ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಕೇಂದ್ರ ಸರ್ಕಾರವು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಫೇಮ್ 2 ಯೋಜನೆಯ ಮೂಲಕ ಗರಿಷ್ಠ ಪ್ರಮಾಣದ ಸಬ್ಸಡಿ ಘೋಷಣೆ ಮಾಡಿದ್ದು, ಹೊಸ ಯೋಜನೆ ಅಡಿ ವಿವಿಧ ರಾಜ್ಯಗಳಲ್ಲಿ ಸುಮಾರು 6,265 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರುಮಾಡಲಾಗಿದೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಕೇಂದ್ರ ಸರ್ಕಾರದಿಂದ ಸಬ್ಸಡಿ ಪಡೆದುಕೊಂಡಿರುವ 6,265 ಎಲೆಕ್ಟ್ರಿಕ್ ಬಸ್‌ಗಳು ವಿವಿಧ ರಾಜ್ಯಗಳಿಗೆ ಶೀಘ್ರದಲ್ಲೇ ಹಂಚಿಯಾಗಲಿದ್ದು, ಉತ್ತರಪ್ರದೇಶ ರಾಜ್ಯವು ಫೇಮ್ 2 ಯೋಜನೆ ಅಡಿ ಒಟ್ಟು 700 ಇವಿ ಬಸ್‌ಗಳನ್ನು ಪಡೆದುಕೊಳ್ಳುತ್ತಿರುವುದಾಗಿ ಸಾರಿಗೆ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಯುಪಿ ಈಗಾಗಲೇ ಪ್ರಮುಖ ಎಳು ನಗರಗಳಲ್ಲಿ ಸೀಮಿತ ಸಂಖ್ಯೆಯ ಎಲೆಕ್ಟ್ರಿಕ್ ಬಸ್‌ಗಳ ಬಳಕೆಯನ್ನು ಆರಂಭಿಸಲಾಗಿದ್ದು, ಹೊಸದಾಗಿ ವಿತರಣೆಯಾಗುವ ಬಸ್‌ಗಳನ್ನು ಒಟ್ಟು ಯುಪಿಯಲ್ಲಿನ ಪ್ರಮುಖ 14 ನಗರಗಳಲ್ಲಿ ಸಂಚಾರ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಹೊಸ ಎಲೆಕ್ಟ್ರಿಕ್ ಬಸ್ ವಿತರಣೆಗೂ ಮುನ್ನ ಸಂಚಾರಿ ಆರಂಭಿಸುವ ಮಾರ್ಗಗಳಲ್ಲಿ ಹೆಚ್ಚಿನ ಮಟ್ಟದ ಫಾಸ್ಟ್ ಚಾರ್ಜಿಂಗ್ ನಿರ್ಮಾಣ ಆರಂಭಿಸಿರುವುದಾಗಿ ಯುಪಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮಾಹಿತಿ ಹಂಚಿಕೊಂಡಿದ್ದು, ಮಾಲಿನ್ಯ ತಡೆಗೆ ಮತ್ತು ಡೀಸೆಲ್ ಎಂಜಿನ್ ಬಸ್‌ಗಳಿಂದ ಆಗುತ್ತಿರುವ ಅಧಿಕ ನಿರ್ವಹಣಾ ವೆಚ್ಚ ತಗ್ಗಿಸಲು ಎಲೆಕ್ಟ್ರಿಕ್ ಬಸ್ ಸಹಕಾರಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ. ಹಾಗೆಯೇ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಖಾಸಗಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೂ ಫೇಮ್ 2 ಯೋಜನೆ ಅಡಿ ಸಬ್ಸಡಿ ಪ್ರಕಟಿಸಿದ್ದು, ಹೊಸ ಯೋಜನೆಗಾಗಿ ಕೇಂದ್ರ ಸರ್ಕಾರವು ಒಟ್ಟು ರೂ.10 ಸಾವಿರ ಕೋಟಿ ಮೀಸಲಿಟ್ಟಿದೆ. ಫೇಮ್ ಯೋಜನೆಯ ಮೊದಲ ಹಂತದಲ್ಲಿ ಸುಮಾರು ರೂ. 3 ಸಾವಿರ ಕೋಟಿ ನೀಡಿದ್ದ ಕೇಂದ್ರ ಸರ್ಕಾರವು ಎರಡನೇ ಹಂತದ ಯೋಜನೆಗಾಗಿ ರೂ. 10 ಸಾವಿರ ಕೋಟಿ ಮೀಸಲಿಟ್ಟಿದೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ಎರಡನೇ ಹಂತದಲ್ಲಿ 62 ಸಾವಿರ ಪ್ಯಾಸೆಂಜರ್ ಕಾರುಗಳು ಮತ್ತು ಬಸ್‌ಗಳಿಗೆ, 15 ಲಕ್ಷ ದ್ವಿಚಕ್ರ ವಾಹನಗಳ ಮತ್ತು ತ್ರಿ ಚಕ್ರ ವಾಹನಗಳು ಸಬ್ಸಡಿ ನೀಡುವ ಯೋಜನೆ ಹೊಂದಲಾಗಿದ್ದು, ವ್ಯಯಕ್ತಿಕ ಬಳಕೆಯ ವಾಹನಗಳ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೂ ಎಲೆಕ್ಟ್ರಿಕ್ ವಾಹನಗಳ ಅಳವಡಿಸಿಕೊಳ್ಳಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಫೇಮ್ 2 ಯೋಜನೆ ಅಡಿ ಉತ್ತರಪ್ರದೇಶಕ್ಕೆ 700 ಎಲೆಕ್ಟ್ರಿಕ್ ಬಸ್

ರಾಜ್ಯಗಳ ಪೈಕಿ ದೆಹಲಿ ಸರ್ಕಾರವು ಇತರೆ ರಾಜ್ಯಗಳಿಗಳಿಂತಲೂ ಹೊಸ ಇವಿ ನೀತಿ ಅಡಿಯಲ್ಲಿ ಪರಿಸರಕ್ಕೆ ಪೂರಕವಾದ ವಾಹನಗಳ ನೋಂದಣಿಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ದೆಹಲಿಯಲ್ಲಿ ಗರಿಷ್ಠ ಪ್ರಮಾಣದ ಸಬ್ಸಡಿಯೊಂದಿಗೆ ರಸ್ತೆ ತೆರಿಗೆ ಮತ್ತು ವಾಹನ ನೋಂದಣಿಯಿಂದಲೂ ವಿನಾಯ್ತಿ ನೀಡಿರುವುದು ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಮಟ್ಟದ ಇವಿ ವಾಹನಗಳು ನೋಂದಣಿಯಾಗುತ್ತಿರುವು ಉತ್ತಮ ಬೆಳವಣಿಯಾಗಿದೆ.

Most Read Articles

Kannada
English summary
Uttar Pradesh 14 Cities To Get 700 E-Buses Soon. Read in Kannada.
Story first published: Saturday, April 24, 2021, 10:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X