ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿ ಸ್ಕೋಡಾ ಜೊತೆಗೂಡಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಕಾರು ಮಾರಾಟ ಮಳಿಗೆಗಳನ್ನು ಹೊಸ ಮಾದರಿಯ ಸೌಲಭ್ಯಗಳೊಂದಿಗೆ ಉನ್ನತೀಕರಿಸುತ್ತಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಫುಲ್ ಸೈಜ್ ಎಸ್‌ಯುವಿ ಮಾದರಿಗಳಿಗೆ ಭಾರತದಲ್ಲಿ ತೀವ್ರ ಬೇಡಿಕೆ ಕಂಡುಬರುತ್ತಿರುವ ಹಿನ್ನಲೆ ವಿವಿಧ ಕಂಪನಿಗಳು ಹಲವು ಹೊಸ ಮಾದರಿಯ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಟಿ-ರಾಕ್ ನಂತರ ಮತ್ತಷ್ಟು ಹೊಸ ಕಾರುಗಳೊಂದಿಗೆ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಹೊಸ ಕಾರು ಬಿಡುಗಡೆಯೊಂದಿಗೆ ಮಾರಾಟ ಮಳಿಗೆಗಳ ವಿಸ್ತರಣೆಗೂ ಯೋಜನೆ ರೂಪಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಈ ವರ್ಷಾಂತ್ಯಕ್ಕೆ 150 ಕಾರು ಮಾರಾಟ ಮಳಿಗೆಗಳನ್ನು ಹೊಂದುವ ಗುರಿಹೊಂದಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಸದ್ಯ ದೇಶದ ಪ್ರಮುಖ ನಗರಗಳಲ್ಲಿ 105 ಮಾರಾಟ ಮಳಿಗೆಗಳೊಂದಿಗೆ 35 ಯೂಸ್ಡ್ ಕಾರ್ ಸೆಲ್ಸ್ ಪಾಯಿಂಟ್‌ಗಳನ್ನು ಹೊಂದಿದ್ದು, ಹೊಸದಾಗಿ ಈ ವರ್ಷಾಂತಕ್ಕೆ 45 ಕಾರು ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಫೋಕ್ಸ್‌ವ್ಯಾಗನ್ ಕಾರು ಮಾರಾಟ ಮಳಿಗೆಗಳು ಹೆಚ್ಚಿನ ಮಟ್ಟದಲ್ಲಿ ಮಹಾನಗರಗಳಲ್ಲೇ ಹೆಚ್ಚು ನೆಲೆಗೊಂಡಿದ್ದು, ಹೊಸ ಮಾರಾಟ ಮಳಿಗೆಗಳನ್ನು ಟೈರ್ 2 ಮತ್ತು ಟೈರ್ 3 ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಫೋಕ್ಸ್‌ವ್ಯಾಗನ್ ಕಾರುಗಳ ಉತ್ತಮ ಬೇಡಿಕೆಯಿದ್ದರೂ ಮಾರಾಟ ನಂತರ ಸೇವೆಗಳ ವಿಚಾರದಲ್ಲಿ ಗ್ರಾಹಕರಿಂದ ಅಸಮಾಧಾನ ಹೊಂದಿದ್ದು, ಇದೇ ಕಾರಣಕ್ಕೆ ಹೊಸ ಮಾರಾಟ ಮಳಿಗೆಗಳನ್ನು 3 ಎಸ್ ಮಾದರಿಗಳಲ್ಲಿ ತೆರೆಯಲಾಗುತ್ತಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

3 ಎಸ್ ಮಾರಾಟ ಮಳಿಗೆಗಳಲ್ಲಿ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಲಭ್ಯತೆಯನ್ನು ಹೊಂದಿರಲಿದ್ದು, ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಕಾರು ಮಾರಾಟ ಮಳಿಗೆಗಳನ್ನು ಸಹ 3 ಎಸ್ ಮಾದರಿಗಳಿಗೆ ಅನುಗುಣವಾಗಿ ತೆರೆಯುತ್ತಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಪ್ರಸ್ತುತ ಕಾರ್ಯನಿರ್ವಹಣೆಯಲ್ಲಿರುವ ಮಾರಾಟ ಮಳಿಗೆಗಳನ್ನು ಮತ್ತು ಹೊಸ ಕಾರು ಮಾರಾಟ ಮಳಿಗೆಗಳನ್ನು ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊದೊಂದಿಗೆ ಉನ್ನತೀಕರಿಸಲಾಗುತ್ತಿದ್ದು, ಗ್ರಾಹಕರ ಸೇವೆಗಳನ್ನು ಸರಳಗೊಳಿಸಲು ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯೋಗಿಗಳ ಕಾರ್ಯದಕ್ಷತೆ ಹೆಚ್ಚಿಸಲು ಅಗತ್ಯ ತರಬೇತಿಗಳನ್ನು ನೀಡಲಾಗುತ್ತಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಇನ್ನು ಫೋಕ್ಸ್‌ವ್ಯಾಗನ್ ಹೊಚ್ಚ ಹೊಸ ಟೈಗನ್ ಕಾರು ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದ್ದು, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಎಂಕ್ಯೂಬಿ ಎ0 ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆಗೊಂಡರುವ ಹೊಸ ಕಾರು ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಸೌಲಭ್ಯವು ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ನೀರಿಕ್ಷೆಯಿದ್ದು, ಶೀಘ್ರದಲ್ಲೇ ಹೊಸ ಕಾರಿನ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನಲ್ಲಿ ಪೊಲೊ ಹ್ಯಾಚ್‌ಬ್ಯಾಕ್‌ನಲ್ಲಿ ಬಳಕೆ ಮಾಡಲಾಗಿರುವ 108-ಬಿಎಚ್‌ಪಿ ಸಾಮರ್ಥ್ಯದ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 148-ಬಿಎಚ್‌ಪಿ ಸಾಮರ್ಥ್ಯದ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಟೈಗನ್‌ನಲ್ಲಿ ಜೋಡಿಸಲಾಗಿದೆ.

ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಬ್ರಾಂಡ್ ಡಿಸೈನ್ ಮತ್ತು ಲೊಗೊ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನ ಬೆಲೆಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ .16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಬಹುದೆಂದು ನೀರಿಕ್ಷಿಸಲಾಗಿದ್ದು, ಕಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಫೋಕ್ಸ್‌ವ್ಯಾಗನ್ ಮೊದಲ ಬಾರಿಗೆ ಎಂಟ್ರಿ ನೀಡುತ್ತಿರುವುದು ವಿಶೇಷವಾಗಿದೆ.

Most Read Articles

Kannada
English summary
Volkswagen implements New Brand Design and Logo across the network in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X