ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಟಿಯಾಗೋ ಹ್ಯಾಚ್‌ಬ್ಯಾಕ್‌ ಕಾರಿನ ಎಕ್ಸ್‌ಟಿ (ಒ) ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.5.49 ಲಕ್ಷಗಳಾಗಿದೆ.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಈ ಮಾದರಿಯು ಎಕ್ಸ್‌ಟಿ ಮಾದರಿಗಿಂತ ರೂ.15,000 ಕಡಿಮೆ ಬೆಲೆಯನ್ನು ಹೊಂದಿದೆ. ಈ ಮಾದರಿಯ ಬೆಲೆ ಟಿಯಾಗೋ ಕಾರಿನ ಮೂಲ ಮಾದರಿಯ ಬೆಲೆಗಿಂತ ರೂ.50,000 ಗಳಷ್ಟು ಹೆಚ್ಚಾಗಿದೆ. ಸೆಮಿ ಕಂಡಕ್ಟರ್'ಗಳಿಗೆ ಜಾಗತಿಕವಾಗಿ ಹೆಚ್ಚು ಬೇಡಿಕೆ ಉಂಟಾಗಿದೆ.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಸೆಮಿ ಕಂಡಕ್ಟರ್'ಗಳ ಕೊರತೆಯಿಂದಾಗಿ ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಕಾರುಗಳನ್ನು ಸಮಯಕ್ಕೆ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗಲಿಲ್ಲ.ಈ ಸಮಸ್ಯೆಯನ್ನು ನಿವಾರಿಸಲು ಕಡಿಮೆ ಫೀಚರ್'ಗಳನ್ನು ಹೊಂದಿರುವ ಈ ಅಗ್ಗದ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಹೊಸ ಎಕ್ಸ್‌ಟಿ (ಒ) ಮಾದರಿಯು 2 ಡಿನ್ ಸ್ಟಿರಿಯೊ ಸಿಸ್ಟಂ ಫೀಚರ್ ಅನ್ನು ಹೊಂದಿಲ್ಲ ಎಂಬುದು ಗಮನಾರ್ಹ. ಆದರೆ ಈ ಫೀಚರ್ ಅನ್ನು ಎಕ್ಸ್‌ಟಿ ಮಾದರಿಯಲ್ಲಿ ನೀಡಲಾಗುತ್ತದೆ.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಸೆಮಿ ಕಂಡಕ್ಟರ್'ಗಳ ಕೊರತೆಯು ಹೊಸ ಟಿಯಾಗೋ ಕಾರಿನಲ್ಲಿ ಹಲವಾರು ಫೀಚರ್'ಗಳನ್ನು ಇಲ್ಲದಂತೆ ಮಾಡಿದೆ. ಈ ಹೊಸ ಮಾದರಿಯ ಕಾರಿನಲ್ಲಿ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಸಹ ನೀಡಲಾಗಿಲ್ಲ.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಆದರೆ ಎಕ್ಸ್‌ಟಿ ಮಾದರಿಯಲ್ಲಿ ನೀಡಲಾಗುವ ಎಲ್ಲಾ ಸ್ಪೀಕರ್‌ ಹಾಗೂ ವೈರಿಂಗ್ ಯುನಿಟ್'ಗಳನ್ನು ಹೊಸ ಎಕ್ಸ್‌ಟಿ (ಒ) ಮಾದರಿಯಲ್ಲಿ ಒದಗಿಸಲಾಗಿದೆ. ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಖರೀದಿಸಿ ಕಸ್ಟಮೈಸ್ ಮಾಡ ಬಯಸುವ ಗ್ರಾಹಕರು ಟಿಯಾಗೋ ಎಕ್ಸ್‌ಟಿ (ಒ) ಮಾದರಿಯನ್ನು ಖರೀದಿಸಬಹುದು.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಇದೇ ವೇಳೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಉತ್ಪಾದನಾ ಘಟಕದಲ್ಲಿ ಟಿಯಾಗೋ ಕಾರಿಗಾಗಿ ಹೆಚ್ಚುವರಿ ಆಂಡ್ರಾಯ್ಡ್ ಆಧಾರಿತ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಸಿದ್ದಪಡಿಸುತ್ತಿದೆ.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ದಿ ಕಾರ್ ಶೋ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾದ ವೀಡಿಯೊದಲ್ಲಿ ಈ ಫೀಚರ್ ಹೊಂದಿರುವ ಟಿಯಾಗೋ ಕಾರನ್ನು ತೋರಿಸಲಾಗಿದೆ. ಈ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲು ಗ್ರಾಹಕರು ರೂ.24,000 ಪಾವತಿಸ ಬೇಕಾಗುತ್ತದೆ.

ಟಾಟಾದ ಇನ್ಫೋಟೇನ್‌ಮೆಂಟ್ ಸಿಸ್ಟಂ, ಗೂಗಲ್ ಮ್ಯಾಪ್ ಹಾಗೂ ವಾಯ್ಸ್ ಕಮ್ಯಾಂಡ್ ಹೊಂದಿರುವ ಗೂಗಲ್ ಮ್ಯಾಪ್'ನಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಫೀಚರ್'ಗಳನ್ನು ಹೊಂದಿದೆ.

ಆಂಡ್ರಾಯ್ಡ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಪಡೆಯಲಿದೆ ಟಿಯಾಗೋ ಕಾರಿನ ಹೊಸ ಮಾದರಿ

ಟಿಯಾಗೋ ಕಾರಿನಲ್ಲಿ ಈ ಸಿಸ್ಟಂ ಅಳವಡಿಸಲು ಗ್ರಾಹಕರು ರೂ.1,000 ಪಾವತಿಸ ಬೇಕಾಗುತ್ತದೆ. ಇಲ್ಲದಿದ್ದರೆ ಈ ಕಾರಿನಲ್ಲಿರುವ ಸ್ಪೀಕರ್ ಹಾಗೂ ವೈರಿಂಗ್ ಭಾಗಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.

Most Read Articles

Kannada
English summary
Tiago XTO gets android touchscreen infotainment System. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X