಇದು ಲಿಥಿಯಂ-ಐಯಾನ್ ಬ್ಯಾಟರಿ ಒಳಗೊಂಡಿರುತ್ತದೆ.

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಈ ಹೊಸ ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಂ 109 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತದೆ. ಇನ್ನು ಈ ಹೊಂಡಾ ಹೆಚ್‌ಆರ್-ವಿ ಎಸ್‍ಯುವಿಯು 9.5 ಸೆಕೆಂಡುಗಳಲ್ಲಿ ರಿಂದ 0 ದಿಂದ 100 ವೇಗವನ್ನು ಪಡೆದುಕೊಳ್ಳುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಮೈಲೇಜ್

2021ರ ಹೊಂಡಾ ಹೆಚ್‌ಆರ್-ವಿ ಎಸ್‍ಯುವಿಯಲ್ಲಿ ಎಂಜಿನ್ ಡ್ರೈವ್, ಎಲೆಕ್ಟ್ರಿಕ್ ಡ್ರೈವ್ ಮತ್ತು ಹೈಬ್ರಿಡ್ ಡ್ರೈವ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಇನ್ನು ಈ ಹೊಂಡಾ ಹೆಚ್‌ಆರ್-ವಿ ಎಸ್‍ಯುವಿಯು 27.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. 2021ರ ಹೊಂಡಾ ಹೆಚ್‌ಆರ್-ವಿ ಹೈಬ್ರಿಡ್ ಒಟ್ಟು ಮೈಲೇಜ್ 24.39 ಕಿ.ಮೀ ನೀಡುತ್ತದೆ.

ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿಯ ವಿಶೇಷತೆಗಳು

ಹೊಸ ಹೊಂಡಾ ಹೆಚ್‌ಆರ್-ವಿ ಎಸ್‍ಯುವಿಯಯು ಈ ವರ್ಷದ ಅಂತ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಒಂದು ವೇಳೆ ಹೊಂಡಾ ಹೆಚ್‌ಆರ್-ವಿ ಭಾರತದಲ್ಲಿ ಬಿಡುಗಡೆಯಾದರೆ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ ಮತ್ತು ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಹೊಂಡಾ honda
English summary
2022 Honda HR-V Facts To Know. Read In Kananda.
Story first published: Tuesday, February 23, 2021, 20:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X