ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾದ ಪೊಲೊ ಮತ್ತು ವೆಂಟೊ ಕಾಯುವಿಕೆ ಅವಧಿ 5 ತಿಂಗಳುಗಳವರಿಗೆ ತಲುಪಿದೆ, ಏಕೆಂದರೆ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ(Volkswagen Polo, Vento) ಮಾದರಿಗಳ ಬೇಡಿಕೆ ಇತ್ತೀಚೆಗೆ ಹೆಚ್ಚಾಗಿದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳ ಎಲ್ಲಾ ರೂಪಾಂತರಗಳು ಐದು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿಲ್ಲ, ಕೆಲವು ರೂಪಾಂತರಗಳು ಮಾತ್ರ ದೀರ್ಘ ಕಾಯುವ ಅವಧಿಯನ್ನು ಹೊಂದಿರುತ್ತವೆ. ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಟ್ರೆಂಡ್‌ಲೈನ್ ಎಂಪಿಐ, ಕಂಫರ್ಟ್‌ಲೈನ್ ಟಿಎಸ್ಐ ಎಂಟಿ, ಹೈಲೈನ್ ಪ್ಲಸ್ ಟಿಎಸ್ಐ ಎಂಟಿ ಮತ್ತು ಜಿಟಿ ಟಿಎಸ್ಐ ಎಟಿ ಕಮಾಂಡ್ ಐದು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಆದರೆ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ಹೈಲೈನ್ ಟಿಎಸ್ಐ ಎಂಟಿ ರೂಪಾಂತರಕ್ಕೆ ಮಾತ್ರ ಐದು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ. ಕೆಲವು ಮಾದರಿಗಳು ಮತ್ತು ರೂಪಾಂತರಗಳ ಬೇಡಿಕೆ ಉತ್ಪಾದನಾ ಸಾಮರ್ಥ್ಯಕ್ಕಿಂತ ಹೆಚ್ಚಿರುವುದರಿಂದ, ಫೋಕ್ಸ್‌ವ್ಯಾಗನ್ ಬುಕ್ಕಿಂಗ್ಗ್‌ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಮೂಲಗಳ ಪ್ರಕಾರ, ವೋಕ್ಸ್‌ವ್ಯಾಗನ್ ವಿತರಕರು ವೋಕ್ಸ್‌ವ್ಯಾಗನ್ ಪೋಲೊ ಕಂಫರ್ಟ್‌ಲೈನ್ ಎಂಪಿಐ, ವೋಕ್ಸ್‌ವ್ಯಾಗನ್ ಪೊಲೊ ಕಂಫರ್ಟ್‌ಲೈನ್ ಟಿಎಸ್‌ಐ ಎಟಿ, ವೋಕ್ಸ್‌ವ್ಯಾಗನ್ ವೆಂಟೊ ಕಂಫರ್ಟ್‌ಲೈನ್ ಟಿಎಸ್‌ಐ ಎಂಟಿ ಮತ್ತು ವೋಕ್ಸ್‌ವ್ಯಾಗನ್ ವೆಂಟೊ ಹೈಲೈನ್ ಪ್ಲಸ್ ಟಿಎಸ್‌ಐ ಎಂಟಿ ಬುಕ್ಕಿಂಗ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಆದರೆ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳು ಶೀಘ್ರದಲ್ಲೇ ಮೇಲೆ ತಿಳಿಸಿದ ಮಾದರಿಗಳು ಮತ್ತು ವೆರಿಯಂಟ್‌ಗಳ ಬುಕಿಂಗ್‌ಗಳನ್ನು ಸ್ವೀಕರಿಸಲು ಆರಂಭಿಸುತ್ತವೆ. ಇದರಲ್ಲಿ ಪೊಲೊ ಕಾರು ಹಲವು ವರ್ಷಗಳಿಂದ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಬಂದಿದೆ,

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಮತ್ತು ವೆಂಟೊ ಕಾರುಗಳನ್ನು ಸ್ಥಳಿಯವಾಗಿ ತಯಾರಿಸಲಾಗುತ್ತಿದೆ. ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳಲ್ಲಿ 1.2 ಲೀಟರ್ ಎಂಜಿನ್ ಅನ್ನು ಬದಲಾಯಿಸಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿಂದಿನ ತಲೆಮಾರಿನ ಮಾದರಿಗಳಲ್ಲಿ ಇದ್ದ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಬದಲಾಯಿಸಿದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್‍‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇನ್ನು ಇದರಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ ಪ್ರತಿ ಲೀಟರ್‌ಗೆ 18.24 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಈ 1.0 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಹೆಚ್ಚಿನ ಪವರ್ ಡ್ರೈವಿಬಿಲಿಟಿ, ಉತ್ತಮ ಕಾರ್ಯಕ್ಷಮತೆ, ಸುಧಾರಿತ ಇಂಧನ ದಕ್ಷತೆಯನ್ನು ಮತ್ತು ಹೆಚ್ಚು ಸಮರ್ಥನೀಯ ಎಂಜಿನ್ ಎಂದು ಜನಪ್ರಿಯತೆಯನ್ನು ಗಳಿಸಿದೆ. ಈ ವೆಂಟೊ ಕಾರಿನಲ್ಲಿ ಫೋಕ್ಸ್‌ವ್ಯಾಗನ್‍ನ ಪ್ರಶಸ್ತಿ ವಿಜೇತ ಟಿ‍ಎಸ್‍ಐ ತಂತ್ರಜ್ಞಾನವನ್ನು ಕೂಡ ಒಳಗೊಂಡಿದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಫೋಕ್ಸ್‌ವ್ಯಾಗನ್ ತನ್ನ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಈ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಹಲವಾರು ಹೊಸ ನವೀಕರಿರಣಗಳನ್ನು ಪಡೆದುಕೊಂಡಿದೆ. ಹೊಸ ತಲೆಮಾರಿನ ಪೊಲೊದಲ್ಲಿ ಬಳಸಲಾಗುವ ಅದೇ ಎಂಕ್ಯೂಬಿ ಎಒ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ನವೀಕರಿಸಿದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಈ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಲೈಟ್ ಬಾರ್ ಫೋಕ್ಸ್‌ವ್ಯಾಗನ್ ನಿಂದ ಬ್ಯಾಟರಿ-ಎಲೆಕ್ಟ್ರಿಕ್ ಐಡಿ ಮಾದರಿಗಳಿಗೆ ಮತ್ತು ಗಾಲ್ಫ್, ಆರ್ಟಿಯಾನ್ ಮತ್ತು ಟಿಗ್ವಾನ್ ನಂತಹ ಯಶಸ್ವಿ ಮಾದರಿಗಳ ಹೊಸ ವಾಹನ ಪೀಳಿಗೆಗೆ ಶೈಲಿಯ ಸಂಪರ್ಕವನ್ನು ಸೃಷ್ಟಿಸುತ್ತದೆ. ಈ ಕಾರಿನಲ್ಲಿ ಬೆಸ್ಪೋಕ್ ಚಾಸಿಸ್, ಮುಂಭಾಗದ ಆಕ್ಸಲ್ನಲ್ಲಿ ದೊಡ್ಡ ಸ್ಟೆಬಿಲೈಜರ್, ಹಿಂಭಾಗದಲ್ಲಿ ಗಟ್ಟಿಯಾದ ಆಕ್ಸಲ್ ಲೊಕೇಟಿಂಗ್ ಮೌಂಟ್ಸ್, ಮುಂಭಾಗದಲ್ಲಿ ಕಟ್ಟುನಿಟ್ಟಿನ ಜೋಡಣೆ ರಾಡ್ಗಳು ಮತ್ತು ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಈ ಹೊಸ ಪೊಲೊ ಜಿಟಿಐ ಮೊದಲ ಬಾರಿಗೆ ಫೋಕ್ಸ್‌ವ್ಯಾಗನ್‌ನ ಟ್ರಾವೆಲ್ ಅಸಿಸ್ಟ್ ಸಿಸ್ಟಂ ಅನ್ನು ಪಡೆಯುತ್ತದೆ. ಇದು ಲೇನ್ ಅಸಿಸ್ಟ್, ಸೈಡ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ಟ್ರಾಫಿಕ್ ಅಲರ್ಟ್ ಅನ್ನು ಒಳಗೊಂಡಿದೆ. ಈ2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿರುವ ಗಾಲ್ಫ್ ಮತ್ತು ಐಡಿ 3 ಮಾದರಿಗಳಂತೆಯೇ ಹಾಟ್ ಹ್ಯಾಚ್ ವೋಕ್ಸ್‌ವ್ಯಾಗನ್‌ನ ಹೊಸ ‘ಡಿಜಿಟಲ್ ಕಾಕ್‌ಪಿಟ್' ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಇದರೊಂದಿಗೆ ಡಿಸ್ಕವರ್ ಮತ್ತು ಡಿಸ್ಕವರ್ ಪ್ರೊ ಮೀಡಿಯಾ ಸಿಸ್ಟಂಗಳನ್ನು ಒಳಗೊಂಡಿವೆ. ಪೀಚರ್ಸ್ ಗಳ ಪಟ್ಟಿಯಲ್ಲಿ ಬೀಟ್ಸ್ ಸೌಂಡ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್, ವಾಯ್ಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್ (ಸ್ಟ್ಯಾಂಡರ್ಡ್),ಆಟೋಮ್ಯಾಟಿಕ್ ಪೋಸ್ಟ್-ಡಿಕ್ಕಿ ಬ್ರೇಕಿಂಗ್, ಡ್ರೈವರ್ ಅಲರ್ಟ್ ಸಿಸ್ಟಂ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ.

ಭಾರತದಲ್ಲಿ Volkswagen Polo, Vento ಕಾರುಗಳ ಕಾಯುವಿಕೆ ಅವಧಿ 5 ತಿಂಗಳಿಗೆ ಏರಿಕೆ

ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಝ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಮಾರಾಟವನ್ನು ಹೆಚ್ಚಿಸಲು ಪೊಲೊ ಮತ್ತು ವೆಂಟೊ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

Most Read Articles

Kannada
English summary
Volkswagen polo and vento models waiting period reach 5 months details
Story first published: Monday, September 20, 2021, 12:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X