ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಗ್ರಾಹಕರಿಗೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದ್ದು, ನಿರ್ವಹಣಾ ವೆಚ್ಚಗಳನ್ನು ತಗ್ಗಿಸಲು ಕಂಪನಿಯು ಉತ್ತಮ ನಿರ್ಧಾರವೊಂದನ್ನು ಪ್ರಕಟಿಸಿದೆ.

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಕಾರು ಮಾಲೀಕ್ವ ನಿರ್ವಹಣಾ ವೆಚ್ಚಗಳನ್ನು ತಗ್ಗಿಸಲು ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಅಧಿಕೃತ ಬಿಡಿಭಾಗಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಸರ್ವಿಸ್ ಚಾರ್ಜ್ ಪ್ರಮಾಣದದಲ್ಲೂ ಸಾಕಷ್ಟು ವಿನಾಯ್ತಿ ನೀಡುವುದಾದಗಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಕುಸಿತ ಕಾಣುತ್ತಿರುವ ಆರ್ಥಿಕ ಬೆಳವಣಿಗೆಯಿಂದಾಗಿ ಉದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ನಿರ್ಧರಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡುತ್ತಿದೆ.

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಅಧಿಕೃತ ಬಿಡಿಭಾಗಗಳ ಬೆಲೆಯಲ್ಲಿ ಸರಾಸರಿಯಾಗಿ ಶೇ.11 ರಷ್ಟು ಬೆಲೆ ಇಳಿಕೆ ಮಾಡಿದ್ದು, ವ್ಯಾಲ್ಯೂ ಪ್ಯಾಕೇಜ್‌ಗಳ ಆಯ್ಕೆ ಮೇಲೆ ಗರಿಷ್ಠ ಶೇ.24 ರಷ್ಟು ಉಳಿತಾಯ ಮಾಡಬಹುದಾಗಿದೆ.

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ಸರ್ವಿಸ್‌ಗಳಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಎಂಜಿನ್ ಆಯಿಲ್ ದರದಲ್ಲಿ ಶೇ.32 ರಷ್ಟು ದರ ಇಳಿಕೆ ಮಾಡಿದ್ದು, ಕೋವಿಡ್ ಹೆಚ್ಚುತ್ತಿರುವ ಪರಿಣಾಮ ರಿಯಾಯ್ತಿ ದರಗಳೊಂದಿಗೆ ಮೊಬೈಲ್ ಗ್ಯಾರೇಜ್ ವಾಹನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಸೇವೆ ಆರಂಭಿಸಿದೆ.

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಸದ್ಯ ಶೇ.80 ರಷ್ಟು ಗ್ರಾಹಕರ ಮನೆ ಬಾಗಿಲಿಗೆಯೇ ಮೊಬೈಲ್ ಗ್ಯಾರೇಜ್ ವಾಹನಗಳ ಮೂಲಕ ಸೇವೆಗಳನ್ನು ಒದಗಿಸುತ್ತಿದ್ದು, ಹೊಸ ಯೋಜನೆಗೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದೆ. ಮನೆಬಾಲಿಗೆ ತಾಂತ್ರಿಕ ಸಮಸ್ಯೆಗಳಿಗೆ ಸರ್ವಿಸ್ ನೀಡುವ ಕಂಪನಿಯು ಸ್ಯಾನಿಟೈಜ್ ಮಾಡಿದ ನಂತರವೇ ಈ ವಾಹನವನ್ನು ಮಾಲೀಕರಿಗೆ ಹಸ್ತಾಂತರ ಮಾಡುತ್ತದೆ.

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಇದರಿಂದ ಫೋಕ್ಸ್‌ವ್ಯಾಗನ್ ಸರ್ವಿಸ್ ಹೊಸ ಯೋಜನೆಯು ಆಕರ್ಷಕ ದರದೊಂದಿಗೆ ಸುರಕ್ಷಿತ ವ್ಯವಹಾರ ಕೈಗೊಳ್ಳುತ್ತಿರುವುದು ಗ್ರಾಹಕರ ಆಕರ್ಷಕವಾಗುತ್ತಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ರಿಮೋಟ್ ಪ್ರದೇಶಗಳಿಗೂ ಗ್ರಾಹಕರ ಸೇವೆಗಳನ್ನು ಒದಗಿಸಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಸರ್ವಿಸ್ ಪ್ಯಾಕೇಜ್ ಎರಡು ಮಾದರಿಗಳಲ್ಲಿ ಲಭ್ಯವಿದ್ದು, ಮೊದಲನೇ ಸೇವಾ ಮಾದರಿಯಲ್ಲಿ ಫೋಕ್ಸ್‌ವ್ಯಾಗನ್ ಸರ್ವಿಸ್ ಕ್ಯಾಮ್ ಮತ್ತು ಎರಡನೇ ಸರ್ವಿಸ್‌ನಲ್ಲಿ ಸರ್ವಿಸ್ ಕಾಸ್ಟ್ ಕ್ಯಾಲ್ಕುಲೇಟರ್ ಫೀಚರ್ಸ್ ಹೊಂದಿದೆ.

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಮೊಲನೆಯ ಫೋಕ್ಸ್‌ವ್ಯಾಗನ್ ಸರ್ವಿಸ್ ಕ್ಯಾಮ್‌ನಲ್ಲಿ ವಿಡಿಯೋ ಮೂಲಕವೇ ಗ್ರಾಹಕರಿಂದ ಬಿಡಿಭಾಗಳ ಸೇವೆಗಳ ಅನುಮೋದನೆ ಪಡೆಯಲು ಸಹಕಾರಿಯಾಗಲಿದ್ದು, ಗ್ರಾಹಕರ ಸೇವೆಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಲೈವ್ ರೇಕಾರ್ಡಿಂಗ್ ವಿಕ್ಷಿಸಲು ಅನುವು ಮಾಡಿಕೊಡುತ್ತದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಆಕರ್ಷಕ ದರಗಳಲ್ಲಿ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಸರ್ವಿಸ್ ಕಾಸ್ಟ್ ಕ್ಯಾಲ್ಕುಲೇಟರ್ ಮೂಲಕ ಗ್ರಾಹಕರು ದುರಸ್ತಿ ವೆಚ್ಚದ ಅಂದಾಜು ಮೊತ್ತ ತಿಳಿಯಲು ಅಧಿಕೃತ ವೆಬ್‌ಸೈಟ್‌ನಲ್ಲಿ ಸುಲಭವಾಗಿ ಗ್ರಾಹಕರೇ ಸರ್ವಿಸ್‌ಗೂ ಮುನ್ನವೇ ತಿಳಿಯಬಹುದಾಗಿದ್ದು, ಹೊಸ ಸರ್ವಿಸ್ ಆರಂಭದ ನಂತರ ಕಾರುಗಳ ನಿರ್ವಹಣೆಯಲ್ಲಿ ಶೇ. 25ರಷ್ಟು ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Volkswagen New Service Schemes Announced In India. Read in Kannada.
Story first published: Friday, April 30, 2021, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X